ಶನಿವಾರ, ಜೂನ್ 12, 2021
28 °C

ಕ್ರಸ್ಟ್ ಗೇಟ್ ಮಟ್ಟ ತಲುಪಿದ ಶರಾವತಿ: ಬಾಗಿನ ಅರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರ್ಗಲ್: ಸಮುದ್ರ ಮಟ್ಟದಿಂದ 1795 ಅಡಿ ಎತ್ತರದಲ್ಲಿರುವ ಕ್ರಸ್ಟ್ ಗೇಟ್ ಮಟ್ಟಕ್ಕೆ ಲಿಂಗನಮಕ್ಕಿ ಜಲಾಶಯದ ನೀರು ತಲುಪಿದ ಕಾರಣ ಶರಾವತಿ ನದಿಗೆ ಕೆಪಿಸಿ ನಿಗಮದ ಅಧಿಕಾರಿಗಳು ಬುಧವಾರ ಬಾಗಿನ ಅರ್ಪಿಸಿದರು.

ಒಂದು ವರ್ಷ ನಾಡಿಗೆ ಬೆಳಕು ನೀಡಲು ಕ್ರಸ್ಟ್ ಗೇಟ್ ಮಟ್ಟದ ನೀರು ಸಹಕಾರಿಯಾಗಲಿದೆ ಎನ್ನುವುದು ಕೆಪಿಸಿ ತಾಂತ್ರಿಕ ವರ್ಗದ ಅಭಿಪ್ರಾಯ. ಸಾಂಪ್ರದಾಯಿಕವಾಗಿ ಗಂಗಾಪೂಜೆ ಸಲ್ಲಿಸಿ, ರೇಷ್ಮೆ ಝರಿ ಸೀರೆಯನ್ನು ಬಾಗಿನದಲ್ಲಿ ಇರಿಸಿ ನದಿಗೆ ಅರ್ಪಿಸಿದರು.

1819 ಅಡಿ ಗರಿಷ್ಠ ಮಟ್ಟದಲ್ಲಿರುವ ಅಣೆಕಟ್ಟೆಯಲ್ಲಿ ಕ್ರಸ್ಟ್‌ ಗೇಟ್‌ಗಳು 24 ಅಡಿ ಎತ್ತರವನ್ನು ಹೊಂದಿವೆ. ಹಾಲಿ ಜಲಾಶಯದ ಮಟ್ಟ 1801.75 ಅಡಿ ಇದ್ದು, ಭರ್ತಿಯಾಗಲು ಇನ್ನು 17 ಅಡಿ ಬಾಕಿ ಇದೆ. ನೀರಿನ ಒಳಹರಿವು 30 ಸಾವಿರ ಕ್ಯುಸೆಕ್‌ ಇದ್ದು, ಶೇ 66ರಷ್ಟು ಭಾಗ ಡ್ಯಾಂ ತುಂಬಿದಂತಾಗಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದರು.

ಕೆಪಿಸಿ ವಿದ್ಯುತ್ ವಿಭಾಗದ ಮುಖ್ಯ ಎಂಜಿನಿಯರ್ ನಾರಾಯಣ ಪಿ. ಗಜಕೋಶ್, ಸಿವಿಲ್ ವಿಭಾಗದ ಅಧೀಕ್ಷಕ ಎಂಜಿನಿಯರ್ ಆರ್. ಶಿವಕುಮಾರ್, ಎಚ್.ಆರ್.ಡಿ ಭಾವೀಕಟ್ಟೆ, ಅಧಿಕಾರಿ ಎಚ್.ಎಲ್. ರಮೇಶ್, ಹಣಕಾಸು ಅಧಿಕಾರಿ ಗಿಡ್ಡಪ್ಪ ಗೌಡ, ಕಾರ್ಮಿಕ ಮುಖಂಡರಾದ ಕೆ. ವೀರೇಂದ್ರ, ಎಚ್.ಆರ್. ಮಲ್ಲಿಕಾರ್ಜುನ ಸ್ವಾಮಿ, ನಾಗರಾಜ, ಕೇಶವ ಗೌಡ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.