ಶಿವಮೊಗ್ಗ: ಇಲ್ಲಿನ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಉದ್ಯಮ ದೈತ್ಯ ಶಾಂತಲಾ ಗ್ರೂಪ್ ಶುಕ್ರವಾರ ಹೊಸಮನ್ವಂತರಕ್ಕೆ ಕಾಲಿಟ್ಟಿತು. ಶಾಂತಲಾ ಆಟೊಮೇಶನ್ ವಿಭಾಗದ 25 ಸಾವಿರ ಚದರ ಅಡಿ ವ್ಯಾಪ್ತಿಯಲ್ಲಿ ನಿರ್ಮಿಸಿದ ಎಸ್ಆರ್ (ಸೆಲ್ಫ್ ರೇಲಿಯಂಟ್) ಬ್ಲಾಕ್ ಲೋಕಾರ್ಪಣೆ ಮಾಡಲಾಯಿತು.

ಈ ವೇಳೆ ಯುಕೆ ಅಂಡ್ ಕೋ ಸಂಸ್ಥೆಯ ಸಂಸ್ಥಾಪಕ ಉಲ್ಲಾಸ್ ಕಾಮತ್ ಮಾತನಾಡಿ. ‘ಉದ್ಯೋಗಿಗಳು, ಉದ್ಯೋಗದಾತರಾಗಿ ಯಶಸ್ವಿ ಆಗಿರುವುದು ಬಹಳ ಕಡಿಮೆ. ಆದರೆ ರುದ್ರೇಗೌಡರು ಅದಕ್ಕೆ ಭಿನ್ನ. ಕಂಪೆನಿಯ ಕೆಲಸ ಬಿಟ್ಟ ಉದ್ಯೋಗಿಗಳು ಸೇರಿ ಅವರಲ್ಲಿ ಒಬ್ಬರ ಸಾರಥ್ಯದಲ್ಲಿ 40 ವರ್ಷ ಕಾಲ ಶಾಂತಲಾ ಸಮೂಹ ಕಟ್ಡಿ ಬೆಳೆಸಿದ್ದಾರೆ. 3,500 ಜನರಿಗೆ ಕೆಲಸ ಕೊಟ್ಟಿದ್ದಾರೆ. ಪ್ರತೀ ತಿಂಗಳು ವೇತನ, ಕುಟುಂಬದ ಕ್ಷೇಮ, ಆರೋಗ್ಯ ಸವಲತ್ತು ಕೊಡುವ ಕಾರ್ಯ ಸಣ್ಣದಲ್ಲ ಎಂದರು.

ಕಾರ್ಪೊರೇಟ್ ಕಂಪೆನಿಗಳಿಗೆ ಸರ್ಕಾರ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ನಿಗದಿಪಡಿಸುವ ಮೊದಲೇ ರುದ್ರೇಗೌಡರು ಜನರಿಗೆ ಉದ್ಯೋಗದ ಸಿಎಸ್ಆರ್ ಆರಂಭಿಸಿದ್ದರು. ಎಲ್ಲಿಯೂ ಕೆಲಸ ಸಿಗದೇ ಇದ್ದರೆ ಇಲ್ಲಿ ಬಂದರೆ ಕೆಲಸ ಸಿಗುವುದು ನಿಶ್ಚಿತ ಎಂಬ ನಂಬಿಕೆ ಸೃಷ್ಟಿಸಿದ್ದರು. ಮಾನವೀಯತೆ ಶಾಂತಲಾ ಸಂಸ್ಥೆಯ ಶಕ್ತಿ. ಇಲ್ಲಿ ಎಲ್ಲ ಕೆಲಸಕ್ಕೂ ಮುಂದಿನ ಪೀಳಿಗೆಯ ಸಜ್ಹುಗೊಳಿಸಿದ್ದಾರೆ. ಇದು ಯಶಸ್ವಿ ಮಾಲೀಕತ್ವದ ಮನಸ್ಥಿತಿ ಅಲ್ಲ, ಬದಲಿಗೆ ಯಶಸ್ವಿ ನಾಯಕತ್ವದ ಮಾದರಿ ಎಂದು ಬಣ್ಣಿಸಿದರು.

‘ರಾಜ ಚೆನ್ನಾಗಿದ್ದರೆ ಪ್ರಜೆಗಳು ಚೆನ್ನಾಗಿರುತ್ತಾರೆ. ದೇಶಕ್ಕೆ ಒಳ್ಳೆಯ ನಾಯಕತ್ವ ಸಿಕ್ಕಿದೆ. ದೇಶ ಹೇಗೆ ಮುನ್ನಡೆಸಬೇಕು ಎಂಬ ದೂರದೃಷ್ಟಿ ಆ ನಾಯಕತ್ವಕ್ಕೆ ಇದೆ. ಈ ಹಿಂದೆ ಉದ್ಯಮಗಳಿಗೆ ಮಾತ್ರ ಇದ್ದ ಬೆಳವಣಿಗೆಯ ಗುರಿ ದೇಶಕ್ಕೂ ಅನ್ವಯಿಸಲಾಗಿದ್ದು, 2047ಕ್ಕೆ ವಿಕಸಿತ ಭಾರತ ಹೇಗಿರಬೇಕು ಎಂಬ ಗುರಿಯೊಂದಿಗೆ ಮುನ್ನಡೆಯಲಾಗುತ್ತಿದೆ ಎಂದರು.

