ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದನದ ಮಾಂಸ ಮಾರಾಟ: ಇಬ್ಬರ ಬಂಧನ

Last Updated 5 ಏಪ್ರಿಲ್ 2022, 4:23 IST
ಅಕ್ಷರ ಗಾತ್ರ

ಶಿರಾಳಕೊಪ್ಪ: ದನದ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಪಟ್ಟಣದ ಪೊಲೀಸರು ಬಂಧಿಸಿದ್ದಾರೆ.

ಪಟ್ಟಣದ ನಿವಾಸಿ ಶೇರ್ ಅಲಿ ಹಾಗೂ ಜೈನುಲ್ಲಾ ಬಂಧಿತರು. ಶೇರ್ ಅಲಿಯಿಂದ ₹ 5 ಸಾವಿರ ಬೆಲೆ ಬಾಳುವ 25 ಕೆ.ಜಿ. ದನದ ಮಾಂಸ ಹಾಗೂ ಜೈನುಲ್ಲಾ ಎಂಬಾತನಿಂದ ₹ 2 ಸಾವಿರ ಬೆಲೆ ಬಾಳುವ 10 ಕೆ.ಜಿ. ಮಾಂಸ ವಶಪಡಿಸಿಕೊಳ್ಳಲಾಗಿದೆ. ₹ 88,500 ಮೌಲ್ಯದ 2 ಎಮ್ಮೆ, 3 ಆಕಳು ಹಾಗೂ 4 ಗಂಡು ಕರುಗಳನ್ನು ಆರೋಪಿಗಳಿಂದ ವಶಕ್ಕೆ ಪಡೆದು, ಹಾನಗಲ್ಲ ತಾಲ್ಲೂಕು ಹೊಂಕಣ ಗೋ ಶಾಲೆಗೆ ಹಸ್ತಾಂತರಿಸಲಾಗಿದೆ.

ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT