ಶಿಕಾರಿಪುರ: ತಾಲ್ಲೂಕಿನ ಹರಗುವಳ್ಳಿ ಗ್ರಾಮದಲ್ಲಿ ಬುಧವಾರ ಮನೆಯಲ್ಲಿ ಆಟವಾಡುವಾಗ ಜ್ಯೂಸ್ ಬಾಟಲಿ ಮುಚ್ಚಳ ನುಂಗಿ ಒಂದೂವರೆ ವರ್ಷದ ಮಗು ಮೃತಪಟ್ಟಿದೆ.
ಗ್ರಾಮದ ವೇದಮೂರ್ತಿ ಗಂಗಾಧರಯ್ಯ ಶಾಸ್ತ್ರಿ ಅವರ ಪುತ್ರ ನಂದೀಶ್ ಮೃತಪಟ್ಟ ಮಗು. ಬಾಟಲಿ ಮುಚ್ಚಳ ನುಂಗಿದಾಗ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.