ಶಿಕಾರಿಪುರ: ‘ತಾಲ್ಲೂಕಿನಲ್ಲಿ ವೈದ್ಯರ ಕೊರತೆ ಹೆಚ್ಚಿದ್ದು ಸೂಕ್ತ ಕ್ರಮಕ್ಕೆ ಸರ್ಕಾರಕ್ಕೆ ಒತ್ತಾಯಿಸಿದರೂ ಪ್ರಯೋಜನ ಆಗುತ್ತಿಲ್ಲ, ಶೀಘ್ರದಲ್ಲೇ ತಾಲ್ಲೂಕಿನ ವೈದ್ಯರ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು’ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಚಿಕ್ಕಜಂಬೂರು ಗ್ರಾಮದ ವೈದ್ಯರು ವಾರದಲ್ಲಿ 2-3 ದಿನ ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ ಅವರು ಸುತ್ತಲಿನ ಆರೋಗ್ಯ ಕೇಂದ್ರದಲ್ಲೂ ಹೆಚ್ಚುವರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಈ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜಗೌಡ ಪ್ರಶ್ನೆಗೆ ಅವರು ಉತ್ತರಿಸಿದರು.

ತಾಲ್ಲೂಕು ವೈದ್ಯಾಧಿಕಾರಿ ನವೀದ್ ಮಾತನಾಡಿ, ‘ಕಪ್ಪನಹಳ್ಳಿ, ಹಿತ್ತಲ, ತೊಗರ್ಸಿ, ಚಿಕ್ಕಜೋಗಿಹಳ್ಳಿ, ಮಳವಳ್ಳಿ ವೈದ್ಯರು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಮೇ ತಿಂಗಳಲ್ಲಿ ತೆರಳಲಿದ್ದು ಅಲ್ಲಿಯೂ ವೈದ್ಯರ ಕೊರತೆ ಆಗಲಿದೆ, ನೇಮಕ ಪ್ರಕ್ರಿಯೆಗೆ ಯುವ ವೈದ್ಯರು ಆಸಕ್ತಿ ತೋರದಿರುವುದು ಸಮಸ್ಯೆಗೆ ಕಾರಣವಾಗಿದೆ’ ಎಂದು ಸಮಜಾಯಿಷಿ ನೀಡಿದರು.

ಕಳೆದ ವರ್ಷ ಮಳೆ ಹೆಚ್ಚಾದ ಪ್ರದೇಶಕ್ಕೆ ಶಾಸಕರು ಭೇಟಿ ನೀಡಿದ್ದರು, ಅವರಿಗೆ ಈವರೆಗೂ ಪರಿಹಾರ ಸಿಕ್ಕಿಲ್ಲ. 2019ರ ಕೃಷಿ ಸಮ್ಮಾನ್ ಯೋಜನೆ ಹಣ ರೈತರಿಗೆ ಸಿಕ್ಕಿಲ್ಲ, ಹೊಸ ಅರ್ಜಿ ಸಲ್ಲಿಸುವುದಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡಿಲ್ಲ ಅದಕ್ಕೆ ಅವಕಾಶ ಕಲ್ಪಿಸುವುದಕ್ಕೆ ವಿಜಯೇಂದ್ರ ಅವರು ಪ್ರಯತ್ನಿಸಬೇಕು. ಬಸವನಂದಿಹಳ್ಳಿ ಕೆರೆ ಕಾಮಗಾರಿ ಮಾರ್ಚ್ಗೆ ಆರಂಭವಾಗಿದ್ದು, ಮಳೆಗಾಲ ಆರಂಭದೊಳಗೆ ಪೂರ್ಣಗೊಳಿಸಬೇಕು. ಅರಷಿಣಗೆರೆ ರಸ್ತೆ ಹಾಳಾಗಿದ್ದು ಕೂಡಲೇ ಸರಿಪಡಿಸಬೇಕು, ಯರೇಕೊಪ್ಪ ಗ್ರಾಮದ ಶಾಲೆಗೆ ತೆರಳುವ ರಸ್ತೆ ನಿರ್ಮಿಸಬೇಕು ಎಂದು ನಾಗರಾಜಗೌಡ ಒತ್ತಾಯಿಸಿದರು.

‘ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ಸಭೆಗೆ ಪ್ರಗತಿ ವರದಿ ನೀಡಿಲ್ಲ ಅವರ ವಿರುದ್ಧ ಸೂಕ್ತಕ್ರಮ ಕೈಗೊಳ್ಳಲಾಗುವುದು’ ಎಂದು ವಿಜಯೇಂದ್ರ ಹೇಳಿದರು.

‘ಏತ ನೀರಾವರಿ ಮೂಲಕ ಕೆರೆ ತುಂಬಿಸುವುದಕ್ಕೆ ಅನುಮತಿ ಸರ್ಕಾರದಿಂದ ಪಡೆಯಲು ಯತ್ನಿಸುತ್ತೇವೆ. ನೀರಾವರಿ ಇಲಾಖೆಯಿಂದ ರಂಗಮಂದಿರ ಕಾಮಗಾರಿ ನಿಂತಿದ್ದು ಬೇಗನೆ ಪೂರ್ಣಗೊಳಿಸಬೇಕು, ಗರ್ಭಕಂಠ ಕ್ಯಾನ್ಸರ್ ತಡೆಯುವ ಉದ್ದೇಶಕ್ಕೆ ಆರೋಗ್ಯ ಇಲಾಖೆ ಆರಂಭಿಸಿರುವ ಚುಚ್ಚುಮದ್ದು ಉಚಿತ ವಿತರಣೆ ನಿತ್ಯ 200 ಮಾತ್ರ ಪ್ರಗತಿಯಲ್ಲಿದ್ದು ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು. ತಾಳಗುಂದ ಪಶು ಆಸ್ಪತ್ರೆ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಈಸೂರು ಗ್ರಾಮದಲ್ಲಿನ ಕಟ್ಟಡವೂ ನಿರ್ಮಿಸುವುದಕ್ಕೆ ಅನುದಾನಕ್ಕೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ’ ಎಂದು ಶಾಸಕರು ಹೇಳಿದರು.

‘ಕಸಬಾ ಹೋಬಳಿ ಸರ್ವೆ ನಂಬರ್ 173ರಲ್ಲಿ ಪೋಡಿ ಮಾಡುವುದಕ್ಕೆ ರೈತರು ಒತ್ತಾಯಿಸಿದರೂ ಈವರೆಗೂ ಆಗಿಲ್ಲ’ ಎಂದು ಸದಸ್ಯ ಚಂದ್ರುಗೌಡ ಸಭೆಗೆ ಮಾಹಿತಿ ನೀಡಿದರು.

‘ಅರ್ಜಿ ಪರಿಶೀಲನೆ ನಡೆಸಿ ಕೂಡಲೇ ಕ್ರಮಕೈಗೊಳ್ಳುವುದಾಗಿ’ ತಹಶೀಲ್ದಾರ್ ಯು.ವಾಣಿ ಭರವಸೆ ನೀಡಿದರು.

‘ಶುಂಠಿ ವಾಷಿಂಗ್ ಯಂತ್ರದ ನೀರು ಕುಡಿದು ಜಾನುವಾರು ಸಾಯುತ್ತಿವೆ, ಅನಾರೋಗ್ಯಕ್ಕೆ ಒಳಗಾಗುತ್ತಿವೆ. ವಾಷಿಂಗ್ ಘಟಕದವರು ನೀಡುತ್ತಿರುವ ಪ್ರಮಾಣಪತ್ರ ಬೋಗಸ್ ಇರಬಹುದು ಎಂದು ಸದಸ್ಯರು ಹೇಳಿದ್ದು ಈ ಕುರಿತು ತನಿಖೆ ನಡೆಸಲಾಗುವುದು’ ಎಂದು ವಿಜಯೇಂದ್ರ ಭರವಸೆ ನೀಡಿದರು.ತಾ.ಪಂ. ಇಒ ನಾಗರಾಜ್, ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-42-1536077489

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.