ಶಿವಮೊಗ್ಗ: ಇಲ್ಲಿನ ತ್ಯಾವರೆಕೊಪ್ಪ ಹುಲಿ ಸಿಂಹ ಧಾಮದಲ್ಲಿ ತರಬೇತಿ ನಿರತ ಪಶು ವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಸಾವಿಗೆ ಕಾರಣವಾಗಿದ್ದ ನೀರಾನೆ ‘ಹಂಸಿಣಿ’ ಮಂಗಳವಾರ ಗರ್ಭಾಶಯದ ಸೋಂಕಿನಿಂದ ಮೃತಪಟ್ಟಿದೆ.

ನೀರಾನೆಯ ಗರ್ಭ ಧರಿಸಿ ಮಾರ್ಚ್ಗೆ ಎಂಟು ತಿಂಗಳು ಕಳೆದಿದ್ದರೂ ಪ್ರಸವದ ಲಕ್ಷಣಗಳು ಕಂಡುಬಂದಿರಲಿಲ್ಲ. ಭ್ರೂಣ ಗರ್ಭದಲ್ಲೇ ಮೃತಪಟ್ಟಿತ್ತು. ಈಚೆಗೆ ಆಹಾರ ಸೇವನೆ ಕಡಿಮೆ ಮಾಡಿ ಮಂದವಾಗಿತ್ತು. ಏಪ್ರಿಲ್ 10ರಿಂದ ಮೈಸೂರಿನ ಕರ್ನಾಟಕ ಮೃಗಾಲಯ ಪ್ರಾಧಿಕಾರದ ವನ್ಯಜೀವಿ ಪಶುವೈದ್ಯರ ತಂಡ ನಿಗಾ ವಹಿಸಿ ಅದರ ಆರೋಗ್ಯ ತಪಾಸಣೆಯಲ್ಲಿ ತೊಡಗಿತ್ತು ಎಂದು ಹುಲಿ ಸಿಂಹಧಾಮದ ಸಿಇಒ ಕೆ.ವಿ.ಅಮರಾಕ್ಷರ ತಿಳಿಸಿದ್ದಾರೆ.

ಮರಿ ಮೃತಪಟ್ಟಿದ್ದರಿಂದ ಗರ್ಭಾಶಯದಲ್ಲಿ ಸೋಂಕು ಇರುವುದು ಪತ್ತೆಯಾಗಿತ್ತು. ಈ ಸೋಂಕು ಇರುವುದು ಬಹು ಅಂಗಾಂಗಗಳ ವೈಫಲ್ಯಕ್ಕೆ ಕಾರಣವಾಗಿ ನೀರಾನೆ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

ಹಂಸಿಣಿ ಆಹಾರ ಸೇವಿಸುತ್ತಿಲ್ಲವಾದ್ದರಿಂದ ಮಾರ್ಚ್ 19ರ ರಾತ್ರಿ ಡಾ.ಸಮೀಕ್ಷಾ ಅದರ ಆರೋಗ್ಯ ತಪಾಸಣೆಗೆ ಮುಂದಾಗಿದ್ದರು. ಆಗ ನೀರಾನೆ ದಾಳಿ ನಡೆಸಿ ಗಾಯಗೊಂಡಿದ್ದ ವೈದ್ಯೆ ಮರುದಿನ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.