ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಅಡಿಕೆಯಿಂದ ಸ್ಯಾನಿಟೈಸರ್ ತಯಾರಿಸಿದ ಯುವ ಉದ್ಯಮಿ

Last Updated 19 ಜೂನ್ 2020, 14:39 IST
ಅಕ್ಷರ ಗಾತ್ರ

ಶಿವಮೊಗ್ಗ: ಯುವ ಉದ್ಯಮಿ ನಿವೇದನ್ ಅಡಿಕೆಯಿಂದ ಸ್ಯಾನಿಟೈಸರ್ ತಯಾರಿಸಿದ್ದಾರೆ.

ಹಿಂದೆ ಅಡಿಕೆಯಲ್ಲಿ ಟೀ ಪುಡಿ ತಯಾರಿಸಿದ್ದರು. ನಂತರ ಸುಗಂಧ ದ್ರವ್ಯ, ಅಡಿಕೆ ಜ್ಯೂಸ್ ತಯಾರು ಮಾಡಿದ್ದರು. ಈಗ ಅಡಿಕೆಯಲ್ಲಿ ಸ್ಯಾನಿಟೈಸರ್ ಸಿದ್ಧಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಡಿಕೆಯಲ್ಲಿರುವ ಆ್ಯಂಟಿ ಮೈಕ್ರೋಬಿಯಲ್ ಪದಾರ್ಥ ತೆಗೆದು, ಗ್ಯಾಲಿಕ್ ಆ್ಯಸಿಡ್, ಟ್ಯಾನಿಚ್ ಬಳಸಿಕೊಂಡು ಸ್ಯಾನಿಟೈಸರ್ ಸಿದ್ಧಪಡಿಸಲಾಗಿದೆ. ಅದರಲ್ಲಿ ಶೇ 70ರಷ್ಟು‌ ಆಲ್ಕೋಹಾಲ್‌ ಅಂಶವಿದೆ. ಯಾವುದೇ ಸಿಂಥೆಟಿಕ್ ಬಳಸದೆ‌ ನೈಸರ್ಗಿಕವಾಗಿ ತಯಾರು ಮಾಡಲಾಗಿದೆ, ಪರಿಮಳ ಬರಲು ಕಿತ್ತಳೆ‌ ಆಯಿಲ್ ಬಳಸಲಾಗಿದೆ ಎಂದು ನಿವೇದನ್ ವಿವರ ನೀಡಿದರು.

ಆಯುಷ್ ಇಲಾಖೆಯ ಅನುಮತಿಗೆ ಕಳುಹಿಸಲಾಗಿದೆ. ಒಪ್ಪಿಗೆ ಸಿಕ್ಕರೆ ಮಾರುಕಟ್ಟೆಗೆ ಬಿಡುಗಡೆ ಮಾಢಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT