ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಪಂ ಮುಂದೆ ಸಾಗರ ತಾ.ಪಂ ಸದಸ್ಯರ ಹೈಡ್ರಾಮಾ

ಅಧ್ಯಕ್ಷ, ಕಾರ್ಯನಿರ್ವಹಣಾಧಿಕಾರಿ ಪರ– ವಿರುದ್ಧ ಪ್ರತಿಭಟನೆ
Last Updated 29 ಜುಲೈ 2020, 14:29 IST
ಅಕ್ಷರ ಗಾತ್ರ

ಶಿವಮೊಗ್ಗ: ಸಾಗರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹಾಗೂಕಾರ್ಯನಿರ್ವಹಣಾಧಿಕಾರಿಪರ–ವಿರುದ್ಧದ ಪ್ರತಿಭಟನೆಗಳಿಗೆ ಜಿಲ್ಲಾ ಪಂಚಾಯಿತಿ ಆವರಣ ಬುಧವಾರ ಸಾಕ್ಷಿಯಾಯಿತು.

ಸಾಗರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರ ಅಧಿಕಾರ ಮತ್ತು ಕರ್ತವ್ಯಗಳ ಹಕ್ಕುಚ್ಯುತಿ ಬಗ್ಗೆ ಪತ್ರ ಬರೆದಿದ್ದರೂ, ಇಒ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ತಾಲ್ಲೂಕು ಪಂಚಾಯಿತಿಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಹಾಗೂ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು.

ಅಧ್ಯಕ್ಷರು ಸಾಮಾನ್ಯ ಸಭೆ ನಡೆಸದೇ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ.ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾಗರ ತಾಲ್ಲೂಕು ಪಂಚಾಯಿತಿಯ ಕೆಲವು ಸದಸ್ಯರುಅದೇ ಸ್ಥಳದಲ್ಲಿ ಪ್ರತ್ಯೇಕ ಪ್ರತಿಭಟನೆ ನಡೆಸಿದರು.

ಹಕ್ರೆ ಮತ್ತು ಕಾಂಗ್ರೆಸ್ ವಾದ:

ತಾಲ್ಲೂಕಿನ ಜನರ ಕ್ಷೇಮ, ರೈತರ ಹಿತರಕ್ಷಣೆ ಹಾಗೂ ಸಾರ್ವಜನಿಕರ ಕುಂದುಕೊರತೆ, ಅಹವಾಲು ಆಲಿಸುವುದು ಜನಪ್ರತಿನಿಧಿಗಳ ಜವಾಬ್ದಾರಿ. ಇಒತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ಬೇಜವಾಬ್ದಾರಿತನ,ನಿರ್ಲಕ್ಷ್ಯ ತೋರಿದ್ದಾರೆ. ಅಧ್ಯಕ್ಷರ ಅಧಿಕಾರ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದುದೂರು ಸಲ್ಲಿಸಿದರೂ, ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ತಾಲ್ಲೂಕಿನ ಸಮಸ್ಯೆಗಳ ಕುರಿತು ಚರ್ಚಿಸಲುಕೆಡಿಪಿ ಸಭೆ,ಸಾಮಾನ್ಯ ಸಭೆ ಕರೆಯುವಂತೆ ಪತ್ರ ನೀಡಿದ್ದರೂ ಸ್ಪಂದಿಸಿಲ್ಲ. ಸಾಮಾಜಿಕ ನ್ಯಾಯಸಮಿತಿ ಅಧ್ಯಕ್ಷರ ಅವಧಿ ಮುಗಿದು 20 ತಿಂಗಳಾದರೂ ಕ್ರಮವಹಿಸಿಲ್ಲ. ಕೊರೊನಾ ಜಾಗೃತಿ ಸಮಿತಿಗಳಲ್ಲಿ ಒಂದೇ ಪಕ್ಷದ ಕಾರ್ಯಕರ್ತರಿಗೆ ಅವಕಾಶ ನೀಡುವಂತೆ ಪಿಡಿಒಗಳಿಗೆ ಒತ್ತಡ ಹಾಕುತ್ತಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ತೀ.ನಾ.ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಎಸ್.ರವಿಕುಮಾರ್, ವಿಜಯಕುಮಾರ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಹಕ್ರೆ ವಿರೋಧಿ ಸದಸ್ಯರ ವಾದ:ಹಕ್ರೆ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ. ಈ ನಿರ್ಣಯದ ಪರವಾಗಿ 10 ಜನ ಸದಸ್ಯರು ಕೈ ಎತ್ತಿದ್ದಾರೆ. ವಿರುದ್ಧ5 ಜನ ಸದಸ್ಯರಲ್ಲಿಮೂವರು ಸಭಾ ನಡಾವಳಿಯಲ್ಲಿ ಸಹಿ ಮಾಡಿದ್ದಾರೆ.ಹಾಗಾಗಿ ಅವಿಶ್ವಾಸ ನಿರ್ಣಯಕ್ಕೆಜಯವಾಗಿದೆ. ಅಧ್ಯಕ್ಷರಾಗಿ ಮುಂದುವರಿಯುವ ಅಧಿಕಾರ ಕಳೆದುಕೊಂಡಿರುತ್ತಾರೆ ಎಂದುದೂರಿದರು.

ಹಕ್ರೆನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಈ ಕುರಿತು ಸದಸ್ಯರಿಗೆ ಸ್ಪಷ್ಟನೆ ಇಲ್ಲ.ಅವರ ಅಧ್ಯಕ್ಷತೆಯಲ್ಲಿ ಯಾವುದೇ ಸಾಮಾನ್ಯ ಸಭೆ ಮತ್ತು ಕೆಡಿಪಿ ಸಭೆ ನಡೆಸಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯರಾದದೇವೇಂದ್ರಪ್ಪ, ಸೋಮಶೇಖರ್, ಪರುಶುರಾಮ್, ಚಂದ್ರಪ್ಪ ಕಂಸೆ, ಪ್ರಭಾವತಿ ಚಂದ್ರಕಾಂತ, ಸುವರ್ಣಾಟೀಕಪ್ಪ, ರಘುಪತಿ ಭಟ್, ಸವಿತಾ ನಟರಾಜ್, ಪ್ರತಿಮಾ, ಜ್ಯೋತಿ ಮುರಳೀಧರಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT