ಶಿಕಾರಿಪುರ: ತಾಲ್ಲೂಕಿನಲ್ಲಿ ಪರಿಭಾವಿತ ಅರಣ್ಯ ಪ್ರದೇಶ ಸರ್ವೆ (ಸಮೀಕ್ಷೆ) ಕಾರ್ಯ ನಡೆಯುತ್ತಿದ್ದು, ಜನರಿಗೆ ಈ ಕುರಿತ ಮಾಹಿತಿ ಇಲ್ಲದೆ ಮುಂದಿನ ಭವಿಷ್ಯಕ್ಕೆ ಮಾರಕವಾಗುವ ಲಕ್ಷಣ ಎದ್ದು ಕಾಣುತ್ತಿದೆ ಎನ್ನುವ ಆತಂಕದಲ್ಲಿದ್ದಾರೆ.

ತಾಲ್ಲೂಕಿನಲ್ಲಿ 600 ಹೆಕ್ಟೇರ್ ಪರಿಭಾವಿತ (ಡೀಮ್ಡ್) ಅರಣ್ಯ ಪ್ರದೇಶ ಇದೆ. ಕಂದಾಯ ದಾಖಲೆಗಳಲ್ಲಿ ಅದು ಗೋಮಾಳ, ಧನಗಳಿಗೆ ಮುಫತ್ತು, ಜಾಡಿ ಹೀಗೆ ಹಲವು ಹೆಸರುಗಳಲ್ಲಿವೆ. 2002ರಲ್ಲಿ ಮೊದಲ ಬಾರಿಗೆ ಸರ್ವೆ ಮಾಡಿದಾಗ ಜನರ ಗಮನಕ್ಕೆ ಬಾರದೆ ಅರಣ್ಯ ಎಂದು ನಮೂದಿಸಲಾಗಿತ್ತು. ಈ ಪ್ರದೇಶಗಳಲ್ಲಿ ಸಾಗುವಳಿ ಜಮೀನು, ಮನೆ, ಸರ್ಕಾರಿ ಕಟ್ಟಡ, ಗ್ರಾಮಗಳು ಇದ್ದವು. ಈ ಕಾರಣಕ್ಕೆ ವಿರೋಧ ವ್ಯಕ್ತವಾಗಿತ್ತು. ಇದೀಗ ಪುನಃ ಸರ್ವೆ ಆರಂಭಗೊಂಡಿದೆ ಈಗಲೂ ಜನರಿಗೆ ಅರಿವಿಗೆ ಬಾರದಂತೆ ಸರ್ವೆ ನಡೆಸಲಾಗುತ್ತಿದೆ ಎನ್ನುವುದು ಜನರ ಆರೋಪವಾಗಿದೆ.

ಅಮಟೆಕೊಪ್ಪ, ಹೋತನಕಟ್ಟೆ, ಮಲ್ಲಾಪುರ ಗ್ರಾಮಗಳು ಪರಿಭಾವಿತ ಅರಣ್ಯ ಪ್ರದೇಶದಲ್ಲಿ ಇವೆ. ಕಾನಳ್ಳಿ, ದೇವಿಕೊಪ್ಪ, ಕಣಸೋಗಿ ಸೇರಿ ಹಲವು ಗ್ರಾಮಗಳು ಅರಣ್ಯ ಪ್ರದೇಶದ ಅಂಚಿನಲ್ಲಿವೆ. ಅವುಗಳ ಕುರಿತು ನೀಡುವ ವರದಿ ಹೇಗಿರುತ್ತದೆಯೋ ಎನ್ನುವ ಆತಂಕ ಗ್ರಾಮಸ್ಥರದ್ದು. ಕಾನಳ್ಳಿ, ದೇವಿಕೊಪ್ಪ ಗ್ರಾಮಸ್ಥರು ಸರ್ವೆ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸಿದ್ದು, ‘ಪರಿಭಾವಿತ ಜಾಗ ಗ್ರಾಮಕ್ಕೆ ಅಗತ್ಯವಿದೆ. ಅದನ್ನು ಅರಣ್ಯಕ್ಕೆ ಸೇರಿಸುವುದು ಬೇಡ’ ಎಂದು ಒತ್ತಾಯಿಸಿದ್ದಾರೆ.

ಗೊಂದಲದ ಸ್ಯಾಟ್ಲೈಟ್ ಚಿತ್ರ: ಸರ್ವೆ ಮಾಡಲು ಸ್ಯಾಟ್ಲೈಟ್ ವರದಿಯೂ ಆಧಾರವಾಗಿದ್ದು, ಅದು ಹಲವು ಗೊಂದಲಗಳಿಗೆ ಕಾರಣವಾಗಿದೆ. ತಾಲ್ಲೂಕಿನ ಯರೇಕಟ್ಟೆ ಗ್ರಾಮದ ಸರ್ವೆ ನಂಬರ್ 43ರಲ್ಲಿನ ಕೋವಿನಕೆರೆ ಪ್ರದೇಶ ಅರಣ್ಯ ಎಂದು ನಮೂದಾಗಿದೆ. ಆದರೆ, ವಾಸ್ತವದಲ್ಲಿ ಅದು ಕೆರೆಯಾಗಿದ್ದು, ಅದರ ಸುತ್ತಲಿನ ಪ್ರದೇಶದಲ್ಲಿನ ಮರ, ಗಿಡ ಗಂಟಿಯಿಂದಾಗಿ ಸ್ಯಾಟ್ಲೈಟ್ ಚಿತ್ರದಲ್ಲಿ ಅದು ಅರಣ್ಯ ಎನ್ನುವಂತಾಗಿದೆ. ಹೀಗೆ ತಾಲ್ಲೂಕಿನ 156 ಸರ್ವೆ ನಂಬರ್ಗಳಿಗೂ ಸ್ಯಾಟ್ಲೈಟ್ ಚಿತ್ರ, ವರದಿಗಳಿದ್ದು, ಅವುಗಳನ್ನು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಿಬ್ಬಂದಿ ಹೇಳುತ್ತಾರೆ.

