ಸಾಗರ: ನೇರ ನಡೆ, ನಿಷ್ಟುರ ವ್ಯಕ್ತಿತ್ವ, ನಂಬಿದ ಸಿದ್ಧಾಂತದೊಂದಿಗೆ ರಾಜಿ ಆಗದ ಮನೋಭಾವ ಹೊಂದಿದ್ದ ಎಸ್.ಎಸ್.ನಾಗರಾಜ್ ಅವರ ನಿಧನದೊಂದಿಗೆ ಇಲ್ಲಿನ ಜನಪರ ಹೋರಾಟದ ಕೊಂಡಿ ಕಳಚಿದಂತಾಗಿದೆ.

ಸಿಗರೇಟ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಕಾರಣಕ್ಕೆ ‘ಸಿಗರೇಟ್ ನಾಗರಾಜ್’ ಎಂದೇ ಪರಿಚಿತರಾಗಿದ್ದ ಇವರು, ದಲಿತ ಸಂಘಟನೆಗಳ ಜೊತೆ ಗುರುತಿಸಿಕೊಂಡಿದ್ದರು. 1980ರ ದಶಕದಲ್ಲಿ ಬಿ.ಕೃಷ್ಣಪ್ಪ ಅವರು ಆರಂಭಿಸಿದ ದಲಿತ ಚಳವಳಿಯಿಂದ ಪ್ರಭಾವಿತರಾಗಿ, 1981ರ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ‘ಯಾರಿಗೆ ಬಂತು, ಎಲ್ಲಿಗೆ ಬಂತು 47 ರ ಸ್ವಾತಂತ್ರ್ಯ?’ ಎಂಬ ಘೋಷಣೆ ಕೂಗಿ ಸಮಾನ ಮನಸ್ಕ ಯುವಕರೊಂದಿಗೆ ಜೈಲು ಸೇರಿದ್ದರು.

1985ರಲ್ಲಿ ಚಂದ್ರಗುತ್ತಿಯಲ್ಲಿ ಬೆತ್ತಲೆ ಸೇವೆ ವಿರೋಧಿಸಿ ಇಲ್ಲಿಂದ ತಂಡ ಕರೆದೊಯ್ದಿದ್ದ ನಾಗರಾಜ್, ಮರು ವರ್ಷವೂ ಅಲ್ಲಿ ನಡೆದ ಪ್ರತಿಭಟನೆಯಲ್ಲಿ ಪತ್ನಿಯೊಂದಿಗೆ ಪಾಲ್ಗೊಂಡಿದ್ದರು.

ಇವರ ಹೋರಾಟದ ಫಲವಾಗಿ ಅಡಿಕೆ ಮಂಡಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕೂಲಿಯಲ್ಲಿ ಅಲ್ಪಮಟ್ಟಿನ ಏರಿಕೆ ಆಗಿತ್ತು. 80ರ ದಶಕದಲ್ಲಿ ಹಂದಿಗೋಡು ಗ್ರಾಮದಿಂದ ಸಾಗರಕ್ಕೆ ನಡೆಸಿದ ಪಾದಯಾತ್ರೆಯಿಂದ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಹಂದಿಗೋಡು ಕಾಯಿಲೆ ಸಂತ್ರಸ್ತರಿಗೆ ವಿಶೇಷ ಚಿಕಿತ್ಸಾ ಘಟಕ ಆರಂಭವಾಯಿತು.

ಇಲ್ಲಿನ ಗಾಂಧಿನಗರ ಬಡಾವಣೆಯಲ್ಲಿ ಸಂಗೊಳ್ಳಿ ರಾಯಣ್ಣ ಮೈದಾನ ಉಳಿಸಿಕೊಳ್ಳುವಲ್ಲಿ ನಾಗರಾಜ್ ಪಾತ್ರ ಮಹತ್ವದ್ದು. ಪ್ರಭಾವಿ ರಾಜಕಾರಣಿ ಕಾಗೋಡು ತಿಮ್ಮಪ್ಪ ಅವರನ್ನೇ ಎದುರು ಹಾಕಿಕೊಳ್ಳಲು ಅಂದು ಇವರು ಹಿಂಜರಿದಿರಲಿಲ್ಲ. ನಂತರ ಕಾಗೋಡು ಮನವೊಲಿಸಿ ಇದೇ ಮೈದಾನದಲ್ಲಿ ಬಯಲು ರಂಗಮಂದಿರ ನಿರ್ಮಾಣವಾಗುವಂತೆ ನೋಡಿಕೊಂಡಿದ್ದರು.

1997ರಲ್ಲಿ ಪುರಸಭೆ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದ ಇವರು, ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ತಮ್ಮ ಮನೆಯಲ್ಲೇ ಊಟ, ವಸತಿ ವ್ಯವಸ್ಥೆ ಮಾಡಿದ್ದರು. ಅಂತರ್ಜಾತಿ ವಿವಾಹವಾಗುವವರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸುವಲ್ಲಿ ಉತ್ಸಾಹ ತೋರುತ್ತಿದ್ದರು. ಇಲ್ಲಿನ ಉದಯ ಕಲಾವಿದರು ರಂಗ ತಂಡದ ನಾಟಕಗಳಿಗೆ ಬಣ್ಣ ಹಚ್ಚಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-42-759108437

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.