ಶಿಕಾರಿಪುರ: ‘ಉದ್ಯೋಗ ಕ್ಷೇತ್ರದ ಶಕ್ತಿಯಾಗಿ ಮಹಿಳೆ ಬೆಳೆದು ನಿಂತಿದ್ದು, ಅವಳ ಶಕ್ತಿ ಸ್ವರೂಪ ಹೆಮ್ಮರವಾಗಿ ಬೆಳೆದು ನಿಂತಿದೆ’ ಎಂದು ವಿಕಸನ ಸಂಸ್ಥೆಯ ನಿರ್ದೇಶಕಿ ವಿಭಾ ವರ್ಗೀಸ್ ಹೇಳಿದರು.

ತಾಲ್ಲೂಕಿನ ಕಲ್ಮನೆ ಗ್ರಾಮದಲ್ಲಿ ಭಾನುವಾರ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಮನೆಗೆ ಸೀಮಿತವಾಗಿದ್ದ ಮಹಿಳೆ ಇದೀಗ ಉದ್ಯೋಗ ಕ್ಷೇತ್ರದ ಎಲ್ಲೆಡೆ ಆವರಿಸಿದ್ದು, ತನಗೆ ಸಿಕ್ಕ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಕಾರಣಕ್ಕೆ ಉದ್ಯೋಗ ಕ್ಷೇತ್ರಕ್ಕೆ ‘ಅವಳ’ ಉಪಸ್ಥಿತಿ ಅನಿವಾರ್ಯ ಎನ್ನುವ ಸ್ಥಿತಿ ತಲುಪಿರುವುದು ಹೆಮ್ಮೆಯ ಸಂಗತಿ’ ಎಂದರು.

ಪೋಕ್ಸೊ ಕಾಯ್ದೆ ಕುರಿತು ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯ ರಮ್ಯಾ ಮಾಹಿತಿ ನೀಡಿದರು. ಸಖಿ ಕೇಂದ್ರದ ಸುಚಿತ್ರಾ ಮಹಿಳಾ ಕಾನೂನು ಅರಿವು ಕುರಿತು, ಸಂಜೀವಿನಿ ಒಕ್ಕೂಟದ ಅಧ್ಯಕ್ಷ ನಾಗರತ್ನಾ, ಶಿಕ್ಷಕ ನಾಗರಾಜ್ ಸ್ವಯಂ ಕಲಿಕೆ ಮಾಹಿತಿ, ಶಾಹಿ ಗಾರ್ಮೆಂಟ್ಸ್ನ ಮೋನಿಷಾ ಉದ್ಯೋಗ ಕ್ಷೇತ್ರದಲ್ಲಿನ ಸೌಲಭ್ಯ ಕುರಿತು, ಸ್ವಯಂ ಉದ್ಯೋಗ ತರಬೇತಿ ಕೇಂದ್ರದ ದೀಪಾ ತರಬೇತಿ ಶಿಬಿರಗಳ ಮಾಹಿತಿ ನೀಡಿದರು.

ಸಂಪನ್ಮೂಲ ವ್ಯಕ್ತಿ ಶಬಾನಾಬೇಗಂ, ವಿಕಸನ ಸಂಸ್ಥೆ ಸಂಚಾಲಕಿ ವೇದಾವತಿ, ಗಾಮ, ಈಸೂರು, ಕಲ್ಮನೆ, ಚೌಡಿಹಳ್ಳಿ ಗ್ರಾಮದ ಮಹಿಳೆಯರು ಪಾಲ್ಗೊಂಡಿದ್ದರು. ಮಹಿಳಾ ದಿನಾಚರಣೆ ಅಂಗವಾಗಿ ನಡೆಸಿದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-42-305830605

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.