ಶಿಕಾರಿಪುರ: ‘ಭಜನೆ ಮನಸ್ಸಿನ ಒತ್ತಡ ಕಡಿಮೆ ಮಾಡುವ ಸುಂದರ ಮಾರ್ಗ. ನಿಮ್ಮ ಆರಾಧ್ಯ ದೈವದ ಭಜನೆಯನ್ನು ದಿನಕ್ಕೊಮ್ಮೆಯಾದರೂ ಮಾಡಬೇಕು’ ಎಂದು ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ಸುನಿಲ್ಕುಮಾರ್ ಭಗವಂತ್ಕರ್ ಸಲಹೆ ನೀಡಿದರು.

ತಾಲ್ಲೂಕಿನ ಗಾಮ ಗ್ರಾಮದಲ್ಲಿ ಗುರುವಾರ ನಡೆದ ವಿಠ್ಠಲ– ರುಕುಮಾಯಿ ದಿಂಡಿ ಉತ್ಸವದಲ್ಲಿ ಮಾತನಾಡಿದ ಅವರು, ‘ಭಜನೆ ಮೂಲಕ ದೈವ ಒಲಿಸಿಕೊಂಡ ಸಾಕಷ್ಟು ಸಂತರು ಇತಿಹಾಸದಲ್ಲಿ ಇದ್ದಾರೆ. ಪಾಂಡುರಂಗನ ಸ್ಮರಣೆ ಮನಸ್ಸು, ದೇಹಕ್ಕೆ ಅದ್ಭುತ ಶಕ್ತಿ, ಚೈತನ್ಯ ನೀಡುತ್ತದೆ ಎನ್ನುವುದಕ್ಕೆ ಹಲವು ನಿದರ್ಶನಗಳಿವೆ. ಎಲ್ಲರೂ ತಮ್ಮ ಆರಾಧ್ಯ ದೈವದ ಸ್ಮರಣೆಯನ್ನು ಭಜನೆ ಮೂಲಕ ಮಾಡಬೇಕು’ ಎಂದರು.

ಮುಖಂಡ ಎನ್.ವಿ. ಈರೇಶ್ ದೇವರ ರಾಜಬೀದಿ ಉತ್ಸವಕ್ಕೆ ಚಾಲನೆ ನೀಡಿದರು. ಸಂತರಾದ ಡಿ.ಆರ್.ರಾಮಪ್ಪ, ಕೃಷ್ಣಮೂರ್ತಿ ಬೆನ್ನೂರು ಬುಧವಾರ ಪೋಥಿ ಸ್ಥಾಪನೆ ಮೂಲಕ ಧಾರ್ಮಿಕ ಕಾರ್ಯಕ್ಕೆ ಚಾಲನೆ ನೀಡಿ ಪಂಚಾಮೃತಾಭಿಷೇಕ, ಪುಷ್ಪಾಲಂಕಾರ ಮಾಡಿದರು.

ಜಿ.ಎಚ್. ಸತೀಶ್ಕುಮಾರ್ ಭದ್ರಾವತಿ ಅವರಿಂದ ಪಂಢರಿ ಸಂಪ್ರದಾಯದ ಕನ್ನಡ ಕೀರ್ತನೆ ಹಾಡುಗಾರಿಕೆ ನಡೆಯಿತು. ವಿವಿಧ ಭಜನಾ ಮಂಡಳಿಯಿಂದ ಪಾಳಿ ಭಜನೆ ನಡೆಯಿತು. ಚಂದ್ರಶೇಖರ ಗುರೂಜಿ ಅವರಿಂದ ಕಾಕಡಾರತಿ ಭಜನೆ, ವಿಶೇಷ ಪೂಜೆ ನಡೆಯಿತು.

ಮುಖಂಡರಾದ ಕರಿಬಸಪ್ಪ ಪುಠಾಣ್ಕರ್, ಆರ್.ಪವನ್ ಕುಮಾರ್, ಟಿ.ಎನ್.ಅರುಣ, ಕೆ.ನಾಗರಾಜ್, ವಿಠೋಬ ದಾವಸ್ಕರ್, ಜಿ.ಯುವರಾಜ್, ಧನಂಜಯ, ಧರ್ಮದರ್ಶಿ ಸಮಿತಿಯ ಮಂಜಪ್ಪ ದಾವಸ್ಕರ್, ಟಿ.ವಿ.ಹರೀಶ್, ವಿಜಯಕುಮಾರ್, ಸತೀಶ್ ಆಚಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-42-898320891

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.