ಸಾಗರ: ಇಲ್ಲಿನ ಜೀವನ್ಮುಖಿ ಸಂಸ್ಥೆಯು ಚರಕ ಸಂಸ್ಥೆಯ ಸಹಯೋಗದೊಂದಿಗೆ ನೆಹರೂ ಮೈದಾನದಲ್ಲಿರುವ ಬ್ರಾಸಂ ಸಭಾಭವನದಲ್ಲಿ ಮೇ 30ರಂದು ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ 19ನೇ ‘ಅವ್ವ’ ಮಹಿಳಾ ಸಂತೆ ಆಯೋಜಿಸಿದೆ.

‘ಮಹಿಳಾ ಸಬಲೀಕರಣದ ಉದ್ದೇಶದಿಂದ ಗ್ರಾಮೀಣ ಭಾಗದ ಮಹಿಳೆಯರೇ ಸಿದ್ಧಪಡಿಸಿದ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ, ಆಹಾರ ಮೇಳವನ್ನು ಸಂತೆ ಒಳಗೊಂಡಿದೆ’ ಎಂದು ಜೀವನ್ಮುಖಿ ಸಂಸ್ಥೆಯ ಪ್ರಮುಖರಾದ ಎಂ.ವಿ.ಪ್ರತಿಭಾ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯದ ವಿವಿಧ ಭಾಗಗಳ 13ಕ್ಕೂ ಹೆಚ್ಚು ಮಹಿಳಾ ಕರಕುಶಲ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳು, ಚರಕದ ಕೈಮಗ್ಗ ಉತ್ಪನ್ನಗಳು, ಸ್ಥಳೀಯ ಸಾಂಪ್ರದಾಯಿಕ ವೈವಿಧ್ಯದ ತಿನಿಸುಗಳು ಸಂತೆಯಲ್ಲಿ ಲಭ್ಯವಿದೆ’ ಎಂದು ಹೇಳಿದರು.

‘ಇಕ್ರಾ ಸಂಸ್ಥೆಯ ಸಣ್ಣ ರೈತರು ಬೆಳೆದ ರಾಸಾಯನಿಕಮುಕ್ತ ದವಸ ಧಾನ್ಯಗಳನ್ನು ರೈತ ಮಹಿಳೆಯರೇ ಸಂತೆಯಲ್ಲಿ ಮಾರಾಟ ಮಾಡಲಿದ್ದಾರೆ. ಬಾಳೆ ನಾರಿನ ಉತ್ಪನ್ನ, ಮಣ್ಣಿನ ಆಕರ್ಷಕ ವಿನ್ಯಾಸದ ಆಭರಣ, ಪರಿಸರಸ್ನೇಹಿ ಅಲಂಕಾರಿಕ ಉತ್ಪನ್ನಗಳು, ನೈಸರ್ಗಿಕ ಪ್ರಸಾದನ ಸಾಮಗ್ರಿಗಳು ಸಂತೆಯಲ್ಲಿರುತ್ತವೆ’ ಎಂದು ತಿಳಿಸಿದರು.

‘ಮಲೆನಾಡಿನ ಮಹಿಳೆಯರು ತಯಾರಿಸಿದ ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ಚಿಪ್ಸ್, ಹಲಸು, ಮಾವಿನ ಖಾದ್ಯಗಳು, ಕೈಚೀಲ, ಬಗೆ ಬಗೆಯ ಹಾರಗಳು, ಪೂಜೆ, ಶುಭ ಕಾರ್ಯಗಳಿಗೆ ಬಳಸುವ ವಸ್ತುಗಳು ಸಂತೆಯಲ್ಲಿ ಲಭ್ಯ ಇರಲಿವೆ’ ಎಂದರು.

ಜೀವನ್ಮುಖಿ ಸಂಸ್ಥೆಯ ಜ್ಯೋತಿ, ಅರ್ಚನಾ, ಮಮತಾ, ವಿನುತಾ, ಸರೋಜಮ್ಮ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-42-1292868573

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.