ಇದೇ ವೇಳೆ ಶಿವಮೊಗ್ಗ ಚೇಂಬರ್ ಅಫ್ ಕಾಮರ್ಸ್ ಅಧ್ಯಕ್ಷ ಗೋಪಿನಾಥ್ ನೇತೃತ್ವದಲ್ಲಿ ಪದಾಧಿಕಾರಿಗಳು ಎಸ್. ರುದ್ರೇಗೌಡ ಅವರನ್ನು ಸನ್ಮಾನಿಸಿದರು. ಸಂಸ್ಥೆಯಲ್ಲಿ ಅತಿ ದೀರ್ಘ ಸೇವೆ ಸಲ್ಲಿಸಿದ, ಅತ್ಯುತ್ತಮವಾಗಿ ಕೆಲಸ ಮಾಡಿದ ಉದ್ಯೋಗಿಗಳ ಗುರುತಿಸಿ ಸಮಾರಂಭದಲ್ಲಿ ಗೌರವಿಸಲಾಯಿತು.

ಶಾಂತಲಾ ಗ್ರೂಪ್ನ ಪಾಲುದಾರ ಬಿ.ಎಸ್.ಚಂದ್ರಶೇಖರ್. ಉದ್ಯಮಿ ಎ.ಎಲ್.ಚಂದ್ರಶೇಖರ್, ಸಂಸ್ಥೆಯ ನಿರ್ದೇಶಕ ಡಿ.ಬಿ.ಅಶೋಕ್, ಡಿಜಿಎಂ ಕೆ.ಸಿ.ಗಂಗಾಧರ್, ಉದ್ಯಮಿ ಡಿ.ಜಿ.ಬೆನಕಪ್ಪ, ಉದ್ಯಮಿಗಳಾದ ರವಿ ರಾಘವನ್, ಟಿ.ವಿ.ರಾಘವ ಭಾದ್ಯ ಪಾಲ್ಗೊಂಡಿದ್ದರು.

ಆರಂಭದ ಯಶೋಗಾಥೆ ಬಿಚ್ಚಿಟ್ಟರು..

ಸ್ವಿಡ್ಜರ್ ಲೆಂಡ್ ನಿಂದ ದುಬಾರಿ ಹಣ ಕೊಟ್ಟು ಕಾಸ್ಟಿಂಗ್ ತರಿಸಿಕೊಳ್ಳುತ್ತಿದ್ದ ಕಾಲದಲ್ಲಿ ಗ್ರಾಹಕರ ವಿಶ್ವಾಸ ಗಳಿಸಲು ಅತ್ಯುತ್ತಮ ಗುಣಮಟ್ಟದ ಉತ್ಪನ್ನವನ್ನು ಕಡಿಮೆ ಖರ್ಚಿನಲ್ಲಿ ಸಿದ್ಧಪಡಿಸಿಕೊಟ್ಟು ಗ್ರಾಹಕರ ಮನ ಗೆದ್ದು ಅದನ್ನೇ ಸಂಸ್ಥೆಯ ಯಶೋಗಾಥೆ ಆಗಿ ಬದಲಾಯಿಸಿಕೊಂಡ ಬಗೆಯನ್ನು ರುದ್ರೇಗೌಡರು ಇದೇ ವೇಳೆ ಬಿಚ್ಚಿಟ್ಟರು. 1984ರಲ್ಲಿ ಇಲ್ಲಿಗೆ ಬಂದಾಗ ಯಾವುದೇ ವ್ಯವಸ್ಥೆ ಇಲ್ಲಿರಲಿಲ್ಲ. ಬಸ್ ಟೆಲಿಫೋನ್ ಸೇರಿದಂತೆ ಯಾವುದೇ ಸಂಪರ್ಕ ವ್ಯವಸ್ಥೆ ಇಲ್ಲದ ಹೊತ್ತು. ಬೋರ್ವೆಲ್ ಹಾಕಿದರೂ ನೀರು ಬಾರದೇ ಕೊನೆಗೆ ಚಾನೆಲ್ನಿಂದ ಪೈಪ್ಲೈನ್ ಹಾಕಿಕೊಂಡು ನೀರು ಪಡೆದು ಉದ್ಯಮ ಕಟ್ಟಿದ್ದನ್ನು ಅವರು ಸ್ಮರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.