ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರ ಗಂಗಾಮತ ಸಮುದಾಯ ಭವನ: ಹಾಲಪ್ಪ

ಶಾಸಕ ಎಚ್. ಹಾಲಪ್ಪ ಹರತಾಳು ಭರವಸೆ
Last Updated 22 ಜನವರಿ 2022, 4:16 IST
ಅಕ್ಷರ ಗಾತ್ರ

ಆನಂದಪುರ: ಭಿನ್ನ ವ್ಯಕ್ತಿತ್ವ ಹೊಂದಿದ್ದ ಅಂಬಿಗರ ಚೌಡಯ್ಯ ನೇರ ನುಡಿಗಳಿಂದ ಸಮಾಜವನ್ನು ತಿದ್ದುವ ಕೆಲಸವನ್ನು ಮಾಡಿದ್ದರು ಎಂದು ಶಾಸಕ ಎಚ್. ಹಾಲಪ್ಪ ಹರತಾಳು ಹೇಳಿದರು.

ಸಮೀಪದ ಲಕ್ಕವಳ್ಳಿಯಲ್ಲಿ ನಡೆದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಂಬಿಗರ ಚೌಡಯ್ಯ ಅನುಭವ ಮಂಟಪದಲ್ಲೇ ಮೊದಲ ಶಾಸನಸಭೆ ನಡೆಸುವ ಮೂಲಕ ಸಮಾಜದ ಏಳಿಗೆಗೆ ಶ್ರಮಪಟ್ಟಿದ್ದರು. ಇವರ ನೇರ ನುಡಿಗಳಿಂದಲೇ ನಿಜಶರಣ ನಾಮಾಂಕಿತವನ್ನು ಪಡೆದುಕೊಂಡಿದ್ದಾರೆ. ನಿಷ್ಠುರವಾದ ಪದಗಳಿಂದಲೇ ಸಮಾಜದ ಡೊಂಕನ್ನು ತೋರಿಸಿದ್ದಾರೆ ಎಂದರು.

ಗಂಗಾಮತ ಸಮಾಜದ ಸಭಾ ಭವನವನ್ನು ₹ 30 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.

ಲಕ್ಕವಳ್ಳಿಯ ದೇವೇಂದ್ರಪ್ಪಅಧ್ಯಕ್ಷತೆ ವಹಿಸಿದ್ದರು. ಶಿವಮೊಗ್ಗದ ಮೇಯರ್ ಸುನಿತಾ ಅಣ್ಣಪ್ಪ, ಸಾಗರ ನಗರಸಭೆಯ ಅಧ್ಯಕ್ಷೆ ಮಧುರಾ ಶಿವಾನಂದ್, ಆಚಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ಗಣೇಶ್, ಗಂಗಾಮತ ಸಮಾಜದ ಜಿಲ್ಲಾಧ್ಯಕ್ಷ ಕೆಂಚಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ವೀರೇಶ್ ಆಲವಳ್ಳಿ, ರವಿಕುಮಾರ್ ಯಡೇಹಳ್ಳಿ, ವೀಣಾ ರಾಜೇಶ್, ರೇವಪ್ಪ, ಅರುಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT