ತೀರ್ಥಹಳ್ಳಿ: ‘ಸಮಾಜವು ಜಾತಿ ತೊರೆಯಲು ತಯಾರಿದೆ. ಆದರೆ ರಾಜಕಾರಣಿಗಳು ಜಾತಿ ವಿಮೋಚನೆಗೆ ಬಿಡುವುದಿಲ್ಲ. ಆಧುನಿಕತೆ ಬೆಳೆದಿದ್ದರೂ ಮೇಲು, ಕೀಳೆಂಬುದು ಸರಿಯಲ್ಲ. ಸಮಾಜದಲ್ಲಿ ಬದಲಾವಣೆ ಆಗಬೇಕು’ ಎಂದು ಶಾಸಕ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.

ತಾಲ್ಲೂಕು ಪಂಚಾಯಿತಿ ಸಭಾಂ ಗಣದಲ್ಲಿ ಮಂಗಳವಾರ ನಡೆದ ಅಂಬೇಡ್ಕರ್ ಮತ್ತು ಬಾಬು ಜಗಜೀವನ ರಾಂ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ರಾಜ್ಯ ಸರ್ಕಾರ ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟ ₹24,000 ಕೋಟಿಯನ್ನು ಗ್ಯಾರಂಟಿ ಯೋಜನೆಗೆ ವಿನಿಯೋಗಿಸುತ್ತಿದೆ. ನಿಮ್ಮ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದರೂ ಪ್ರಶ್ನಿಸದ ನೀವು ಎಂತಹ ನಾಯಕರು? ಸರ್ಕಾರವನ್ನು ಹೊಗಳುವ ಭಟ್ಟಂಗಿತನವನ್ನು ಎಷ್ಟು ದಿನ ಮಾಡುತ್ತೀರಿ. ನಿಮಗೆ ಅನ್ಯಾಯ ಖಂಡಿಸುವ ಶಕ್ತಿ ಇಲ್ಲವೆ?’ ಎಂದು ಮುಖಂಡರನ್ನು ಪ್ರಶ್ನಿಸಿದರು.

‘ಅಸ್ಪೃಶ್ಯತೆ ಎನ್ನುವುದು ಮನುಷ್ಯ ವಿರೋಧಿಯಾಗಿದೆ. ದಲಿತರ ಹೆಸರಿನಲ್ಲಿ ಯಾವ ಮುಖಂಡರೂ ರಾಜಕೀಯ ಮಾಡಬಾರದು. ಹೊಣೆಗಾರಿಕೆ ಅರಿತು ಸಮುದಾಯಕ್ಕೆ ಸಹಾಯ ಮಾಡಬೇಕು. ಅಗತ್ಯ ಬಿದ್ದರೆ ನನ್ನ ಸಹಕಾರ ಪಡೆಯಿರಿ. ಜಾತಿ, ಪಂಗಡದ ಹೆಸರಿನಲ್ಲಿ ಕಿತ್ತಾಡಬೇಡಿ. ‘ವಿಸಿಟಿಂಗ್ ಕಾರ್ಡ್’ ಮುಖಂಡರಾಗಿ ಗುರುತಿಸಿಕೊಳ್ಳುವುದನ್ನು ಗಮನಿಸಿದರೆ ನೋವಾಗುತ್ತದೆ’ ಎಂದು ಹೇಳಿದರು.

‘ಅಸಾಧ್ಯವಾದ ಗ್ರಹಿಕೆಯ ಶಕ್ತಿಯಿಂದ ಅಂಬೇಡ್ಕರ್ ಸಂವಿಧಾನದ ಮೂಲಕ ಎಲ್ಲಾ ವರ್ಗದ ಮಹಿಳೆಯರಿಗೆ ರಾಜಕೀಯ, ಆರ್ಥಿಕ, ಉದ್ಯೋಗ, ಮತದಾನ, ಸಮಾನತೆ, ಆಸ್ತಿಯ ಹಕ್ಕು ಒದಗಿಸಿದರು. ಸಮಾಜದಲ್ಲಿ ಅಂತರ್ಜಾತಿ ವಿವಾಹಗಳ ಸಂಖ್ಯೆ ಹೆಚ್ಚಬೇಕು. ದಮನಿತ ಜಾತಿಗಳು ಒಟ್ಟಾಗಬೇಕು’ ಎಂದು ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ತಿಳಿಸಿದರು.

‘ಕಠೋರವಾದ ಜಾತಿ ವ್ಯವಸ್ಥೆಯ ನೋವಿನಲ್ಲೂ ಭೀಮರಾವ್ ಭಾರತದ ಎಲ್ಲಾ ವರ್ಗಕ್ಕೆ ಸಮಾನತೆ ಒದಗಿಸಿದರು. ಅವರದ್ದು ಕಬೀರರ ಕುಟುಂಬ ಆಗಿತ್ತು. ಮನೆಯಲ್ಲಿನ ಪೂಜೆ, ಪುನಸ್ಕಾರದಿಂದ ಉತ್ತಮ ಸಂಸ್ಕಾರ ಪಡೆದರು’ ಎಂದು ವಕೀಲ ಕಾಸರವಳ್ಳಿ ಶ್ರೀನಿವಾಸ್ ಹೇಳಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ ಎನ್. ಶೆಟ್ಟಿ, ಉಪಾಧ್ಯಕ್ಷೆ ಗೀತಾ, ತಹಶೀಲ್ದಾರ್ ಎಸ್.ರಂಜಿತ್, ಡಿವೈಎಸ್ಪಿ ಅರವಿಂದ ಎನ್. ಕಲಗುಜ್ಜಿ, ಇಒ ಶೈಲಾ ಎನ್., ಮುಖ್ಯಾಧಿಕಾರಿ ಡಿ.ನಾಗರಾಜ, ಬಿಇಒ ಗಿರಿರಾಜ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸುಮನ ಎಚ್.ಕೆ. ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-42-409049712

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.