ಶಿಕಾರಿಪುರ: ‘ಗ್ರಾಮೀಣ ಪ್ರದೇಶದಲ್ಲಿ ಟಗರು ಕಾಳಗ ಹೆಚ್ಚು ಹೆಚ್ಚು ನಡೆಯಬೇಕೇ ವಿನಾ ಜನರ ಕಾಳಗ ಅಲ್ಲ’ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

ಪಟ್ಟಣದ ಮಾರಿಕಾಂಬ ಬಯಲು ರಂಗಮಂದಿರದಲ್ಲಿ ಇತ್ತೀಚೆಗೆ ಆರಂಭಗೊಂಡ ರಾಷ್ಟ್ರ ಮಟ್ಟದ ಟಗರು ಕಾಳಗ ಉದ್ಘಾಟಿಸಿ ಅವರು ಮಾತನಾಡಿದರು.

‘ಜಾತಿ, ಧರ್ಮ, ರಾಜಕೀಯ ಕಾರಣಕ್ಕೆ ಗ್ರಾಮೀಣ ಜನರು ಪರಸ್ಪರ ಜಗಳ ಮಾಡಿ ದ್ವೇಷ ಸಾಧನೆ ಮಾಡಬಾರದು. ಗ್ರಾಮೀಣ ಪ್ರದೇಶದಲ್ಲಿ ಜಂಗೀ ಕುಸ್ತಿ, ಟಗರು ಕಾಳಗ, ಹೋರಿ ಹಬ್ಬ, ಕಬಡ್ಡಿ, ವಾಲಿಬಾಲ್, ಕ್ರಿಕೆಟ್ ಸೇರಿದಂತೆ ಇನ್ನಷ್ಟು ಕ್ರೀಡೆಗಳು ನಡೆಯಲಿ. ಶಿವಶಂಕರ ಸಂದಿಮನೆ ಪರಿಶ್ರಮದ ಕಾರಣಕ್ಕೆ ಟಗರು ಕಾಳಗಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು, ಅವರ ಭವಿಷ್ಯ ಇನ್ನಷ್ಟು ಉಜ್ವಲಗೊಳ್ಳಲಿ’ ಎಂದರು.

‘ಜಂಗೀ ಕುಸ್ತಿ ಸ್ಪರ್ಧೆಗೆ ಹೆಚ್ಚು ಜನರು ಸೇರುತ್ತಿದ್ದ ತಾಲ್ಲೂಕಿನಲ್ಲಿ ಇದೀಗ ಹೋರಿಹಬ್ಬ, ಟಗರು ಕಾಳಗಕ್ಕೂ ಹೆಚ್ಚು ಜನರು ಸೇರುತ್ತಿರುವುದು ಶ್ಲಾಘನೀಯ. ಉತ್ತಮವಾಗಿ ಟಗರು ಕಾಳಗ ಆಯೋಜಿಸಿರುವ ಕಾರಣಕ್ಕೆ ಹೆಚ್ಚು ಟಗರುಗಳು ಪಾಲ್ಗೊಂಡಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಸ್ಪರ್ಧೆ ಆಯೋಜನೆಗೊಳ್ಳಲಿ ಎಂದು ಮಾರಿಕಾಂಬ ದೇವಸ್ಥಾನ ಸಮಿತಿ ಅಧ್ಯಕ್ಷ ಗೋಣಿ ಪ್ರಕಾಶ್ ಹೇಳಿದರು.

ಶಿವಶಂಕರ ಸಂದಿಮನೆ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಮುಖಂಡ ಎನ್.ವಿ.ಈರೇಶ್ ಶುಭ ಹಾರೈಸಿದರು. ಮುಖಂಡರಾದ ಭಂಡಾರಿ ಮಾಲತೇಶ್, ಬಡಗಿ ಫಾಲಾಕ್ಷಪ್ಪ, ಪ್ರಶಾಂತ್ ಜೀನಳ್ಳಿ, ಗೋಣಿ ಯಶವಂತ್, ಜೀನಳ್ಳಿ ಭರತ್, ಸಚಿನ್, ಕಿರಣ್, ರಾಕೇಶ್ ಸಿಂಪಿ, ಸುಮಂತ್ ಬಂತೇರ್, ಗಿರೀಶ್ ಕೋಟಿ, ಪ್ರಕಾಶ್ ಸ್ವಾಮಿ ಇತರರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-42-1887787038

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.