ಜನರ ಗಮನಕ್ಕೆ ಬಂದಿಲ್ಲ: ಸರ್ವೆ ಮಾಡುತ್ತಿರುವುದು ಸರ್ಕಾರಿ ಜಮೀನು ಆಗಿರುವ ಕಾರಣಕ್ಕೆ ಜನರಿಗೆ ನೋಟಿಸ್ ನೀಡುತ್ತಿಲ್ಲ ಎನ್ನುವುದು ಅಧಿಕಾರಿಗಳ ಹೇಳಿಕೆ. ಅಧಿಕಾರಿಗಳು ಬರುತ್ತಾರೆ ಸರ್ವೆ ನಡೆಸಿ ಹೋಗುತ್ತಿದ್ದಾರೆ. ಅವರು ಯಾಕೆ ಬಂದಿದ್ದರು, ಅಳತೆ ಏತಕ್ಕಾಗಿ ಎನ್ನುವ ಗೊಂದಲಕ್ಕೆ ಸಮರ್ಪಕ ಉತ್ತರವೂ ಸಿಗುತ್ತಿಲ್ಲ ಎನ್ನುವುದು ಜನರ ಆತಂಕ.

ಈಗ ನಡೆಯುತ್ತಿರುವ ಸರ್ವೆ ಪಾರದರ್ಶಕವಾಗಿದ್ದು, ಕಂದಾಯ ಅಧಿಕಾರಿ, ಪಿಡಿಒ, ಅರಣ್ಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಸರ್ವೆ ಮಾಡುತ್ತಿದ್ದಾರೆ. ಆಯಾ ಸರ್ವೆ ನಂಬರ್ಗಳಲ್ಲಿ ಸಾಗುವಳಿ ಜಮೀನು, ಮನೆ, ಕಚೇರಿ, ಗ್ರಾಮ ಹೀಗೆ ಏನಿದೆಯೋ ಅದನ್ನು ನಮೂದಿಸಲಾಗುತ್ತಿದೆ ಎಂದು ಅರಣ್ಯ ಅಧಿಕಾರಿಗಳು ಹೇಳುತ್ತಾರೆ.

ಭವಿಷ್ಯಕ್ಕೆ ಮಾರಕ: ‘ಸರ್ವೆ ನಂತರ ಖಾಲಿ ಇರುವ ಜಾಗವನ್ನು ಅರಣ್ಯಕ್ಕೆ ಸೇರಿಸಲಾಗುತ್ತದೆ. ಹಾಗೆ ಆದರೆ, ಜಾನುವಾರುಗಳಿಗೆ ಸಮಸ್ಯೆ ಆಗುತ್ತದೆ. ಭವಿಷ್ಯದಲ್ಲಿ ರಸ್ತೆ ನಿರ್ಮಾಣ, ಶಾಲೆ, ಹಾಸ್ಟೆಲ್, ಸಮುದಾಯ ಭವನ, ವಿದ್ಯುತ್ ಸ್ಟೇಷನ್ ನಿರ್ಮಾಣ ಸೇರಿ ಅಭಿವೃದ್ಧಿ ಕೆಲಸಕ್ಕೆ ಜಾಗ ಇಲ್ಲವಾಗುತ್ತದೆ. ಗೋಮಾಳ, ದನಗಳಿಗೆ ಮುಫತ್ತು, ಜಾಡಿ ಹೀಗೆ ಹಲವು ಕಂದಾಯ ಜಮೀನನ್ನು ಅರಣ್ಯಕ್ಕೆ ಸೇರಿಸುವ ಹುನ್ನಾರವನ್ನು ಕೈಬಿಡಬೇಕು’ ಎಂದು ರೈತ ಸಂಘದ ಮುಖಂಡ, ಮಾಜಿ ಸೈನಿಕ ಕಪ್ಪನಹಳ್ಳಿ ರವಿ ಒತ್ತಾಯಿಸುವರು.

ದೇಶದಾದ್ಯಂತ ನಡೆಯುತ್ತಿದೆ ಸರ್ವೆ

ಒಂದು ಹೆಕ್ಟೇರ್ನಲ್ಲಿ 30 ಸೆ.ಮೀ. ಸುತ್ತಳತೆಯ 50 ಮರಗಳು ಇದ್ದರೆ ಅದನ್ನು ಪರಿಭಾವಿತ ಅರಣ್ಯ ಎಂದು ಪರಿಗಣಿಸಲಾಗುತ್ತದೆ. ಸುಪ್ರಿಂ ಕೋರ್ಟ್ ಸೂಚನೆ ಮೇರೆಗೆ ಈ ಕಾರ್ಯ ದೇಶದಾದ್ಯಂತ ನಡೆಯುತ್ತಿದೆ. ರಾಜ್ಯದಲ್ಲಿ 10 ಲಕ್ಷ ಹೆಕ್ಟೇರ್ ಅನ್ನು ಹೀಗೆ ಗುರುತಿಸಿ ವರದಿ ನೀಡಲಾಗಿತ್ತು. ಅದನ್ನು ಮಲೆನಾಡು, ಕೊಡಗು ಸೇರಿ ಹಲವು ಭಾಗದ ಶಾಸಕರು ವಿರೋಧಿಸಿದ ಕಾರಣ ಪುನಃ ಸರ್ವೆ ನಡೆಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.