ಶಿರಾಳಕೊಪ್ಪ (ಶಿಕಾರಿಪುರ): ‘ಯುಗಾದಿಯು ಹಿಂದೂಗಳ ಹೊಸ ವರ್ಷ ಮಾತ್ರವಲ್ಲ, ಪ್ರಕೃತಿಯಲ್ಲಿ ಮರ ಗಿಡಗಳು ಹೊಸ ಚಿಗುರು ಹೊತ್ತು ಸಂಭ್ರಮಿಸುವ ಕಾಲ. ಹಾಗಾಗಿ ಪ್ರತಿಯೊಬ್ಬರೂ ಯುಗಾದಿಯನ್ನು ಆಚರಿಸಬೇಕು’ ಎಂದು ವಿರಕ್ತಮಠದ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಬಸ್ನಿಲ್ದಾಣದ ಆವರಣದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ವಿಜಯದಶಮಿ ಉತ್ಸವ ಸಮಿತಿ, ಹಿಂದೂ ಸಮಾಜದ ನೇತೃತ್ವದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಮನೆ ಮನೆಗಳಲ್ಲಿ ಯುಗಾದಿ ಆಚರಿಸಿದರೆ ಸಾಲದು. ಇದು ಇಡೀ ಪಟ್ಟಣದ ಸಂಭ್ರಮವಾಗಬೇಕು’ ಎಂದರು.

‘ನಮ್ಮೆಲ್ಲರ ಜೀವನದಲ್ಲಿ ಸಿಹಿ–ಕಹಿ ಏನೇ ಬರಲಿ ಅದನ್ನು ಸಮನಾಗಿ ಸ್ವೀಕರಿಸಬೇಕು ಎನ್ನುವ ಸಂಕೇತದ ಯುಗಾದಿಯು ಎಲ್ಲರಿಗೂ ಒಳ್ಳೆಯದನ್ನುಂಟು ಮಾಡಲಿ’ ಎಂದು ಮುಖಂಡ ಎನ್.ವಿ. ಈರೇಶ್ ಹೇಳಿದರು.

ಕಲಾವಿದರಾದ ಮಹಾಂತೇಶ ಹಡಪದ, ರಮೇಶ್ ಕುರಬಗಟ್ಟಿ, ಜ್ಯೋಗಿ, ಶ್ವೇತಾ ಸಿರಸಿ, ಬಸವರಾಜ ಅವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜಗೌಡ, ಮುಖಂಡರಾದ ತಡಗಣಿ ಮಂಜುನಾಥ್, ಶಿವಕುಮಾರ್, ಮಹೇಂದ್ರಕುಮಾರ್ ಜೈನ್, ಪ್ರಭುಲಿಂಗಪ್ಪ, ಎಂ.ನವೀನ್ಕುಮಾರ್, ಸಂಗಮೇಶ ದುರ್ಗದ್, ಎಚ್.ಎಂ.ಚಂದ್ರಶೇಖರ್, ರವಿ ಶ್ಯಾನುಭಾಗ್, ಎಂ.ಆರ್.ರಾಘವೇಂದ್ರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-42-1344666941

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.