ಶುಕ್ರವಾರ, ಡಿಸೆಂಬರ್ 2, 2022
19 °C
ಮಾಧ್ಯಮ ಸಂವಾದದಲ್ಲಿ ಎನ್. ಗೋಪಿನಾಥ್

2050ರ ವೇಳೆಗೆ ಶಿವಮೊಗ್ಗ: ಪರಿಕಲ್ಪನೆ ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: 2050ರ ವೇಳೆಗೆ ಶಿವಮೊಗ್ಗ ಜಿಲ್ಲೆಯು ಎಲ್ಲ ಕ್ಷೇತ್ರಗಳಲ್ಲಿ ಅತ್ಯಂತ ಸದೃಢವಾಗಿ ರೂಪುಗೊಳ್ಳಬೇಕಾದರೆ ಅಗತ್ಯವಿರುವ ಯೋಜನೆಗಳ ಅನುಷ್ಠಾನ ಸಂಬಂಧ ಶಿವಮೊಗ್ಗ ವಿಷನ್ ವರದಿ ಸಿದ್ಧಪಡಿಸಲಾಗುತ್ತಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಶಿವಮೊಗ್ಗ ವಿಷನ್– 2050 ವಿಷಯ ಕುರಿತು ಮಾಧ್ಯಮ ಮಿತ್ರರೊಂದಿಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೃಷಿ, ಆರೋಗ್ಯ, ಶಿಕ್ಷಣ, ಕೈಗಾರಿಕಾ ಕ್ಷೇತ್ರಗಳಲ್ಲಿ ಶಿವಮೊಗ್ಗದಲ್ಲಿ ಆಗಬೇಕಿರುವ ಯೋಜನೆಗಳ ಅನುಷ್ಠಾನದ ಬಗ್ಗೆ ಎಲ್ಲ ಕ್ಷೇತ್ರಗಳ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

‘ಶಿವಮೊಗ್ಗದಲ್ಲಿ ಮೂಲಸೌಕರ್ಯ, ಪಾರ್ಕಿಂಗ್ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಕಾಣುತ್ತಿದ್ದೇವೆ. ಶಿವಮೊಗ್ಗ ನಗರ 25-30 ವರ್ಷಗಳಲ್ಲಿ ಬೆಳೆಯಬಹುದಾದ ವೇಗಕ್ಕೆ ಅನುಗುಣವಾಗಿ ರಸ್ತೆ, ಪಾರ್ಕಿಂಗ್, ಮೂಲಸೌಕರ್ಯ ಒದಗಿಸುವ ಬಗ್ಗೆ ಯೋಜನೆ ಅನುಷ್ಠಾನಗೊಳಿಸುವ ಅಗತ್ಯವಿದೆ’ ಎಂದು ಪತ್ರಕರ್ತ ಗೋಪಾಲ್ ಯಡಗೆರೆ ಹೇಳಿದರು.
‘ಕೇಂದ್ರ ಮತ್ತು ರಾಜ್ಯ ಸರ್ಕಾರ ಈಗಾಗಲೇ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಜೊತೆಯಲ್ಲಿ ಪೂರಕ
ವಾಗಿ ಅನುಷ್ಠಾನ ಮಾಡಬಹುದಾದ ಯೋಜನೆಗಳ ಸಲಹೆ ನೀಡಿದಲ್ಲಿ ಕ್ಷೇತ್ರದ ಅಭಿವೃದ್ಧಿ ವೇಗಗತಿಯಲ್ಲಿ ಸಾಗಲಿದೆ’ ಎಂದು ಪತ್ರಕರ್ತ ಅರುಣ್ ಅಭಿಪ್ರಾಯಪಟ್ಟರು.

‘ಕೃಷಿ ‌ಸಂಬಂಧಿಸಿ ಸ್ಥಳೀಯ ಉತ್ಪನ್ನಗಳಿಗೆ ಪೂರಕವಾದ ಆಹಾರ ಮೌಲ್ಯವರ್ಧಿತ ಕೈಗಾರಿಕೆಗಳಿಗೆ ಆದ್ಯತೆ ನೀಡಿದಲ್ಲಿ ಉದ್ಯೋಗ ಸೃಷ್ಟಿ ಸೇರಿದಂತೆ ಜಿಲ್ಲಾ ಮಟ್ಟದಲ್ಲಿ ಆರ್ಥಿಕತೆ ಹೆಚ್ಚಿಸಲು ಸಹಕಾರಿಯಾಗುತ್ತದೆ’ ಎಂದು ಪತ್ರಕರ್ತ ಕೃಷ್ಣ ಬನಾರಿ ತಿಳಿಸಿದರು.

ಪತ್ರಕರ್ತರಾದ ರವಿಕುಮಾರ್, ಅರವಿಂದ ಅಕ್ಲಾಪುರ, ಗುರುರಾಜ್ ಮಾತನಾಡಿದರು. ಎಲ್ಲ ಸಂಗತಿ
ಗಳ ಒಟ್ಟುಗೂಡಿಸಿ ವರದಿ ಅನುಷ್ಠಾನಗೊಳಿಸುವಂತೆ ಸಲ್ಲಿಸಲಾಗುವುದು ಎಂದು ಗೋಪಿನಾಥ್ ಹೇಳಿದರು.

ಸಂಘದ ಸಹ ಕಾರ್ಯದರ್ಶಿ ಜಿ. ವಿಜಯ್‌ಕುಮಾರ್, ಕಾರ್ಯದರ್ಶಿ ವಸಂತ ಹೋಬಳಿದಾರ್, ನಿರ್ದೇಶಕರಾದ ಪ್ರದೀಪ್ ಯಲಿ, ಮರಿಸ್ವಾಮಿ, ರಮೇಶ್ ಹೆಗ್ಡೆ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.