ಸಾಗರ: ತಾಲ್ಲೂಕಿನ ಬೇಸೂರು ಗ್ರಾಮದಲ್ಲಿ ಪ್ರಸ್ತಾವಿತ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ವಿರೋಧಿಸಿ ಬುಧವಾರ ಬೇಸೂರು ಗ್ರಾಮದಿಂದ ಸಾಗರದ ಉಪವಿಭಾಗಾಧಿಕಾರಿ ಕಚೇರಿವರೆಗೆ 2 ಸಾವಿರಕ್ಕೂ ಹೆಚ್ಚು ಮಂದಿ ಸುಡು ಬಿಸಿಲನ್ನು ಲೆಕ್ಕಿಸದೆ ಪಾದಯಾತ್ರೆ ನಡೆಸಿದರು.

ಬೆಳಿಗ್ಗೆ 7ಕ್ಕೆ ಬೇಸೂರಿನ ಬಸವಣ್ಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ, ಹೊಸನಗರದ ಮಾಜಿ ಶಾಸಕ ಬಿ.ಸ್ವಾಮಿರಾವ್ ಪಾದಯಾತ್ರೆಗೆ ಚಾಲನೆ ನೀಡಿದರು.

ವೃದ್ಧರು, ಮಹಿಳೆಯರು, ಮಕ್ಕಳು ಸೇರಿದಂತೆ ವಿವಿಧ ವಯೋಮಾನದವರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು. ‘ಎರಡು ಬಾರಿ ಜಲ ವಿದ್ಯುತ್ ಯೋಜನೆಗಾಗಿ ತ್ಯಾಗ ಮಾಡಿರುವ ನಮ್ಮನ್ನು ಮತ್ತೊಮ್ಮೆ ಸಂತ್ರಸ್ತರನ್ನಾಗಿ ಮಾಡಬೇಡಿ’ ಎಂದು ಪಾದಯಾತ್ರೆಯುದ್ದಕ್ಕೂ ಪ್ರತಿಭಟನಕಾರರು ಘೋಷಣೆಗಳನ್ನು ಕೂಗಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೋಳೂರು, ಮೂರುಕೈ, ಗೆಣಸಿನಕುಣಿ, ಆವಿನಹಳ್ಳಿ, ಕಾಗೆಹಳ್ಳ, ಹೊಸೂರು, ಇಕ್ಕೇರಿ ಸರ್ಕಲ್ ಮಾರ್ಗವಾಗಿ ಸಾಗರ ನಗರ ಪ್ರವೇಶಿಸಿದ ಪಾದಯಾತ್ರೆ ಶಿವಪ್ಪನಾಯಕ ವೃತ್ತದ ಮೂಲಕ ಅಶೋಕ ರಸ್ತೆಗೆ ಸಾಗಿ ಸಾಗರ್ ಹೋಟೆಲ್ ವೃತ್ತದಲ್ಲಿ ಬಹಿರಂಗ ಸಭೆ ನಡೆಸಲಾಯಿತು.

‘ಅಣು ವಿದ್ಯುತ್ ಸ್ಥಾವರದ ಸ್ಥಾಪನೆ ವಿಷಯ ಮಲೆನಾಡಿಗೆ ಸುನಾಮಿಯಂತೆ ಅಪ್ಪಳಿಸಿದೆ. ಇದರಿಂದ ಆಘಾತಗೊಂಡಿರುವ ಇಲ್ಲಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಪಾದಯಾತ್ರೆ ನಡೆಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ಜನರ ಭಾವನೆಗಳಿಗೆ ಸ್ಪಂದಿಸಬೇಕು’ ಎಂದು ಆನಂದಪುರಂ ಮುರುಘಾಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

‘ಪಶ್ಚಿಮಘಟ್ಟ ಪ್ರದೇಶದಲ್ಲಿರುವ ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆಯಾದರೆ ಮನುಷ್ಯರಿಗೆ ಮಾತ್ರವಲ್ಲದೆ ಈ ಭಾಗದ ಅಪರೂಪದ ಜೀವವೈವಿಧ್ಯ, ವನ್ಯಜೀವಿ, ಜಲಚರಗಳಿಗೆ ಅಪಾಯ ಕಾದಿದೆ. ಜಾತಿ, ಪಕ್ಷ, ರಾಜಕಾರಣ ಮರೆತು ಸ್ಥಾವರ ಸ್ಥಾಪನೆ ವಿರುದ್ಧ ಹೋರಾಟ ಮುಂದುವರಿಯಬೇಕು’ ಎಂದು ಮೂಲೆಗದ್ದೆ ಮಠದ ಶ್ರೀಗಳು ಹೇಳಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ‘ಫೆಬ್ರುವರಿ ಮೊದಲ ವಾರದಲ್ಲಿ ರಾಜ್ಯ ಸರ್ಕಾರ ವಿಡಿಯೊ ಕಾನ್ಫರೆನ್ಸ್ ಮೂಲಕ ರಾಜ್ಯದ ವಿವಿಧೆಡೆ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಲಭ್ಯವಿರುವ ಭೂಮಿಯ ವಿವರವನ್ನು ಕೇಳಲಾಗಿತ್ತು. ಆ ಪ್ರಕಾರ ಇಲ್ಲಿ ಲಭ್ಯವಿರುವ ಭೂಮಿಯ ಸ್ವರೂಪದ ವಿವರ ನೀಡಲಾಗಿದೆ ಹೊರತು ಸ್ಥಾವರ ಸ್ಥಾಪನೆಗೆ ಯಾವುದೇ ಪ್ರಸ್ತಾವ ಸದ್ಯಕ್ಕೆ ಸರ್ಕಾರದಿಂದ ಬಂದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಮಲೆನಾಡು ಅಣು ವಿದ್ಯುತ್ ಸ್ಥಾವರ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಎ.ಇಂದೂಧರ ಗೌಡ, ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಪ್ರಮುಖರಾದ ದಿನೇಶ್ ಶಿರವಾಳ, ತೀ.ನ.ಶ್ರೀನಿವಾಸ್, ಮಲ್ಲಿಕಾರ್ಜುನ ಹಕ್ರೆ, ಪ್ರಸನ್ನ ಕೆರೆಕೈ, ಕಲಸೆ ಚಂದ್ರಪ್ಪ, ಶಿವಾನಂದ ಗೌಡ, ಅಖಿಲೇಶ್ ಚಿಪ್ಪಳಿ, ಸೀತಾರಾಮ್ ಕುರುವರಿ, ನಾಗೇಂದ್ರ ಸಾಗರ್, ರವಿಕುಮಾರ್ ಗೌಡ, ವಸುಧಾ ಶರ್ಮ, ಜಿ.ಟಿ.ಸತ್ಯನಾರಾಯಣ, ಜ್ಯೋತಿ, ಪ್ರಿಯಾಂಕಾ, ನಾಗರತ್ನಾ, ರೂಪಾ, ಸುವರ್ಣ ಟೀಕಪ್ಪ, ವನಜಾಕ್ಷಿ, ಜಯಶ್ರೀ, ಸವಿತಾ, ಸುಮಿತ್ರಾ, ಉಮಾ, ರೇಷ್ಮಾ, ಸುಧಾ, ರಾಜೇಂದ್ರ ಆವಿನಹಳ್ಳಿ, ಮೈತ್ರಿ ಪಾಟೀಲ್, ಲೋಕೇಶ್ ಹುನಾಲುಮಡಿಕೆ, ಬಿ.ಟಿ.ರವೀಂದ್ರ, ಕೆ.ಎಸ್.ಪ್ರಶಾಂತ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-42-1003986935

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.