ತ್ಯಾಗರ್ತಿ: ಸಾಗರ ತಾಲ್ಲೂಕಿನ ಬಿಳಿಸಿರೆ ಗ್ರಾಮದಲ್ಲಿ ಸಾಮಾಜಿಕ ಬಹಿಷ್ಕಾರದ ಕೂಗು ಕೇಳಿ ಬಂದಿದ್ದು, ಬುಧವಾರ ತಹಶೀಲ್ದಾರ್ ಪ್ರದೀಪ್ ನಿಕ್ಕಂ ನೇತೃತ್ವದ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಶಾಂತಿ ಸಭೆ ನಡೆಸಿತು.

ಬಿಳಿಸಿರಿ ಗ್ರಾಮದ ಕಲಾವತಿ, ಹೇಮಾವತಿ ಮತ್ತು ಗಣಪತಿ, ಸುರೇಂದ್ರ ದಾಯಾದಿಗಳಾಗಿದ್ದು, ಇವರ 4 ಕುಟುಂಬಗಳನ್ನು ಗ್ರಾಮದ ಇತರರು ಸಾಮಾಜಿಕವಾಗಿ ಬಹಿಷ್ಕರಿಸಿದ್ದರು ಎನ್ನಲಾಗಿದೆ. ಈ ಅವಮಾನ ತಾಳಲಾರದೆ ಕಲಾವತಿ ಅವರು ಏ. 27ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು– ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಕಲಾವತಿ ಅವರ ಪತಿಯಾದ ದಾನಶೇಖರ ಅವರು ಕೆಲವು ತಿಂಗಳುಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದು, ಗ್ರಾಮದ ಕೆಲಸ ಕಾರ್ಯಗಳಲ್ಲಿ ಪಾಲ್ಗೊಂಡಿರಲಿಲ್ಲ. ಈ ಕಾರಣಕ್ಕೆ ಗ್ರಾಮ ಸಮಿತಿಯು ದಿನವೊಂದಕ್ಕೆ ₹ 1,000ದಂತೆ ದಂಡ ವಿಧಿಸಿತ್ತು. ಆ ದಂಡವನ್ನು ಪಾವತಿಸಿಲ್ಲ ಎಂದು ಈ ನಾಲ್ಕೂ ಕುಟುಂಬಗಳಿಗೆ ಗ್ರಾಮದಿಂದ ಬಹಿಷ್ಕಾರದ ಶಿಕ್ಷೆ ನೀಡಲಾಗಿತ್ತು.

ಊರಿನ ಸಮಿತಿಯವರು ಈ ಸಮಸ್ಯೆ ಬಗೆಹರಿಸಲು ಒಂದು ವಾರ ಸಮಯ ಕೇಳಿದ್ದರು. ವಾರವಾದರೂ ಸಮಿತಿ ಈ ಬಗ್ಗೆ ತೀರ್ಮಾನಿಸಲಿಲ್ಲ. ಆದ್ದರಿಂದ ಸಾಗರ ಗ್ರಾಮಾಂತರ ಠಾಣೆಯಲ್ಲಿ ಕುಟುಂಬದವರು ದೂರು ದಾಖಲಿಸಿದ್ದರು. ಆಗ ಪೊಲೀಸರು ಎರಡೂ ಕಡೆಯವರನ್ನೂ ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದ್ದರು. ಆಗ ಗ್ರಾಮ ಸಮಿತಿಯವರು ‘ಬಹಿಷ್ಕಾರ ಹಾಕಿಲ್ಲ’ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದರು. ಆದರೆ, ‘ಗ್ರಾಮದಲ್ಲಿ ನಮ್ಮ ಕುಟುಂಬಕ್ಕೆ ಬಹಿಷ್ಕಾರ ಮುಂದುವ ರಿದಿದೆ’ ಎಂದು ಬಹಿಷ್ಕಾರಕ್ಕೊಳಗಾದ ನಾಲ್ವರೂ ದೂರಿದ್ದರು.

ಈ ಕಾರಣಕ್ಕೆ ಅಧಿಕಾರಿಗಳ ತಂಡ ಗ್ರಾಮದಲ್ಲಿ ಸಭೆ ನಡೆಸಿತು. ಸಭೆಯಲ್ಲಿ ತಹಶೀಲ್ದಾರ್ ಪ್ರದೀಪ್ ನಿಕ್ಕಂ, ‘ಗ್ರಾಮದ ಉಳಿವಿಗೆ ಸಮಿತಿ ಅನಿವಾರ್ಯ. ಆದರೆ, ಗ್ರಾಮ ಸಮಿತಿಗೆ ದಂಡ ಹಾಕಲು ಅಧಿಕಾರವಿಲ್ಲ. ಇದು ಮುಂದುವರಿದರೆ ದೂರುದಾರರು ಮತ್ತು ಆರೋಪಿ ಗಳಿಬ್ಬರ ವಿರುದ್ಧವೂ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

‘ಸಾಮಾಜಿಕ ಬಹಿಷ್ಕಾರ ಇನ್ನು ಮುಂದೆ ಕಂಡುಬಂದಲ್ಲಿ ಜಿಲ್ಲಾಡಳಿತ ಸುಮ್ಮನೆ ಬಿಡುವುದಿಲ್ಲ. ಸೌಹಾರ್ದ ಮೂಡುವವರೆಗೆ ಅಧಿಕಾರಿಗಳು, ಸಿಬ್ಬಂದಿ ಗಮನಿಸುತ್ತಿರುತ್ತಾರೆ’ ಎಂದು ಸ್ಪಷ್ಟಪಡಿಸಿದರು.

ಅಧಿಕಾರಿಗಳ ತಂಡದಲ್ಲಿ ವಿ.ಎ. ರವಿಚಂದ್ರನ್, ಪಡವಗೋಡು ಗ್ರಾಮ ಪಂಚಾಯಿತಿ ಪಿಡಿಒ ಉಲ್ಲಾಸ್, ಆರ್.ಐ.ಗುರುರಾಜ್, ಮಹಿಳಾ ಸಾಂತ್ವನ ಕೇಂದ್ರದ ಸುಚಿತ್ರಾ, ಮೌನೇಶ್ ಬಡಿಗೇರ, ಸಮಾಜ ಕಲ್ಯಾಣ ಇಲಾಖೆಯ ಸುರೇಶ್ ಇದ್ದರು. ಯುವ ಸಂಘ– ಸಂಸ್ಥೆಗಳ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಗುರುಮೂರ್ತಿ ಗುತ್ತನಹಳ್ಳಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-42-1601364806

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.