ಶಿಕಾರಿಪುರ: ‘ಪ್ರತಿಯೊಬ್ಬ ಮನುಷ್ಯನಿಗೆ ಗುರು ಮತ್ತು ಗುರಿ ಇದ್ದಾಗ ಬದುಕು ಸಮೃದ್ಧಗೊಳ್ಳುತ್ತದೆ. ಉತ್ತಮ ಅರಿವು, ಆಚಾರ ಇಟ್ಟುಕೊಂಡು ಗುರಿಯೆಡೆಗೆ ಸಾಗಬೇಕು’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಕಡೇನಂದಿಹಳ್ಳಿ ತಪೋಕ್ಷೇತ್ರ ಶ್ರೀಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ಶನಿವಾರ ನಡೆದ ಪಟ್ಟಾಧಿಕಾರ, ಧರ್ಮಸಭೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಬಾಳೆಗೊಂದು ಗೊನೆ ಇರುವಂತೆ ಬಾಳಿಗೊಂದು ಗುರಿ, ಗುರು ಇರಬೇಕು. ಅದಕ್ಕಾಗಿ ವೀರಶೈವ ಧರ್ಮದಲ್ಲಿ ಜ್ಞಾನ ಕ್ರಿಯಾತ್ಮಕ ಬೋಧನೆಗೆ ಪ್ರಾಮುಖ್ಯತೆ ನೀಡಲಾಗಿದೆ. ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ಅಹಿಂಸಾದಿ ಧ್ಯಾನ ಪರ್ಯಂತರವಾದ ದಶಧರ್ಮ ಸೂತ್ರ ಪ್ರತಿಪಾದಿಸಿದ್ದು, ಭಕ್ತರು ಅವುಗಳ ಪಾಲನೆ ಮಾಡಬೇಕು’ ಎಂದರು.

‘ಧರ್ಮ ಜಾಗೃತಿ, ಭಕ್ತರ ಇಷ್ಟಾರ್ಥ ಕರುಣಿಸುವ ಉತ್ತಮ ಧರ್ಮ ಮಾರ್ಗದಲ್ಲಿ ಸಾಗುತ್ತಿರುವ ರೇವಣಸಿದ್ಧೇಶ್ವರ ಸ್ವಾಮೀಜಿ ಸಣ್ಣ ವಯಸ್ಸಿನಲ್ಲೇ ಸಾಧನೆ ಹಾದಿಯಲ್ಲಿದ್ದಾರೆ. ಅವರ ಮಠವನ್ನು ಬಾಳೆಹೊನ್ನೂರು ಶಾಖಾ ಮಠವನ್ನಾಗಿ ಘೋಷಣೆ ಮಾಡಿ ಪಟ್ಟಾಧಿಕಾರ ನೆರವೇರಿಸುತ್ತಿರುವುದು ಹೆಮ್ಮೆ ಎನಿಸುತ್ತಿದೆ. ಸೊರಬ ತಾಲ್ಲೂಕು ದುಗ್ಲಿ ಮಠದ ಜೊತೆಗೆ ಈ ಕ್ಷೇತ್ರವನ್ನೂ ಮುನ್ನಡೆಸಬೇಕು’ ಎಂದು ಹೇಳಿದರು.

ಷಟಸ್ಥಲ ಬ್ರಹ್ಮೋಪದೇಶ ನೀಡಿ, ದಂಡ, ಕಮಂಡಲ ಸಮೇತ ಪಂಚಮುದ್ರಾ ಅನುಗ್ರಹಿಸಿ ಶುಭ ಹಾರೈಸಿದರು.

‘ಶಾಂತಿ, ನೆಮ್ಮದಿಯ ಬದುಕಿಗೆ ಧರ್ಮವೊಂದೇ ಆಶಾಕಿರಣವಾಗಿದೆ. ಕಡೇನಂದಿಹಳ್ಳಿ ತಪೋಕ್ಷೇತ್ರದ ಸ್ವಾಮೀಜಿ ಈ ಭಾಗದ ಭಕ್ತರಿಗೆ ಸದಾ ಧರ್ಮ, ಸಂಸ್ಕೃತಿ, ಪರಂಪರೆ ಆದರ್ಶ ಚಿಂತನೆ ಬೋಧಿಸುತ್ತಾ ಬಂದಿದ್ದು, ಮಠವನ್ನು ರಂಭಾಪುರಿ ಶಾಖಾ ಮಠವನ್ನಾಗಿಸಿರುವುದು ಭಕ್ತರಿಗೂ ಹರ್ಷ ತಂದಿದೆ’ ಎಂದು ಕಾರ್ಯಕ್ರಮ ಉದ್ಘಾಟಿಸಿದ ಹಿರೇಕೆರೂರು ಶಾಸಕ ಯು.ಬಿ.ಬಣಕಾರ್ ತಿಳಿಸಿದರು.

ರೇವಣಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಂಡಗೋಡು ಮಾಜಿ ಶಾಸಕ ವಿ.ಎಸ್.ಪಾಟೀಲ ಅವರು ಮಠದ ನೀಲನಕ್ಷೆ ಬಿಡುಗಡೆ ಮಾಡಿದರು.

ವೀರಶೈವ ಮಹಾಸಭೆ ರಾಜ್ಯ ಘಟಕದ ನಿರ್ದೇಶಕ ಎನ್.ವಿ.ಈರೇಶ್, ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಸ್ವಾಮೀಜಿ, ಸಿಂದಗಿ ಸಾರಂಗಮಠದ ಪ್ರಭು ಸಾರಂಗದೇವ ಸ್ವಾಮೀಜಿ, ತೊಗರ್ಸಿ ಮಹಾಂತ ದೇಶಿಕೇಂದ್ರ ಸ್ವಾಮೀಜಿ, ಚನ್ನಗಿರಿ, ಹಾರನಹಳ್ಳಿ, ರಟ್ಟೀಹಳ್ಳಿ, ನಾಗವಂದ, ಹೊನ್ನಾಳಿ, ಮಳಲಿ, ಕಾರ್ಜುವಳ್ಳಿ ಮಠಗಳ ಸ್ವಾಮೀಜಿ ಇದ್ದರು.

ಪುರೋಹಿತ ವರ್ಗದವರು ವೇದಘೋಷ ನಡೆಸಿದರು. ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-42-1782816230

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.