ಶಿಕಾರಿಪುರ: ತಾಲ್ಲೂಕಿನ ಮಾರವಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಕೂಡಲೇ ಬಗೆಹರಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿ ಸಿಬ್ಬಂದಿಗೆ ಸೋಮವಾರ ಮನವಿ ಸಲ್ಲಿಸಿದರು.

‘ಗ್ರಾಮದಲ್ಲಿ 8–10 ದಿನಗಳಿಂದ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಜನರು ಪರದಾಡುತ್ತಿದ್ದಾರೆ. ಕುಂಬ್ರಿ ಕೆರೆಯಲ್ಲಿನ ಬೋರ್ವೆಲ್ ನೀರು ಇಡೀ ಗ್ರಾಮಕ್ಕೆ ಆಧಾರವಾಗಿದ್ದು, ಅಲ್ಲಿಂದ ನೀರು ತರಲು ಇನ್ನೊಂದು ಪೈಪ್ಲೈನ್ ಅಗತ್ಯವಿದೆ. ಜೆಜೆಎಂ ಯೋಜನೆಯಡಿ ಅನುಮೋದನೆ ಸಿಗದಿರುವುದು, ಅಲ್ಲಿರುವ ಇನ್ನೊಂದು ಬೋರ್ವೆಲ್ ದುರಸ್ತಿ ಆಗದಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ’ ಎಂದು ರೈತ ಸಂಘದ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ವೀರಬಸಪ್ಪ ದೂರಿದರು.

‘ಎರಡು ದಿನಕ್ಕೊಮ್ಮೆ ಬರುವ ನೀರು ಸ್ಥಗಿತಗೊಂಡು 8 ದಿನಗಳಾಗಿವೆ. ಜಾನುವಾರು ತೊಟ್ಟಿ, ಖಾಸಗಿ ಬೋರ್ವೆಲ್, ವೀರಭದ್ರೇಶ್ವರ ದೇವಸ್ಥಾನ ಸಮೀಪದ ಬೋರ್ವೆಲ್ನಲ್ಲಿ ಜನರು ನೀರು ಹಿಡಿಯುತ್ತಿದ್ದಾರೆ. ಜನರ ಸಮಸ್ಯೆಗೆ ಗ್ರಾಮ ಪಂಚಾಯಿತಿ ಆಡಳಿತ ಕೂಡಲೇ ಪರಿಹಾರ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-42-1540563857

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.