ಸಾಗರ: ‘ಊರನ್ನು ಸ್ವಚ್ಛವಾಗಿಡಲು ಮೊದಲ ಆದ್ಯತೆ ನೀಡಿ...’

ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಸಮಾಲೋಚನಾ ಸಭೆಗಳಲ್ಲಿ ಅಧಿಕಾರಿಗಳಿಗೆ ಪದೇ ಪದೇ ಹೇಳುವ ಮಾತಿದು. ಇದಕ್ಕೆ ಅಧಿಕಾರಿಗಳು ಕಿವಿಗೊಟ್ಟಂತೆ ಕಾಣುತ್ತಿಲ್ಲ. ನಗರದ ವಿವಿಧ ಬಡಾವಣೆಗಳಲ್ಲಿನ ಸಾರ್ವಜನಿಕ ಶೌಚಾಲಯಗಳು ಗಬ್ಬು ನಾರುತ್ತಿರುವುದು ಇದಕ್ಕೊಂದು ಉದಾಹರಣೆ.

ಇಂದಿರಾಗಾಂಧಿ ಮಹಿಳಾ ಕಾಲೇಜಿನ ಪಕ್ಕದಲ್ಲಿ ಎಪಿಎಂಸಿಯು 2020ನೇ ಸಾಲಿನಲ್ಲಿ ₹ 1.72 ಕೋಟಿ ವೆಚ್ಚದಲ್ಲಿ ಸಂತೆ ಮಾರುಕಟ್ಟೆ ನಿರ್ಮಿಸಿದೆ. ಇದು ಸಾರ್ವಜನಿಕ ಶೌಚಾಲಯವನ್ನೂ ಒಳಗೊಂಡಿದ್ದು ಇದರ ನಿರ್ವಹಣೆ ಜವಾಬ್ದಾರಿ ನಗರಸಭೆಯದ್ದಾಗಿದೆ.

ಪ್ರತಿ ಗುರುವಾರ ನಡೆಯುವ ಇಲ್ಲಿನ ಸಂತೆಗೆ ಸೊರಬ, ಶಿಕಾರಿಪುರ, ಶಿರಾಳಕೊಪ್ಪ, ಆನವಟ್ಟಿ ಹಾಗೂ ಸುತ್ತಮುತ್ತಲ ಪ್ರದೇಶಗಳಿಂದ ವ್ಯಾಪಾರಸ್ಥರು ಬರುತ್ತಾರೆ. ಕೆಲವರು ಸಂತೆಯ ಹಿಂದಿನ ರಾತ್ರಿಯೇ ಇಲ್ಲಿಗೆ ಬಂದು ತಂಗುತ್ತಾರೆ.

ಇಲ್ಲಿನ ಸಾರ್ವಜನಿಕ ಶೌಚಾಲಯ ಕಾಲಿಡಲೂ ಸಾಧ್ಯವಾಗದಷ್ಟು ಹದಗೆ ಟ್ಟಿದೆ. ಬಾಗಿಲು ಮುರಿದಿದೆ. ಅದರೊಳಗೆ ಬಳಸಿ ಬಿಸಾಕಿದ ಮದ್ಯದ ಸ್ಯಾಚೆಟ್, ಬಾಟಲ್, ಬೀಡಿ, ಸಿಗರೇಟ್ ತುಂಡುಗಳ ರಾಶಿಯನ್ನೇ ಕಾಣಬಹುದು.

ಹೀಗಾಗಿ ಮಹಿಳೆಯರೂ ಸೇರಿ ಸಂತೆಗೆ ಬರುವ ವ್ಯಾಪಾರಸ್ಥರಿಗೆ ಬಯಲು ಶೌಚಾಲಯವೇ ಗತಿಯಾಗಿದೆ. ಕಾನ್ಲೆ ಛತ್ರದ ಸಮೀಪವಿರುವ ಮತ್ತೊಂದು ಸಾರ್ವಜನಿಕ ಶೌಚಾಲಯ ತನ್ನ ವಿಳಾಸವನ್ನೇ ಕಳೆದುಕೊಂಡ ರೀತಿಯಲ್ಲಿದೆ. ಅಲ್ಲಿ ಶೌಚಾಲಯವಿದೆ ಎಂಬುದನ್ನು ಬ್ಯಾಟರಿ ಹಾಕಿ ಹುಡುಕಬೇಕು!

