ಹೊಸನಗರ: ತಾಲ್ಲೂಕಿನಲ್ಲಿ ಮೂರು ದಿನಗಳಿಂದ ಮಳೆ ಚುರುಕು ಕಂಡಿದ್ದು, ಭಾನುವಾರವೂ ಉತ್ತಮ ಮಳೆಯಾಗಿದೆ.
ತಾಲ್ಲೂಕಿನ ನಗರ ಹೋಬಳಿ ವ್ಯಾಪ್ತಿಯಲ್ಲಿ ಮಳೆ ಬಿರುಸಾಗಿದೆ. ಹುಂಚಾ, ಕಸಬಾ ಹೋಬಳಿಯಲ್ಲಿ ಸಾಧಾರಣ ವರ್ಷಧಾರೆಯಾಗಿದೆ. ಕೆರೆಹಳ್ಳಿ ಹೋಬಳಿ ಪ್ರದೇಶದಲ್ಲಿ ತುಂತುರು ಮಳೆಯಾಗಿದೆ.
ನಗರ ಹೋಬಳಿಯ ಜಲಾನಯನ ಪ್ರದೇಶದಲ್ಲಿ ಮಳೆ ವ್ಯಾಪಕವಾಗಿದೆ. ಮಂಜುಗಟ್ಟಿದ ವಾತಾವರಣ ಇದ್ದು, ಶೀತಗಾಳಿ ಬೀಸುತ್ತಿದೆ.
ತಾಲ್ಲೂಕಿನ ಜಲಾಶಯ ಪ್ರದೇಶದಲ್ಲಿ ಉತ್ತಮ ಮಳೆ ಆಗುತ್ತಿದೆ. ಸಾವೇಹಕ್ಕಲು 14.4 ಸೆಂ.ಮೀ., ಚಕ್ರಾ 10.4 ಸೆಂ.ಮೀ., ಮಾಸ್ತಿಕಟ್ಟೆ 11 ಸೆಂ.ಮೀ., ಹುಲಿಕಲ್ 12.1 ಸೆಂ.ಮೀ., ಯಡೂರು 7 ಸೆಂ.ಮೀ, ಮಾಣಿ 7 ಸೆಂ.ಮೀ ಮಳೆ ಆಗಿದೆ.
ಮೂರು ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ರೈತರು ಸಂತಸಗೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.