ಶಿಕಾರಿಪುರ: ‘ಸಮುದಾಯಕ್ಕೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ನ್ಯಾಯ ಒದಗಿಸುವ ಧ್ಯೇಯ ಇಟ್ಟುಕೊಂಡು ಸಹಕಾರ ಸಂಘ ಕಾರ್ಯ ನಿರ್ವಹಿಸಬೇಕು’ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಪಟ್ಟಣದ ಬಂಜಾರ ಭವನದಲ್ಲಿ ಬುಧವಾರ ನಡೆದ ಮರಿಯಮ್ಮ ದೇವಿ ಬಂಜಾರ ಪತ್ತಿನ ಸಹಕಾರ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಂಜಾರ ಸಮುದಾಯಕ್ಕೆ ಆರ್ಥಿಕ ಚೈತನ್ಯ ನೀಡಲು ಸಹಕಾರ ಸಂಘ ಆರಂಭಗೊಳ್ಳುತ್ತಿರುವುದು ಶ್ಲಾಘನೀಯ. ಸದಸ್ಯರು ತಾವು ಪಡೆದ ಉದ್ದೇಶಕ್ಕೆ ಸಾಲದ ಹಣ ವಿನಿಯೋಗಿಸಬೇಕು. ಆಗ ಸೂಕ್ತ ಸಮಯಕ್ಕೆ ಸಾಲ ಮರುಪಾವತಿ ಸಾಧ್ಯ. ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲೂ ಸಂಘ ಗಮನ ನೀಡಬೇಕು’ ಎಂದು ತಿಳಿಸಿದರು.

‘ಸಹಕಾರ ಸಂಘದ ಮೂಲಕ ಸಮುದಾಯದ ಜನರಿಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪ್ರಗತಿ ಹೊಂದುವ ಅಭಿಲಾಷೆ ಇಟ್ಟುಕೊಂಡು ಸಂಘ ಸ್ಥಾಪನೆ ಮಾಡಲಾಗಿದೆ. ಸಮುದಾಯದ ಎಲ್ಲರೂ ಸಂಘದ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಮರಿಯಮ್ಮದೇವಿ ಬಂಜಾರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಮೇಶನಾಯ್ಕ ಮನವಿ ಮಾಡಿದರು.

ಸಾಲೂರು ಮರಿಯಮ್ಮ ಮಠದ ಸೇನಾಭಗತ್ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಬಿ.ವೈ.ವಿಜಯೇಂದ್ರ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜಗೌಡ, ಮುಖಂಡರಾದ ಬಂಗಾರಿನಾಯ್ಕ, ರಾಮಾನಾಯ್ಕ, ಗಂಗಾನಾಯ್ಕ, ರಾಘವೇಂದ್ರನಾಯ್ಕ, ಲೋಹಿತ್ನಾಯ್ಕ, ರವಿನಾಯ್ಕ, ಶೇಖರನಾಯ್ಕ, ಮಂಜಾನಾಯ್ಕ ಹಾಗೂ ಸಂಘದ ಎಲ್ಲ ನಿರ್ದೇಶಕರು, ಸದಸ್ಯರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-42-964231547

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.