ಸಾಗರ: ಈ ಭಾಗದ ಜನಜೀವನ, ಅರಣ್ಯ, ನದಿ, ವನ್ಯಜೀವಿಗಳಿಗೆ ಸಂಚಕಾರ ತರುವ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಪರಿಸರ ಕಾರ್ಯಕರ್ತ ಅಖಿಲೇಶ್ ಚಿಪ್ಪಳಿ ಒತ್ತಾಯಿಸಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಅಣು ವಿದ್ಯುತ್ ಸ್ಥಾವರವು ಅಪಾರ ಪ್ರಮಾಣದ ಸಿಹಿ ನೀರನ್ನು ಬೇಡುವ, ದುಬಾರಿಯಾದ, ದೀರ್ಘಕಾಲೀನ ನಿರ್ಮಾಣ ಸಮಯ ಅಗತ್ಯವಿರುವ, ನಿರಂತರವಾಗಿ ಉಷ್ಣವನ್ನು ಹೊರಹಾಕುವ, ಅಪಾಯಕಾರಿಯಾದ ವಿಕಿರಣ ತ್ಯಾಜ್ಯವನ್ನು ಕಕ್ಕುವ ಘಟಕವಾಗಿದೆ. ಇಂತಹ ಅಪಾಯಕಾರಿ ಘಟಕ ಇಲ್ಲಿಗೆ ಬರಬಾರದು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸ್ಥಾವರದ ಘಟಕ ಸಾವಿರಾರು ವರ್ಷಗಳವರೆಗೆ ವಿಕಿರಣ ಸೂಸುತ್ತ ಸಕಲ ಜೀವ ಕೋಟಿಗೆ ಅಪಾಯವನ್ನು ತರುತ್ತದೆ. ಸ್ಥಾವರದಲ್ಲಿ ಆಗುವ ಒಂದು ಕ್ಷಣದ ನಿರ್ಲಕ್ಷ್ಯ ಅಥವಾ ತಾಂತ್ರಿಕ ವೈಫಲ್ಯ ನೂರಾರು ಚ.ಕಿ.ಮೀ ದೂರದ ಮಣ್ಣು, ನೀರು, ಗಾಳಿಯನ್ನು ವಿಷಮಯಗೊಳಿಸುತ್ತದೆ. ಜನರ ದೇಹದಲ್ಲಿ ಕ್ಯಾನ್ಸರ್, ಹುಟ್ಟುವ ಮಕ್ಕಳಲ್ಲಿ ಜನನ ದೋಷ, ಕೃಷಿಯಲ್ಲಿ ಉತ್ಪಾದನಾ ಕುಸಿತಕ್ಕೆ ಕಾರಣವಾಗುವ ಮಾರಕ ಯೋಜನೆಯನ್ನು ಇಲ್ಲಿಗೆ ಬರಲು ಅವಕಾಶ ಮಾಡಿಕೊಡಬಾರದು ಎಂದು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-42-1221102184

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.