ಸಾಗರ: ‘ಭಕ್ತಿ ಮಾರ್ಗದಿಂದ ಮಾತ್ರ ದೇವರ ಸಾನ್ನಿಧ್ಯದತ್ತ ಸಾಗಲು ಸಾಧ್ಯ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಅಭಿಪ್ರಾಯ ಪಟ್ಟರು.

ತಾಲ್ಲೂಕಿನ ತುಂಬೆ ಬೆಂಕಟವಳ್ಳಿಯಲ್ಲಿ ಈಚೆಗೆ ನಡೆದ ಶ್ರೀರಾಮೇಶ್ವರ ದೇವಸ್ಥಾನದ ನೂತನ ಶಿಲಾಮಯ ಗರ್ಭಗುಡಿ, ದೇವರ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

‘ಕೇವಲ ಹಣ ಅಥವಾ ತೋರಿಕೆಯ ಆಚರಣೆಗಳಿಂದ ದೇವರನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ. ಶ್ರದ್ಧೆಯಿಂದ ಕೂಡಿದ ಭಕ್ತಿಯನ್ನು ತೋರಿಸುವುದು ಭಗವಂತನಿಗೆ ಹತ್ತಿರವಾಗುವ ಮಾರ್ಗವಾಗಿದೆ’ ಎಂದರು.

‘ಸಣ್ಣ ಸಣ್ಣ ಗ್ರಾಮಗಳ ಜನರಲ್ಲಿರುವ ಒಗ್ಗಟ್ಟು ಕಠಿಣ ಕೆಲಸಗಳನ್ನು ಸುಲಭ ವಾಗಿಸುತ್ತದೆ ಎಂಬುದಕ್ಕೆ ಇಲ್ಲಿ ನಡೆದಿರುವ ಕಾರ್ಯವೇ ಸಾಕ್ಷಿ. ಗ್ರಾಮದಲ್ಲಿ ವಾಸ್ತು ಪ್ರಕಾರ ಸುಂದರವಾದ ದೇವಸ್ಥಾನ ನಿರ್ಮಾಣವಾಗಿರುವುದು ಇಲ್ಲಿನ ಗ್ರಾಮಸ್ಥರ ಶ್ರದ್ಧಾ ಭಕ್ತಿಯ, ಕಾರ್ಯಕ್ಷಮತೆಯ ಸಂಕೇತವಾಗಿದೆ’ ಎಂದು ಹೇಳಿದರು.

ಪ್ರಧಾನ ತಂತ್ರಿಗಳಾದ ವೇದಮೂರ್ತಿ ಸಮರ್ಥ ಭಟ್ ಮಂಕಳಲೆ, ಸಿಗಂದೂರು ದೇವಾಲಯದ ಅರ್ಚಕ ಶೇಷಗಿರಿ ಭಟ್, ವರದಪುರದ ಶ್ರೀಧರ ಸೇವಾ ಮಹಾಮಂಡಲದ ಅಧ್ಯಕ್ಷ ಎಂ.ಜಿ.ಕೃಷ್ಣಮೂರ್ತಿ, ವಿ.ಶ್ರೀಧರ ಭಟ್, ಅರುಣ್ ಬೆಂಕಟವಳ್ಳಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-42-1077076196

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.