ಶಿಕಾರಿಪುರ: ವಿದ್ಯಾರ್ಥಿಗಳ ಪಾಲಕರು ಮನಸು ಮಾಡಿದರೆ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯ ಎಂಬುದಕ್ಕೆ ತಾಲ್ಲೂಕಿನ ಕಲ್ಮನೆ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮಾದರಿಯಾಗಿದೆ.

ಈ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲ ಕ್ಲಪಿಸಲೆಂದೇ ಪಾಲಕರೆಲ್ಲ ಸೇರಿ ಬೋಜನಾಲಯ (ಡೈನಿಂಗ್ ಹಾಲ್) ಕಟ್ಟಿದ್ದಾರೆ.

ಅನೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟವನ್ನು ಶಾಲೆಯ ಕಟ್ಟೆಯ ಮೇಲೆ ಬಿಸಿಲಲ್ಲಿ ಕುಳಿತು ಊಟ ಮಾಡುವ ದೃಶ್ಯ ಸಾಮಾನ್ಯವಾಗಿರುತ್ತದೆ. ಊಟಕ್ಕಾಗಿ ಬೇರೆ ಜಾಗ ಇಲ್ಲದ ಕಾರಣಕ್ಕೆ ಅನಿವಾರ್ಯವಾಗಿ ಶಾಲೆಯ ಕಟ್ಟೆಯನ್ನೇ ಬಳಸಲಾಗುತ್ತದೆ. ತಾಲ್ಲೂಕಿನ ಕಲ್ಮನೆ ಗ್ರಾಮದಲ್ಲಿ ಮಾತ್ರ ವಿದ್ಯಾರ್ಥಿಗಳ ಊಟಕ್ಕಾಗಿಯೇ ಪ್ರತ್ಯೇಕ, ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ.

ಸರ್ಕಾರಿ ಶಾಲೆಗಳಲ್ಲಿ ಅಡುಗೆ ಮಾಡಲು ಕೋಣೆ ಇರುತ್ತದೆ. ಅದರಲ್ಲಿ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳಿಗೆ ಅಡುಗೆ ಮಾಡಲು ಆಗದೆ ಸ್ಟೌ ಹೊರಗೇ ಇಟ್ಟು ಅಡುಗೆ ಮಾಡುತ್ತಾರೆ. ದಾಸ್ತಾನು ಕೊಠಡಿಯೂ ಚಿಕ್ಕದಾಗಿರುತ್ತದೆ. ಗ್ರಾಮದ ವಿದ್ಯಾರ್ಥಿಗಳು ಶಾಲೆ ಕಟ್ಟೆ, ಅಂಗಳದಲ್ಲಿ ಊಟ ಮಾಡುವುದು, ಮಳೆ ಬಂದಾಗ ನಿಲ್ಲುವವರೆಗೂ ಊಟ ಮಾಡದೆ ಇರುವ ಸಮಸ್ಯೆ ಗಮನಿಸಿದ ಶಾಲಾಭಿವೃದ್ಧಿ ಸಮಿತಿಯು ವಿದ್ಯಾರ್ಥಿಗಳು ಊಟ ಮಾಡಲೆಂದೇ ಒಂದು ಕೊಠಡಿ ನಿರ್ಮಿಸಿದ್ದಾರೆ.

