ಶಿಕಾರಿಪುರ: ಜೈನ ಮುನಿ ಕಾಮಕುಮಾರ ಮಹಾರಾಜ್ ಅವರ ಹತ್ಯೆ ಖಂಡಿಸಿ ಬುಧವಾರ ಜೈನ ಸಮಾಜದ ಮುಖಂಡರು ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಮುನಿಗಳ ಹತ್ಯೆ ಖಂಡನೀಯವಾಗಿದ್ದು, ಸರ್ಕಾರವು ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಸಮಾಜದ ಮುಖಂಡರು ಒತ್ತಾಯಿಸಿದರು.
‘ಅಧ್ಯಾತ್ಮ ಪ್ರವರ್ತಕರೂ, ಶಾಂತಿ ಪ್ರಿಯರೂ ಮತ್ತು ಅಹಿಂಸೆ ಪ್ರತಿಪಾದಕರೂ ಆಗಿರುವ ಜೈನ ಮುನಿಗಳಿಗೆ ಹಾಗೂ ಸಾಧು ಸಂತರಿಗೆ ಭದ್ರತೆ ನೀಡಬೇಕು. ಇಂತಹ ಘಟನೆಗಳು ಸಮಾಜಕ್ಕೆ ಕೆಟ್ಟ ಸಂದೇಶ ನೀಡಿವೆ. ಇಂತಹ ದುರ್ಘಟನೆ ಮರುಕಳಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಜೈನ ಸಮಾಜದ ಅಧ್ಯಕ್ಷ ಪಾರಸ್ ಮಲ್, ಮುಖಂಡರಾದ ದೇವರಾಜ್, ವಿಜಯರಾಜ್, ಅಶೋಕ್ ಕುಮಾರ್ ಗಾಧಿಯಾ, ರಾಜೇಂದ್ರ ಕುಮಾರ್ ಗೋಗಿ, ಆಶೋಕ್ ಕುಮಾರ್, ಪಾರಸ್ ಮಲ್ ದೋಕಾ, ರಾಜೇಂದ್ರ ಕುಮಾರ್ ಸುರಾನ, ಸುಧೀರ್ ಜೈನ್, ಧರ್ಮೇಂದ್ರ, ಜೆ.ಎನ್. ಚಂದ್ರನಾಥ, ಪ್ರಮೋದ್ ಮುತ್ತಿನ್, ರತ್ನಮ್ಮ, ಸುಮನಾ ಜೈನ್, ಜ್ವಾಲಿನಿ, ಸಮಂಗಲ, ಜಯಶ್ರೀ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.