ಸಾಗರ: ‘ವಾರದೊಳಗೆ ಪರಿಹಾರದ ಪ್ರಮಾಣ ಅಂತಿಮಗೊಳಿಸಿ ಮಾರ್ಕೆಟ್–ಸೊರಬ ರಸ್ತೆ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಉಪವಿಭಾಗಾಧಿಕಾರಿ ವೀರೇಶ್ ಕುಮಾರ್ ಸ್ಪಷ್ಟಪಡಿಸಿದರು.

ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಮಾರ್ಕೆಟ್ –ಸೊರಬ ರಸ್ತೆ ವಿಸ್ತರಣೆ ಸಂಬಂಧ ಮಂಗಳವಾರ ನಡೆದ ಸ್ಥಳೀಯ ನಿವಾಸಿಗಳು, ಅಧಿಕಾರಿಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

‘ರಸ್ತೆ ವಿಸ್ತರಣೆಯಿಂದ ಆಸ್ತಿ ಕಳೆದುಕೊಳ್ಳುವವರಿಗೆ ಖಾಲಿ ಜಾಗಕ್ಕೆ ಚದರಡಿಗೆ ₹5,594, ಕಟ್ಟಡಕ್ಕೆ ₹ 6,993 ಪರಿಹಾರವನ್ನು ಸರ್ಕಾರ ಪ್ರಸ್ತುತ ಮಾನದಂಡಗಳ ಪ್ರಕಾರ ನಿಗದಿಪಡಿಸಿದೆ. ಸ್ಥಳೀಯರು ಚದರಡಿಗೆ ₹ 8,000 ಪರಿಹಾರದ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಪರಿಹಾರದ ವಿಷಯದಲ್ಲಿ ಬದಲಾವಣೆಯಾದರೆ ಸ್ಥಳೀಯರಿಗೆ ಮಾಹಿತಿ ನೀಡಲಾಗುವುದು. ಇಲ್ಲದಿದ್ದಲ್ಲಿ ಕಾನೂನಿನ ನಿಯಮಗಳ ಪ್ರಕಾರ ವಿಸ್ತರಣೆ ಕಾರ್ಯ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ರಸ್ತೆ ವಿಸ್ತರಣೆಯಿಂದ ಆಸ್ತಿ ಕಳೆದುಕೊಳ್ಳುವವರು ಪರಿಹಾರ ಪಡೆದ ನಂತರ ಅವರಿಗೆ ದೊರೆತ ಪರಿಹಾರ ನ್ಯಾಯಯುತವಾಗಿಲ್ಲ ಅಂತಾದರೆ ಅದನ್ನು ಸಕ್ಷಮ ಪ್ರಾಧಿಕಾರದ ಎದುರು ನಿಗದಿತ ಕಾಲಾವಧಿಯೊಳಗೆ ಪ್ರಶ್ನಿಸಿ ಹೆಚ್ಚಿನ ಪರಿಹಾರ ಪಡೆಯಲು ಅವಕಾಶವಿದೆ. ಹೀಗಾಗಿ ಸ್ಥಳೀಯರು ವಿಸ್ತರಣೆ ಕಾರ್ಯಕ್ಕೆ ತಾಲ್ಲೂಕು ಆಡಳಿತದೊಂದಿಗೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

‘ಸರ್ಕಾರ ಈಗ ಪರಿಹಾರದ ಪ್ರಮಾಣವನ್ನು 2019ನೇ ಸಾಲಿನ ಆಸ್ತಿಯ ಮಾರುಕಟ್ಟೆ ದರದ ಆಧಾರದ ಮೇಲೆ ನಿಗದಿಪಡಿಸಿದೆ. 2023ನೇ ಸಾಲಿನ ಮಾರುಕಟ್ಟೆ ದರವನ್ನು ಆಧರಿಸಿ ಪರಿಹಾರ ನಿಗದಿಗೊಳಿಸಿದರೆ ನಮಗೆ ನ್ಯಾಯಯುತ ಪರಿಹಾರ ದೊರಕುತ್ತದೆ’ ಎಂದು ಸ್ಥಳೀಯ ನಿವಾಸಿಗಳು ಪ್ರತಿಪಾದಿಸಿದರು.

