ಶುಕ್ರವಾರ, ಅಕ್ಟೋಬರ್ 22, 2021
20 °C

ಗಾಂಜಾ‌ ಮಾರಾಟ: ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೊರಬ: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತಾಲ್ಲೂಕಿನ‌ ಶಿಗ್ಗಾ ಗ್ರಾಮದ ಶರತ್, ಜಡೆ ಗ್ರಾಮದ ಸಚಿನ್, ದರ್ಶನ್‌ ಬಂಧಿತರು. ಕಪ್ಪಗಳಲೆ ಗ್ರಾಮದ ಬಸ್ ನಿಲ್ದಾಣದಲ್ಲಿ ಬಂಧಿಸಿರುವ ಪೊಲೀಸರು ದ್ವಿಚಕ್ರವಾಹನ, 300 ಗ್ರಾಂ ಒಣ ಗಾಂಜಾವನ್ನು‌ ವಶಪಡಿಸಿಕೊಂಡಿದ್ದಾರೆ.

ಪಿಎಸ್‌ಐ ಪ್ರಶಾಂತಕುಮಾರ್ ನೇತೃತ್ವದಲ್ಲಿ  ಸಿಬ್ಬಂದಿ ರಮೇಶ್ವರ ನಾಯಕ್, ಎಂ.ಕೆ.ನಾಗರಾಜ್, ಸಲ್ಮಾನ್ ಖಾನ್, ಸುಧಾಕರ್, ಜಗದೀಶ್ ಕಾರ್ಯಾಚರಣೆ ಕೈಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು