ಪ್ರಜಾವಾಣಿ ವಾರ್ತೆ

ರಿಪ್ಪನ್ಪೇಟೆ: ಗ್ರಾಮೀಣ ಕ್ರೀಡಾಪಟುಗಳ ಹೆಮ್ಮೆಯ ವಾಲಿಬಾಲ್ ತರಬೇತುದಾರ ಹಾಗೂ ರಾಷ್ಟ್ರಮಟ್ಟದ ಆಟಗಾರ ಬಿಜೂ ಮಾರ್ಕೋಸ್ (56) ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ತಡರಾತ್ರಿ ನಿಧನರಾದರು.

ಮೂಲತಃ ಕೇರಳದವರಾದ ಇವರು, ಅಲ್ಲಿನ ವಿಶ್ವವಿದ್ಯಾಲಯದ ರಾಷ್ಟಮಟ್ಟದಲ್ಲಿ ವಾಲಿಬಾಲ್ ಆಡಿದ್ದರು. 1996 -97ರಲ್ಲಿ ರಿಪ್ಪನ್ಪೇಟೆಗೆ ತಮ್ಮ ಕುಟುಂಬದೊಂದಿಗೆ ವಲಸೆ ಬಂದು ಬಾಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾಲುಗುಡ್ಡೆ ಗ್ರಾಮದಲ್ಲಿ ನೆಲೆಸಿದ್ದರು.

ಹೊಸನಗರ ತಾಲೂಕಿನಾದ್ಯಂತ ಗ್ರಾಮೀಣ ಭಾಗದ ಯುವಕರಲ್ಲಿ ವಾಲಿಬಾಲ್ ಕ್ರೀಡಾಸಕ್ತಿ ಬೆಳೆಸುವ ಮೂಲಕ ಅನೇಕ ರಾಷ್ಟಮಟ್ಟದ ಕ್ರೀಡಾಪಟುಗಳನ್ನು ಹುಟ್ಟು ಹಾಕಿದ ಇವರು, ರಿಪ್ಪನ್ಪೇಟೆಯಲ್ಲಿ ಯೂನಿಯನ್ ಕ್ಲಬ್ ಮೂಲಕ ರಾಜ್ಯದಾದ್ಯಂತ ಪಂದ್ಯಗಳನ್ನು ಗೆಲ್ಲಿಸಿಕೊಡುವ ಜಾಣ್ಮೆ ಹೊಂದಿದ್ದ ಅಪ್ರತಿಮ ಆಟಗಾರರಾಗಿದ್ದರು.

ಮೃತರಿಗೆ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ. ರಿಪ್ಪನ್ ಪೇಟೆಯ ಗುಡ್ ಶಫರ್ಡ್ ಆವರಣದಲ್ಲಿ ಮಂಗಳವಾರ ಅಂತ್ಯಕ್ರಿಯೆ ನೆರವೇರಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.