ಶಿಕಾರಿಪುರ: ತಾಲ್ಲೂಕಿನ ಮಾರವಳ್ಳಿ ಗ್ರಾಮದ ಬೆಟ್ಟದ ಮಲ್ಲೇಶ್ವರ ದೇವರ ಪರವು ಕಾರ್ಯಕ್ರಮ ಮಂಗಳವಾರ ನೂರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.

ಗ್ರಾಮದ ಎಲ್ಲ ಮನೆಯವರೂ ದೇವರಿಗಾಗಿ ಅನ್ನವನ್ನು ತಯಾರಿಸಿ ರಾಶಿ ಹಾಕಿ ಅದರಲ್ಲಿ ಸಾಂಬಾರ ಬುತ್ತಿ ಕಟ್ಟಿ ಬುಟ್ಟಿಯಲ್ಲಿ ಹೊತ್ತು ಗ್ರಾಮದ ಸಮೀಪದ ಗುಡ್ಡದ ಮೇಲಿರುವ ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲಿ ತೆರಳಿದರು. ದೇವರ ಹೊತ್ತ ಪಲ್ಲಕ್ಕಿ ಭಜನೆ, ವಾದ್ಯ ಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ದೇವರ ಸನ್ನಿಧಿಗೆ ತೆರಳಿತು. ನಂತರ ವಿಶೇಷ ಪೂಜೆ ಸಲ್ಲಿಸಿ ಅಲ್ಲಿನ ಕಲ್ಲಿನ ‘ಕಪಾಲ’ಕ್ಕೆ ನೈವೇದ್ಯ ಅರ್ಪಿಸಿದರು. ನಂತರ ಅನ್ನಸಂತರ್ಪಣೆ ನಡೆಯಿತು.

ದೇವಸ್ಥಾನ ಸಮಿತಿ ಅಧ್ಯಕ್ಷ ಹೇಮಣ್ಣ ಕಡ್ಡಿಪುಡಿ, ಮುಖಂಡರಾದ ನಿಜಲಿಂಗಪ್ಪ, ವೀರಭದ್ರಗೌಡ, ವೀರೇಂದ್ರ ಪಾಟೀಲ್, ಮಹದೇವ ಪಾಟೀಲ್, ಮಂಜಪ್ಪ ಪೂಜಾರಿ, ಲೋಕಣ್ಣ, ಚನ್ನಬಸಯ್ಯ, ಕುಮಾರಸ್ವಾಮಿ ಹಿರೇಮಠ, ಎನ್.ವಿ.ಈರೇಶ್, ಅಶ್ವಿನ್ ಕಡ್ಡಿಪುಡಿ, ಸುಧಾ ರಾಜಶೇಖರ್ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-42-549684891

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.