ಸಾಗರ: ಇಲ್ಲಿನ ವಿಜಯನಗರ ಬಡಾವಣೆಯಲ್ಲಿ ಸ್ವಚ್ಛತಾ ಕಾರ್ಯವನ್ನು ಸಮರ್ಪಕವಾಗಿ ನಡೆಸುವಂತೆ ಒತ್ತಾಯಿಸಿ ಬಡಾವಣೆ ನಿವಾಸಿಗಳು ಬುಧವಾರ ನಗರಸಭೆ ಕಚೇರಿಗೆ ಮನವಿ ಸಲ್ಲಿಸಿದರು.

‘ನಮ್ಮ ಬಡಾವಣೆಯಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯ ಸಕಾಲದಲ್ಲಿ ಆಗುತ್ತಿಲ್ಲ. ನಿಯಮಿತವಾಗಿ ಚರಂಡಿ, ಸುತ್ತಮುತ್ತಲು ಬೆಳೆದಿರುವ ಗಿಡಗಂಟಿಗಳನ್ನು ಸ್ವಚ್ಛಗೊಳಿಸದ ಕಾರಣ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ’ ಎಂದು ನಗರಸಭೆ ಮಾಜಿ ಸದಸ್ಯ ರವಿ ಲಿಂಗನಮಕ್ಕಿ ದೂರಿದರು.

‘ಈ ಹಿಂದೆ ಕಸ ಸಂಗ್ರಹ ಮಾಡುವ ವಾಹನ ಎರಡು ದಿನಕ್ಕೊಮ್ಮೆ ಬರುತ್ತಿತ್ತು. ಈಗ ಎಂಟು ಅಥವಾ ಹತ್ತು ದಿನಗಳಿಗೊಮ್ಮೆ ಬರುತ್ತಿದೆ. ಈ ಕಾರಣ ಸ್ಥಳೀಯ ನಿವಾಸಿಗಳಿಗೆ ತ್ಯಾಜ್ಯ ವಿಲೇವಾರಿ ದೊಡ್ಡ ಸಮಸ್ಯೆಯಾಗಿದೆ’ ಎಂದು ಹೇಳಿದರು.

‘ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಅನೇಕ ಬಾರಿ ನಗರಸಭೆ ಕಚೇರಿಗೆ ಮನವಿ ಮಾಡಿದ್ದರೂ ಜನಪ್ರತಿನಿಧಿಗಳ ಆಡಳಿತ ಇಲ್ಲದ ಕಾರಣ ಸ್ಪಂದನೆ ದೊರಕುತ್ತಿಲ್ಲ. ಕೂಡಲೇ ಈ ಸಮಸ್ಯೆಗೆ ಪರಿಹಾರ ಒದಗಿಸದಿದ್ದರೆ ನಗರಸಭೆ ಕಚೇರಿ ಎದುರು ನಿರಂತರವಾಗಿ ಧರಣಿ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಪ್ರಮುಖರಾದ ತೀ.ನ. ಶ್ರೀನಿವಾಸ್, ವೈ. ಮೋಹನ್, ಕಿರಣ್, ಪ್ರಸನ್ನ, ಪದ್ಮರಾಜ್, ಹುಚ್ಚಪ್ಪ, ಚಂದ್ರು ಗೌಡ, ಸತ್ಯನಾರಾಯಣ, ನಾಗರಾಜ್, ಲಕ್ಷ್ಮಿ ಹತ್ವಾರ್, ಸಂಗಪ್ಪ, ಚಂದ್ರಣ್ಣ, ತಮ್ಮಣ್ಣಪ್ಪ, ಅಕ್ಷರಾ, ನವೀನ್, ರಾಘವೇಂದ್ರ, ಅವಧಾನಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-42-1954338872

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.