‘ಮಾರ್ಕೆಟ್– ಸೊರಬ ರಸ್ತೆಯಲ್ಲಿರುವ ಎಲ್ಲ ಆಸ್ತಿಗಳಿಗೂ ಒಂದೇ ಸಮನಾದ ಪರಿಹಾರದ ಪ್ರಮಾಣವನ್ನು ನಿಗದಿಗೊಳಿಸುವುದು ಸರಿಯಾದ ಕ್ರಮವಲ್ಲ. ಕೆಲವು ಆಸ್ತಿಗಳು ವಾಣಿಜ್ಯ ಸ್ವರೂಪ ಹೊಂದಿದ್ದು, ಪ್ರಮುಖ ಸ್ಥಳಗಳಲ್ಲಿವೆ. ಇಂತಹ ಆಸ್ತಿಗಳಿಗೆ ಹೆಚ್ಚಿನ ಪರಿಹಾರ ನೀಡಬೇಕು’ ಎಂದು ಸ್ಥಳೀಯರು ಒತ್ತಾಯಿಸಿದರು.

‘ಸರ್ಕಾರ ಇಂತಿಷ್ಟೇ ಪರಿಹಾರದ ಪ್ರಮಾಣ ಎಂದು ನಿಗದಿಗೊಳಿಸಿರುವುದಾಗಿ ಹೇಳುವ ಬದಲು ಇದೊಂದು ವಿಶೇಷ ಪ್ರಕರಣ ಎಂದು ವರದಿ ಸಲ್ಲಿಸಿ ಆಸ್ತಿ ಕಳೆದುಕೊಳ್ಳುವವರಿಗೆ ಹೆಚ್ಚಿನ ಪರಿಹಾರ ದೊರಕುವಂತೆ ನೋಡಿಕೊಳ್ಳಬೇಕು’ ಎಂದು ಸ್ಥಳೀಯರು ಮನವಿ ಮಾಡಿದರು.

‘ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ಪರಿಹಾರವನ್ನು ನೀಡುವ ಅಧಿಕಾರ ನಮಗಿಲ್ಲ. ಆ ರೀತಿ ಮಾಡಿದರೆ ನಂತರ ನಮ್ಮ ಸಂಬಳ ಕಡಿತಗೊಳಿಸಲಾಗುತ್ತದೆ. ನಿಗದಿತ ಪರಿಹಾರವನ್ನು ಒಪ್ಪಿಕೊಳ್ಳದಿದ್ದರೆ ಭೂ ಸ್ವಾಧೀನ ಕಾಯ್ದೆ ಪ್ರಕಾರ ಪರಿಹಾರದ ಹಣವನ್ನು ನ್ಯಾಯಾಲಯಕ್ಕೆ ಜಮಾ ಮಾಡಿ ವಿಸ್ತರಣೆ ಕಾರ್ಯ ಕೈಗೊಳ್ಳಲಾಗುವುದು’ ಎಂದು ಉಪವಿಭಾಗಾಧಿಕಾರಿ ಮಾಹಿತಿ ನೀಡಿದರು.

ತಹಶೀಲ್ದಾರ್ ಪ್ರದೀಪ್, ನಗರಸಭೆ ಪೌರಾಯುಕ್ತ ಎಚ್.ಕೆ.ನಾಗಪ್ಪ, ಜಿಲ್ಲಾಧಿಕಾರಿ ಕಚೇರಿಯ ಅರವಿಂದ್, ಶಾಸಕರ ವಿಶೇಷ ಕರ್ತವ್ಯಾಧಿಕಾರಿ ಟಿ.ಪಿ.ರಮೇಶ್, ಸ್ಥಳೀಯ ನಿವಾಸಿಗಳಾದ ಯು.ಜೆ.ಮಲ್ಲಿಕಾರ್ಜುನ, ವೀರೇಂದ್ರ ಜೈನ್, ಯು.ಸಿ.ಸಿದ್ದಲಿಂಗೇಶ್, ಸಂತೋಷ್ ಕುಮಾರ್, ಆರ್.ಪಿ.ಮಧುಸೂದನ್, ಅಶೋಕ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-42-1322295189

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.