ದಾನಿಗಳ ಅನುದಾನ: ಭೋಜನಾಲಯ ಕೊಠಡಿಯನ್ನು 42 ಅಡಿ ಅಗಲ, 52 ಅಡಿ ಉದ್ದ ವಿಸ್ತೀರ್ಣದಲ್ಲಿ ಅಂದಾಜು ₹ 22 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಗ್ರಾಮದ ನಿವೃತ್ತ ಶಿಕ್ಷಕ ಬಿ.ಕೆ. ಮಂಜಪ್ಪ ತಮ್ಮ ಮೊಮ್ಮಗನ ಕೈಯಿಂದ ₹ 1 ಲಕ್ಷ ದೇಣಿಗೆ ಕೊಡುವ ಮೂಲಕ ಈ ಅಭಿಯಾನ ಆರಂಭಗೊಂಡಿತು. ಉಷಾ ಲಕ್ಷ್ಮಣ 300 ಚೀಲ ಸಿಮೆಂಟ್ ನೀಡಿದರೆ, ಸಾವಿರಕ್ಕೂ ಹೆಚ್ಚು ಜನರು ತಲಾ ₹ 5,000 ನೀಡಿದ್ದಾರೆ. ಇನ್ನು ಗ್ರಾಮದ ಕೂಲಿ ಕಾರ್ಮಿಕರೂ ತಮ್ಮ ದಿನದ ಕೂಲಿ ನೀಡುವ ಮೂಲಕ ಅಭಿಮಾನ ಮೆರೆದಿದ್ದಾರೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಹೊರನಾಡು ದೇವಾಲಯ ಸೇರಿ ಸುತ್ತಲಿನ ಗ್ರಾಮಕ್ಕೆ ತೆರಳಿ ದಾನಿಗಳಿಂದ ಹಣ ಸಂಗ್ರಹಿಸಲು ಗ್ರಾಮಸ್ಥರೂ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರೆಲ್ಲರೂ ಶ್ರಮಿಸಿದ್ದಾರೆ.

‘ಭೋಜನಾಲಯ ನಿರ್ಮಾಣಕ್ಕೆ ಸರ್ಕಾರದ ಹಲವು ಇಲಾಖೆ, ಜನಪ್ರತಿನಿಧಿಗಳನ್ನು ಸಂಪರ್ಕಿಸಿದರೂ ಅನುದಾನ ಸಿಗದ ಕಾರಣಕ್ಕೆ ಶಾಲಾಭಿವೃದ್ಧಿ ಸಮಿತಿ ಜನರ ದೇಣಿಗೆಯಿಂದಲೇ ಕೊಠಡಿ ನಿರ್ಮಾಣಕ್ಕೆ ನಿರ್ಣಯ ಕೈಗೊಂಡ ಪರಿಣಾಮ ಇದೀಗ ಸ್ವಾಭಿಮಾನದ ಸಂಕೇತವಾಗಿ ರೂಪುಗೊಂಡಿದೆ. ಸಾರ್ವಜನಿಕರು, ಪಾಲಕರು ‘ಇದು ನಮ್ಮದೇ ಶಾಲೆ’ ಎಂದು ಅಭಿಮಾನದಿಂದ ಹೇಳಿಕೊಳ್ಳುವಂಥ ಕಟ್ಟಡ ತಲೆ ಎತ್ತಿದೆ’ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿ.ಕರಿಬಸಪ್ಪ ಹೇಳಿದರು.

ಗ್ರಾಮದ ಶಾಲೆಗೆ ಸಾಲೂರು ಗ್ರಾಮದ ಎಂ.ನಾಗರಾಜನಾಯ್ಕ ಮುಖ್ಯಶಿಕ್ಷಕರಾಗಿ ವರ್ಗಾ ಅಗಿ ಬಂದ ನಂತರ ಶಾಲೆಯ ಶೈಕ್ಷಣಿಕ ಗುಣಮಟ್ಟ ಸುಧಾರಿಸಿದೆ. ಎಲ್ಲ ಶಿಕ್ಷಕರ ಪರಿಶ್ರಮದ ಫಲವಾಗಿ 5 ವರ್ಷಗಳಿಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಪಡೆದಿದೆ. ಶಾಲೆ ಬಿಟ್ಟ ವಿದ್ಯಾರ್ಥಿಗಳನ್ನು ಮರಳಿ ಸಲೆಗೆ ಕರೆತರುವುದು, ಶಾಲೆಗೆ ಅಗತ್ಯವಿರುವ ಪರಿಕರವನ್ನು ಪಾಲಕರಿಂದ ಪಡೆಯುವ ಕಾರ್ಯ ಶ್ಲಾಘನೀಯ. ಹಲವು ಸಾಮಾಜಿಕ ಕಾರ್ಯದಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು ಮುನ್ನಡೆಸುತ್ತಿರುವ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ನಮ್ಮ ಸುತ್ತಲಿನ ಹಳ್ಳಿಗಳ ಹೆಮ್ಮೆಯಾಗಿದ್ದಾರೆ’ ಎಂದು ಕಟ್ಟಡ ಸಮಿತಿ ಸದಸ್ಯ ಜಿ.ಸುರೇಶ್ ಗುಡ್ಡಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-42-123021236

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.