ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಭತ್ತದ ಖರೀದಿ ಕೇಂದ್ರ ಆರಂಭಕ್ಕೆ ರೈತಸಂಘ ಒತ್ತಾಯ

Last Updated 12 ಮೇ 2020, 10:33 IST
ಅಕ್ಷರ ಗಾತ್ರ

ಶಿವಮೊಗ್ಗ: ಭತ್ತದ ಬೆಳೆಗೆ ಕೇಂದ್ರಸರ್ಕಾರಘೋಷಿಸಿರುವ ಬೆಂಬಲ ಬೆಲೆಯ ಜತೆಗೆ ರಾಜ್ಯಸರ್ಕಾರವೂ ವಿಶೇಷಪ್ರೋತ್ಸಾಹಧನನೀಡಿರೈತರಿಂದ ನೇರವಾಗಿ ಭತ್ತ ಖರೀದಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಮಂಗಳವಾರಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಜಿಲ್ಲೆಯಲ್ಲೂ ರೈತರು ಬೆಳೆದ ಭತ್ತ ಕಟಾವಿಗೆ ಬಂದಿದೆ.ಕೊರೊನಾ ನಿರ್ಬಂಧಗಳ ಕಾರಣಇಡೀ ಕೃಷಿ ಕ್ಷೇತ್ರ ಸಂಕಷ್ಟದಲ್ಲಿದೆ.ಮಾರುಕಟ್ಟೆಯಿಲ್ಲದೇ ರೈತರು ಕಂಗಾಲಾಗಿದ್ದಾರೆ. ಭತ್ತ ಖರೀದಿಆರಂಭ ಎದುರು ನೋಡುತ್ತಿದ್ದಾರೆ. ಇಂತಹಸಮಯದಲ್ಲಿಕೇಂದ್ರ ಮತ್ತು ರಾಜ್ಯಸರ್ಕಾರಗಳುರೈತರ ನೆರವಿಗೆ ಬರಬೇಕು ಎಂದು ಸಂಘದ ಮುಖಂಡ ಕೆ.ಟಿ.ಗಂಗಾಧರ್ ಒತ್ತಾಯಿಸಿದರು.

ಈಗಾಗಲೇ ಕೇಂದ್ರ ಸರ್ಕಾರ ಭತ್ತಕ್ಕೆ ಬೆಂಬಲ ಬೆಲೆ ಘೋಷಿಸಿದೆ. ಈ ಬೆಂಬಲ ಬೆಲೆ ಉತ್ಪಾದನಾ ವೆಚ್ಚಕ್ಕೂ ಸಮವಾಗುವುದಿಲ್ಲ. ರಾಜ್ಯಸರ್ಕಾರಕೇಂದ್ರದ ಬೆಂಬಲ ಬೆಲೆಯ ಜತೆಗೆ ₨ 200 ವಿಶೇಷಪ್ರೋತ್ಸಾಹಧನಘೋಷಿಸಬೇಕು. ತಕ್ಷಣವೇ ಖರೀದಿ ಕೇಂದ್ರ ಸ್ಥಾಪಿಸಬೇಕು ಎಂದುಆಗ್ರಹಿಸಿದರು.

ಕಟಾವಿಗೆ ಬಂದ ಭತ್ತ ಕೊಯ್ಲು ಮಾಡಲು ಯಂತ್ರಗಳು ಬಂದಿವೆ. ರೈತರ ಸಂಕಷ್ಟದಸನ್ನಿವೇಶವನ್ನುಕಟಾವು ಯಂತ್ರದ ಮಾಲೀಕರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.ಹೆಚ್ಚಿಗೆ ದರ ವಸೂಲಿ ಮಾಡುತ್ತಿದ್ದಾರೆ.ಜಿಲ್ಲಾಡಳಿತ ಮಧ್ಯ ಪ್ರವೇಶಿಸಬೇಕು. ನ್ಯಾಯಯುತ ದರ ನಿಗದಿ ಮಾಡಬೇಕು ಎಂದು ಕೋರಿದರು.

ಇದೇಸಮಯದಲ್ಲಿರೈತ ಸಂಘದ ಕಾರ್ಯಕರ್ತರು ‘ವೈರಸ್ಎದುರಿಸುತ್ತಲೇಧೈರ್ಯವಾಗಿ ಬದುಕು ಕಟ್ಟಿಕೊಳ್ಳೋಣ,ಸರ್ಕಾರಆದೇಶಗಳನ್ನು ಪಾಲಿಸೋಣ, ಅಂತರ ಕಾಪಾಡಿಕೊಳ್ಳೋಣ’ ಎಂದು ಪ್ರಮಾಣ ವಚನ ಸ್ವೀಕರಿಸಿದರು.

ಸಂಘದ ಮುಖಂಡರಾದ ವೀರೇಶ್, ಯಶವಂತರಾವ್ ಘೋರ್ಪಡೆ, ಹಿರಿಯಣ್ಣಯ್ಯ, ಶರಶ್ಚಂದ್ರ, ಜಗದೀಶ್ ನಾಯ್ಕ, ಕೆ.ಎಸ್.ಪುಟ್ಟಪ್ಪ, ಸಣ್ಣರಂಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT