ಶಿಕಾರಿಪುರ: ‘ಗ್ರಾಮಠಾಣಾ ಜಾಗ ಅತಿಕ್ರಮಿಸಲು ಸಹಕರಿಸಿ ಕರ್ತವ್ಯ ಲೋಪ ಎಸಗುತ್ತಿರುವ ತೊಗರ್ಸಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಅಮಾನತು ಮಾಡಬೇಕು’ ಎಂದು ಒತ್ತಾಯಿಸಿ ತಂಡಗುಂದ ಗ್ರಾಮಸ್ಥರು ಸೋಮವಾರ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

‘ಗ್ರಾಮಠಾಣಾ ವ್ಯಾಪ್ತಿಯ ಜಾಗವನ್ನು ಕಾನೂನು ಬಾಹಿರವಾಗಿ ಒತ್ತುವರಿ ಮಾಡಲಾಗುತ್ತಿದೆ. ಈ ಕುರಿತು ಜನರು ಗ್ರಾಮ ಪಂಚಾಯಿತಿ ಕಚೇರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮೇ 22ರಂದು ಎಂಟಕ್ಕೂ ಹೆಚ್ಚು ಜನರು ಸರ್ಕಾರಿ ಜಾಗದಲ್ಲಿ ತಗಡಿನ ಶೆಡ್ ನಿರ್ಮಿಸಿ ಅತಿಕ್ರಮಣ ಮಾಡಿದ್ದಾರೆ. ಅದನ್ನು ತಡೆಯಬೇಕಿರುವ ಗ್ರಾಮ ಪಂಚಾಯಿತಿ ಪಿಡಿಒ ಯಾವುದೇ ಕ್ರಮಕ್ಕೆ ಮುಂದಾಗದೆ ಪರೋಕ್ಷವಾಗಿ ಸಹಕಾರ ನೀಡುತ್ತಿದ್ದಾರೆ. ಅವರ ವಿರುದ್ಧ ಹಿರಿಯ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಧರಣಿ ನಡೆಸುತ್ತೇವೆ’ ಎಂದು ಹಿರಿಯ ವಕೀಲ ಎಸ್.ಎಚ್.ಲೋಕೇಶಪ್ಪ ಎಚ್ಚರಿಸಿದರು.

ಪ್ರತಿಭಟನೆ ನಂತರ ತಾಲ್ಲೂಕು ಪಂಚಾಯಿತಿ ಇ.ಒ.ಗೆ ಮನವಿ ಸಲ್ಲಿಸಲಾಯಿತು. ವಕೀಲ ನಿಂಗಪ್ಪ, ಗ್ರಾಮಸ್ಥರಾದ ಕೆ.ವಿ.ವಿನಯ್, ಎಂ.ಬಿ.ಹನುಮಂತ, ಪಕ್ಕೀರಪ್ಪ, ರಾಮಪ್ಪ, ದಾನಪ್ಪ, ಓಂಕಾರಪ್ಪ, ಶಾಂತಪ್ಪ, ಜೋಸೆಫ್, ಸಿ.ಚಿನ್ನಪ್ಪ, ಕೆ.ಅಮೃತ್ರಾಜ್, ನಾಗೇಂದ್ರಪ್ಪ, ಸಿ.ಅಣ್ಣಪ್ಪ ಹಾಗೂ ಇತರರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-42-742885545

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.