ಸಾಗರ: ‘ಒಂದು ಎಕರೆ ಕೃಷಿಭೂಮಿಗೆ ಒಂದು ಚೀಲದಷ್ಟು ಯೂರಿಯಾ ರಸಗೊಬ್ಬರವನ್ನು ಮಾತ್ರ ರೈತರಿಗೆ ಪೂರೈಸುವ ನಿಯಮ ರೂಪಿಸಲಾಗಿದೆ. ಇದರಿಂದ ದೇಶದ ಆಹಾರ ಭದ್ರತೆಗೆ ಕುತ್ತು ಉಂಟಾಗಲಿದೆ’ ಎಂದು ಸಂಯುಕ್ತ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಂಜಪ್ಪ ಹಿರೇನೆಲ್ಲೂರು ದೂರಿದರು.

‘ರೈತ ದೇಶದ ಬೆನ್ನೆಲುಬು ಎಂದು ವೇದಿಕೆಗಳಲ್ಲಿ ಭಾಷಣ ಮಾಡುವ ರಾಜಕೀಯ ನೇತಾರರು, ಈ ರೀತಿ ಕೃಷಿ ಚಟುವಟಿಕೆಗೆ ನಿರ್ಬಂಧ ಹೇರುತ್ತಿರುವುದು ಎಷ್ಟು ಸರಿ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಕೇಂದ್ರ ಸರ್ಕಾರದ ಕ್ರಮದಿಂದಾಗಿ ಭವಿಷ್ಯದಲ್ಲಿ ಆಹಾರದ ಕೊರತೆ ಉಂಟಾಗಿ ವಿದೇಶಗಳಿಂದ ಆಹಾರ ಬೆಳೆ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ’ ಎಂದು ಎಚ್ಚರಿಸಿದರು.

‘ಕಳೆದ ವರ್ಷ ತಾಲ್ಲೂಕಿನಲ್ಲಿ 72,000 ಚೀಲ ಯೂರಿಯಾ ಗೊಬ್ಬರದ ಸಂಗ್ರಹವಿತ್ತು. ಈ ವರ್ಷ 10,880 ಮೂಟೆ ಮಾತ್ರ ದಾಸ್ತಾನು ಇದೆ. ಇಷ್ಟು ಪ್ರಮಾಣದಲ್ಲಿ ಗೊಬ್ಬರದ ಕೊರತೆಯಾದರೆ ಈ ಭಾಗದ ಭತ್ತ, ಮೆಕ್ಕೆಜೋಳ ಬೆಳೆಯುವ ರೈತರಿಗೆ ತೀವ್ರ ತೊಂದರೆಯಾಗಲಿದೆ’ ಎಂದರು.

‘ದಪ್ಪ ಅಭಿಲಾಷ ತಳಿಯ ಭತ್ತದ ಬಿತ್ತನೆ ಬೀಜವನ್ನು ಈ ವರ್ಷ ಕೃಷಿ ಇಲಾಖೆಯಿಂದ ಪೂರೈಸಲಾಗುತ್ತಿಲ್ಲ. ಈ ಸಂಬಂಧ ಇಲಾಖೆ ರೈತರಿಗೆ ಸೂಕ್ತ ಮಾಹಿತಿ ನೀಡಿಲ್ಲ. ಈ ತಳಿಯ ಬಿತ್ತನೆ ಬೀಜ ಸಿಗುತ್ತದೆ ಎಂಬ ನಿರೀಕ್ಷೆಯಿಂದ ಭೂಮಿ ಹದ ಮಾಡಿದ ರೈತರಿಗೆ ಕಡೆ ಗಳಿಗೆಯಲ್ಲಿ ವಿಷಯ ತಿಳಿದು ಅನನುಕೂಲವಾಗುತ್ತದೆ. ರೈತರಿಗೆ ಈ ಸಂಬಂಧ ಸಕಾಲದಲ್ಲಿ ಮಾಹಿತಿ ತಲುಪಿಸಬೇಕು’ ಎಂದು ಒತ್ತಾಯಿಸಿದರು.

‘ಕಳೆದ ವರ್ಷ ತಾಲ್ಲೂಕಿನ ಮಳೆಮಾಪನ ಕೇಂದ್ರಗಳಲ್ಲಿನ ದೋಷಗಳಿಂದ ಮಳೆಯ ಪ್ರಮಾಣ ಸರಿಯಾಗಿ ದಾಖಲಾಗದೆ ಅನೇಕ ರೈತರಿಗೆ ಬೆಳೆ ವಿಮೆ ಸೌಲಭ್ಯದ ಪ್ರಯೋಜನ ದೊರಕಿಲ್ಲ. ಈ ವರ್ಷ ಮಳೆಗಾಲಕ್ಕೆ ಮುನ್ನ ಮಳೆಮಾಪನ ಕೇಂದ್ರಗಳನ್ನು ದುರಸ್ತಿಗೊಳಿಸಬೇಕು’ ಎಂದು ಆಗ್ರಹಿಸಿದರು.

ರೈತ ಮುಖಂಡ ಜಿನೇಶ್, ಪ್ರಮುಖರಾದ ಹೊಯ್ಸಳ ಗಣಪತಿಯಪ್ಪ, ರಾಮಪ್ಪ ಶಿರವಾಳ, ಜಯಲಕ್ಷ್ಮಿ, ಭದ್ರೇಶ್ ಬಾಳಗೋಡು, ದೇವು ಆಲಳ್ಳಿ, ಸುಂದರ್ ಸಿಂಗ್, ರಮೇಶ್ ಐಗಿನಬೈಲು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-42-1332086313

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.