ಹೊಸನಗರ: ಬಿಜೆಪಿ ಮುಖಂಡ ಹಾಲಗದ್ದೆ ಉಮೇಶ್ ನೇತೃತ್ವದ ತಂಡ ಪಟ್ಟಣದ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಅಡ್ಡಾಡುವ ಬೀಡಾಡಿ ದನಗಳ ಕೊರಳಿಗೆ ರೇಡಿಯಂ ಪಟ್ಟಿ ಕಟ್ಟುವ ಕಾರ್ಯಕ್ಕೆ ಈಚೆಗೆ ಚಾಲನೆ ನೀಡಿತು.

ಹೊಸನಗರ ಪಟ್ಟಣ ವ್ಯಾಪ್ತಿಯಲ್ಲಿ ಬೀಡಾಡಿ ದನಗಳು ಹಾಗೂ ವಾಹನಗಳ ನಡುವೆ ಅಪಘಾತಗಳು ಸಂಭವಿಸುತ್ತಿವೆ. ದನಗಳಿಗೆ ಈ ರೀತಿಯ ರೇಡಿಯಂ ಬೆಲ್ಟ್ ಕಟ್ಟುವುದರಿಂದ ರಸ್ತೆ ಅಪಘಾತಗಳನ್ನು ಆದಷ್ಟೂ ತಪ್ಪಿಸುವ ಯತ್ನ ಮಾಡುತ್ತಿದ್ದೇವೆ ಎಂದು ಹಾಲಗದ್ದೆ ಉಮೇಶ್ ಹೇಳಿದರು.

ರಾತ್ರಿ ವೇಳೆ ರಸ್ತೆಯುದ್ದಕ್ಕೂ ಬೀಡಾಡಿ ದನಗಳು ಮಲಗಿರುತ್ತವೆ. ಮಂಗಳೂರು, ಕೊಲ್ಲೂರು, ಸಿಗಂದೂರು ಮತ್ತಿತರ ಪ್ರಮುಖ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ನಿತ್ಯ ನೂರಾರು ವಾಹನಗಳು ಓಡಾಡುತ್ತವೆ. ನಮ್ಮ ಈ ಪ್ರಯತ್ನದಿಂದ, ಜಾನುವಾರುಗಳನ್ನು ಗುರುತಿಸಲು ವಾಹನ ಸವಾರರಿಗೂ ನೆರವಾಗುತ್ತದೆ ಎಂದು ವಿವರಿಸಿದರು.

ಬಿಜೆಪಿ ಪ್ರಮುಖರಾದ ಮಹೇಂದ್ರ, ಆಟೋ ಕುಮಾರ್, ಕಾರ್ತಿಕ್ ಭಂಡಾರಿ, ಪಾನಿಪುರಿ ಸುಭಾಷ್, ಸುಮಿತ್, ಪವನ್, ನಿರಂಜನ್, ಶಶಾಂಕ್, ನಾಗರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.