ಸಾಗರ: ‘ಭಾರತೀಯ ಸಂಸ್ಕೃತಿಯನ್ನು ಪೋಷಿಸುವ ಯಕ್ಷಗಾನದಂತಹ ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ’ ಎಂದು ನಗರಸಭೆ ಮಾಜಿ ಸದಸ್ಯ ಕೆ.ಆರ್.ಗಣೇಶ್ ಪ್ರಸಾದ್ ಹೇಳಿದರು.

ಇಲ್ಲಿನ ಕುಡುಪಲಿ ಸದಾನಂದ ಸಭಾಭವನದಲ್ಲಿ ಯಕ್ಷಪ್ರವೀಣ ಕಲಾವೇದಿಕೆ ಈಚೆಗೆ ಏರ್ಪಡಿಸಿದ್ದ ‘ತುಳಸಿ ಜಲಂಧರ’ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಪುರಾಣದ ಪ್ರಸಂಗಗಳನ್ನು ಕಲೆಯ ರೂಪದಲ್ಲಿ ಪ್ರಸ್ತುತ ಪಡಿಸುವ ಜೊತೆಗೆ ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಯಲ್ಲಿ ಯಕ್ಷಗಾನ ಮಹತ್ವದ ಕೊಡುಗೆ ನೀಡುತ್ತಿದೆ. ಮಕ್ಕಳಲ್ಲಿ ಈ ಕಲೆಯ ಕುರಿತು ಆಸಕ್ತಿ ಮೂಡಿಸಲು ಯಕ್ಷಪ್ರವೀಣ ಕಲಾವೇದಿಕೆ ಮುಂದಾಗಿರುವುದು ಆರೋಗ್ಯಕರ ಬೆಳವಣಿಗೆ’ ಎಂದರು.

ಹಿರಿಯ ಯಕ್ಷಗಾನ ಕಲಾವಿದ ಬಿ.ಎಸ್.ಗಣಪತಿ ಬೆಳೆಯೂರು ಅವರನ್ನು ಸನ್ಮಾನಿಸಲಾಯಿತು. ಯಕ್ಷಪ್ರವೀಣ ಕಲಾವೇದಿಕೆಯ ಅಧ್ಯಕ್ಷ ಪ್ರಸನ್ನಕುಮಾರ್ ಎನ್.ಎಂ., ವೀಣಾ ಪ್ರಸನ್ನ ಕುಮಾರ್, ನಾರಾಯಣ ಮೂರ್ತಿ ಭೀಮನಕೋಣೆ, ರಾಮಮೂರ್ತಿ, ಅರ್ಚನಾ ಇದ್ದರು.

ಯಕ್ಷಗಾನ ಪ್ರದರ್ಶನದ ಹಿಮ್ಮೇಳದಲ್ಲಿ ಪ್ರಶಾಂತ ಮಧ್ಯಸ್ಥ, ಮಹೇಶ್, ಶರತ್ ಜಾನಕೈ, ಅಶೋಕ ಕ್ಯಾಸನೂರು, ಮುಮ್ಮೇಳದಲ್ಲಿ ಅನೀಶ್, ಅಥರ್ವ, ಕ್ಷಿಪ್ರ, ರಜನಿ, ರಚಿತಾ, ಸನಿಹ, ವರ್ಷಿಣಿ, ಸಾನಿಕಾ, ಅಭಿರಾಮ, ವಂದನಾ, ಅಂತರ್ಯ, ನಾಗರಾಜ, ಮಾನ್ಯತಾ, ಸ್ಮಿತಾ, ವೈನವಿ, ದಿವ್ಯ, ಸಾನಿಧ್ಯ, ಶೃತಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-42-177052781

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.