ಗಾಂಧಿನಗರ ಬಡಾವಣೆಯ ಅಗ್ರಹಾರ ವೃತ್ತದಲ್ಲಿರುವ ಸಾರ್ವಜನಿಕ ಶೌಚಾಲಯ ಹಲವು ವರ್ಷಗಳಿಂದ ಬಾಗಿಲು ಮುಚ್ಚಿದೆ. ಈಚೆಗೆ ಸುರಿದ ಗಾಳಿ– ಮಳೆಯಿಂದ ಈ ಕಟ್ಟಡದ ಮೇಲೆ ಮರದ ರೆಂಬೆಯೊಂದು ಬಿದ್ದಿದ್ದು, ಅದನ್ನು ತೆರವುಗೊಳಿಸುವ ಪುರುಸೊತ್ತು ನಗರಸಭೆ ಸಿಬ್ಬಂದಿಗೆ ಇಲ್ಲವಾಗಿದೆ.

ಬಿ.ಎಚ್. ರಸ್ತೆ ಬಸ್ ನಿಲ್ದಾಣದ ಶೌಚಾಲಯದೊಳಗೆ ಮೂಗು ಮುಚ್ಚಿಕೊಂಡೇ ಹೋಗಬೇಕು. ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯದಲ್ಲೂ ಇದೇ ಸ್ಥಿತಿ ಇದೆ. ಜೆಸಿ ರಸ್ತೆಯ ಕೆನರಾ ಬ್ಯಾಂಕ್ ಎದುರಿನ ಚೌಡಮ್ಮನ ಬೀದಿಯಲ್ಲಿರುವ ಶೌಚಾಲಯದ ನಿರ್ವಹಣೆ ಇರುವುದರಲ್ಲಿ ಪರವಾಗಿಲ್ಲ ಎನ್ನುವಂತಿದೆ.

ಸೊರಬ ರಸ್ತೆಯ ರೇಣುಕಾಂಬಾ ಹೂವಿನಂಗಡಿ ಪಕ್ಕದಲ್ಲಿ 2001ನೇ ಸಾಲಿನಲ್ಲಿ ₹ 4 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸಾರ್ವಜನಿಕ ಶೌಚಾಲಯ ಇನ್ನೂ ಉದ್ಘಾಟನೆಯ ಭಾಗ್ಯವನ್ನೇ ಕಂಡಿಲ್ಲ.

ಈ ಶೌಚಾಲಯದ ಕಟ್ಟಡದ ಮೇಲೆ ಹೈಟೆನ್ಷನ್ ವಿದ್ಯುತ್ ತಂತಿ ಹಾದು ಹೋಗಿರುವುದರಿಂದ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ನೀಡಲು ಮೆಸ್ಕಾಂ ನಿರಾಕರಿಸಿದೆ. ಈ ವಿಷಯ ಗೊತ್ತಿದ್ದೂ ಇಲ್ಲಿ ಏಕೆ ಶೌಚಾಲಯ ಕಟ್ಟಲಾಯಿತು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಜನ್ನತ್ ನಗರ ಹಾಗೂ ಇತರ ಕೆಲವು ಬಡಾವಣೆಗಳಲ್ಲಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯಗಳು ಬಾಗಿಲು ಮುಚ್ಚಿವೆ. ಹೀಗೆ ನಿರ್ವಹಣೆ ಕಾರ್ಯ ಕೈಗೊಳ್ಳದೆ ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡಲಾಗುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ನಗರದ ನಾಗರಿಕರ ಒತ್ತಾಯವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-42-474584646

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.