ಶಿಕಾರಿಪುರ: ಹಾಳು ಕೊಂಪೆಯಾಗಿದ್ದ ಪಟ್ಟಣದ ಅಂಬೇಡ್ಕರ್ ಪ್ರತಿಮೆಯ ಜಾಗ ಇದೀಗ ಜನಾಕರ್ಷಣೆಯ ಕೇಂದ್ರವಾಗಿ ರೂಪುಗೊಂಡಿದ್ದು, ಇಲ್ಲಿಗೆ ಭೇಟಿ ನೀಡುವವರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ.

ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿನ ಪ್ರತಿಮೆ ಇಷ್ಟು ದಿನ ಹೋರಾಟಗಳ ಸಂದರ್ಭದಲ್ಲಿ ಹಾರ ಸಮರ್ಪಣೆ, ಮೆರವಣಿಗೆಗೆ ಚಾಲನೆ ನೀಡುವ ಸ್ಥಳವಾಗಿತ್ತು. ಮೆಟ್ಟಿಲು ಇಲ್ಲದ ಕಾರಣ, ಕ್ರೇನ್, ಜೆಸಿಬಿ ಸಹಾಯದಿಂದ ಹಾರ ಅರ್ಪಣೆ ಮಾಡಲಾಗುತ್ತಿತ್ತು. ಮಳೆ ಬಂದರೆ ಸುತ್ತಲಿನ ಪ್ರದೇಶ ಕೆಸರಿನಿಂದ ಆವೃತವಾಗುತ್ತಿತ್ತು. ಇದೀಗ ಪುರಸಭೆ ವತಿಯಿಂದ ಪ್ರತಿಮೆ ಸುತ್ತಲಿನ ಜಾಗವನ್ನು ಅಂದಾಜು ₹8 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಪ್ರತಿಮೆಯ ಹಿಂದೆ ವಿದ್ಯುತ್ ಅಲಂಕೃತ ಗೋಡೆ ನಿರ್ಮಿಸಲಾಗಿದ್ದು, ರಾತ್ರಿ ವೇಳೆ ಇಡೀ ಜಾಗ ಝಗಮಗಿಸುತ್ತದೆ. ಪ್ರತಿಮೆಯ ಅಲಂಕಾರ, ಹಾರ ಅರ್ಪಣೆಗೆ ಎರಡೂ ಕಡೆ ಗುಣಮಟ್ಟದ ಸ್ಟೀಲ್ ಮೆಟ್ಟಿಲು, ಸುತ್ತಲಿನ ಜಾಗಕ್ಕೆ ಸಿಮೆಂಟ್ ಇಟ್ಟಿಗೆ ಜೋಡಣೆ, ಆಕರ್ಷಕ ದೀಪ ಹಾಗೂ ಸುತ್ತಲೂ ಗೇಟ್ ಅಳವಡಿಸಲಾಗಿದೆ. ಅಭಿಮಾನಿಯೊಬ್ಬರು ‘ನಮ್ಮ ಶಿಕಾರಿಪುರ’ ಬೋರ್ಡ್ ಅಳವಡಿಸಿರುವುದರಿಂದ ಆಕರ್ಷಣೆ ಹೆಚ್ಚಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-42-1107237619

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.