ಶಿವಮೊಗ್ಗ: ಸಿಪ್ಪೆಗೋಟು ಅಡಿಕೆ ಖರೀದಿಗೆ ತೆರಳಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ₹5 ಲಕ್ಷ ದರೋಡೆ ಮಾಡಿದ್ದ ಐವರನ್ನು ಇಲ್ಲಿನ ತುಂಗಾನಗರ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಶಿವಮೊಗ್ಗದ ಗೋಪಾಳದ ನಿವಾಸಿ ಮಂಜನಾಯ್ಕ (35), ಶಿಕಾರಿಪುರ ಪಟ್ಟಣದ ಆಸೀಫ್ ವುಲ್ಲಾ (32), ಶಿವಮೊಗ್ಗ ತಾಲ್ಲೂಕಿನ ಕೊನಗವಳ್ಳಿಯ ಗಣೇಶ್ ನಾಯ್ಕ (28), ಟ್ಯಾಂಕ್ ಮೊಹಲ್ಲಾ ನಿವಾಸಿ ದಾವಲ್ ಬಡಗಿ (35) ಆರ್ಎಲ್ಎಂ ನಗರದ ನಿವಾಸಿ ರಿಜ್ವಾನ್ ಅಹ್ಮದ್ (48) ಬಂಧಿತರು.

ಆರೋಪಿಗಳಿಂದ ₹3.15 ಲಕ್ಷ ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ ಮೂರು ಬೈಕ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ವಿವರ: ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನ ಸುರೇಶ್ಕುಮಾರ್ ಅವರು ಕಳೆದ ಫೆಬ್ರುವರಿ 6ರಂದು ಸ್ನೇಹಿತ ಸಂತೋಷ್ ಜೊತೆ ಶಿವಮೊಗ್ಗದ ಕಿಮ್ಮನೆ ರೆಸಾರ್ಟ್ಗೆ ಹೋಗುವ ದಾರಿಯಲ್ಲಿ ಹೋದಾಗ ಅಪರಿಚಿತ ವ್ಯಕ್ತಿಗಳು ಇವರ ಮೇಲೆ ಹಲ್ಲೆ ಮಾಡಿ, ₹5 ಲಕ್ಷ ಹಣವನ್ನು ದರೋಡೆ ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ತುಂಗಾ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆಗೆ ಎಸ್ಪಿ ಜಿ.ಕೆ.ಮಿಥುನ್ಕುಮಾರ್ ಅವರು ತುಂಗಾನಗರ ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.