ಶಿರಾಳಕೊಪ್ಪ: ಸಮೀಪದ ಚಿಕ್ಕಜಂಬೂರು ಗ್ರಾಮದ ನಿವಾಸಿ ಮೊಹಮ್ಮದ್ ಅಲಿಖಾನ ಫಾರ್ಮ್‌ಹೌಸ್‌ನಲ್ಲಿದ್ದ 4 ಹಸುಗಳನ್ನು ಕಳವು ಮಾಡಿದ ಆರೋಪದ ಮೇಲೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕು ಆರಿಕಟ್ಟೆ ಗ್ರಾಮದ ಕುಮಾರ್ ಅವರನ್ನು ಪಟ್ಟಣ ಪೊಲೀಸ ಠಾಣೆ ಸಬ್‌ಇನ್‌ಸ್ಪೆಕ್ಟರ್ ಪ್ರಶಾಂತ ನೇತೃತ್ವ ತಂಡ ಬಂಧಿಸಿದೆ.
ಅವರಿಂದ ಅಂದಾಜು ₹ 2.40 ಲಕ್ಷ ಮೌಲ್ಯದ ಹಸುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆ. 9ರಂದು ಕಳುವಾಗಿದ್ದ ಈ ಹಸುಗಳನ್ನು ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.