ತೀರ್ಥಹಳ್ಳಿ: ‘ಬಿಜೆಪಿ ಮುಖಂಡರು ಮರಳು ದಂಧೆಯ ಹಣದಲ್ಲೇ ಬೃಹತ್ ಮನೆ ನಿರ್ಮಿಸಿಕೊಂಡಿದ್ದಾರೆ. ಭ್ರಷ್ಟಾಚಾರಕ್ಕೆ ಯಾವುದೇ ಪಕ್ಷ ಹೊರತಾಗಿಲ್ಲ. ಮರಳು ಅಕ್ರಮ ದಂಧೆಯ ಪಾಲು ಕಡಿಮೆಯಾಗಿದ್ದಕ್ಕೆ ಶಾಸಕ ಆರಗ ಜ್ಞಾನೇಂದ್ರ ಮರಳು ಅಡ್ಡೆಗಳಿಗೆ ಅಲೆಯುತ್ತಿದ್ದಾರೆ’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಆರೋಪಿಸಿದರು.

‘ಅಧಿಕಾರಿಗಳಿಗೆ ಫೋನ್ ಮಾಡಿ ಮರಳು ದಂಧೆ ಮಾಡಲಿ ಬಿಡಿ ಎನ್ನುತ್ತಿದ್ದ ಜ್ಞಾನೇಂದ್ರ, ಈಗ ಕ್ವಾರಿಗಳಲ್ಲಿ ಕುರ್ಚಿ ಹಾಕಿ ಕುಳಿತು ಪ್ರತಿಭಟನೆ ಮಾಡುತ್ತಿರುವ ಹಿಂದಿನ ಉದ್ದೇಶ ಏನಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಹೆದ್ದೂರು ನವೀನ್ ಊರಿನಲ್ಲಿಯೂ ಮರಳು ದಂಧೆ ನಡೆದಿದೆ. ಪಕ್ಷ ಸಂಘಟನೆಗೆ ಹಣ ಬೇಕೆಂದು ದಂಧೆ ಮಾಡುವವರಿಂದ ಹಣ ಪಡೆದಿರುವುದು ಯಾರೆಂಬ ಮಾಹಿತಿಯನ್ನು ಸಾರ್ವಜನಿಕರಿಗೆ ಕೊಡಿ’ ಎಂದು ಆಗ್ರಹಿಸಿದರು.

‘ಸರ್ಕಾರ ತಹಶೀಲ್ದಾರ್ ಅವರನ್ನು ನೇಮಿಸಿದೆ. ಅವರನ್ನು ನಾನು ತೀರ್ಥಹಳ್ಳಿಗೆ ಕರೆಸಿಲ್ಲ. ತಹಶೀಲ್ದಾರ್ ತಪ್ಪಿದ್ದರೆ ಪ್ರಶ್ನೆ ಮಾಡಬಹುದು. ದ್ವೇಷ ರಾಜಕಾರಣಕ್ಕಾಗಿ ಸುಳ್ಳು ಆರೋಪಗಳನ್ನು ಮಾಡುವುದು ನಿಲ್ಲಿಸಬೇಕು. ಆರಗ ಅವರು ಮರಳು ದಂಧೆಯ ದುಡ್ಡು ಪಡೆದಿಲ್ಲ ಎಂದು ದೇವಸ್ಥಾನದಲ್ಲಿ ಪ್ರಮಾಣ ಮಾಡಲಿ. ನಾನೂ ಪ್ರಮಾಣಕ್ಕೆ ಸಿದ್ಧನಿದ್ದೇನೆ’ ಎಂದು ಸವಾಲೆಸೆದರು.

‘ಬಿಜೆಪಿ ಸಿದ್ಧಾಂತ ದೇಶವನ್ನು ಆಪತ್ತಿಗೆ ತಳ್ಳುತ್ತಿದೆ. ಪ್ರಧಾನಿ ಮೋದಿ ಆಡಳಿತದ ತೊಂದರೆಗಳ ಅರಿವು ಈಗ ಸಾಮಾನ್ಯ ಜನರಿಗೆ ಅರ್ಥವಾಗುತ್ತಿದೆ. ನೀಟ್–ಯುಜಿ ಪರೀಕ್ಷೆ ನಡೆಸುವ ಹಕ್ಕನ್ನು ರಾಜ್ಯಕ್ಕೆ ವಹಿಸಬೇಕು. ಪ್ರಶ್ನೆ ಪತ್ರಿಕೆ ಸೋರಿಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು. ಕೇಂದ್ರದ ವೈಫಲ್ಯದಿಂದ ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳ ಮುಂದೆ ಶಾಸಕರು ಕ್ಷಮೆಯಾಚಿಸಬೇಕು’ ಎಂದು ಒತ್ತಾಯಿಸಿದರು.

‘ವಿಧಾನಸಭಾ ಅಧಿವೇಶನ ನಡೆಯುವಾಗ ಆರಗ ಜ್ಞಾನೇಂದ್ರ ರಾಜಕೀಯ ಓಡಾಟದಲ್ಲಿರುತ್ತಾರೆ. ಅಧಿವೇಶನದ ಮೌಲ್ಯ ಅವರಿಗೆ ಗೊತ್ತಿಲ್ಲ. 50 ವರ್ಷದ ರಾಜಕಾರಣದಲ್ಲಿ ಜನರಿಗಾಗಿ ಅವರು ಏನನ್ನೂ ಮಾಡಿಲ್ಲ. ಎಲ್ಲವನ್ನೂ ಅವರಿಂದಲೇ ಪಡೆದುಕೊಂಡಿದ್ದಾರೆ. ಚುನಾವಣೆ ನನ್ನ ಗುರಿ ಅಲ್ಲ. ಪರಿಶುದ್ಧ ರಾಜಕಾರಣವೇ ನನ್ನ ಗುರಿ’ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಅಶ್ವಲ್ ಗೌಡ, ಅಕ್ಸಲ್ ಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ಕೆಳಕೆರೆ ಪೂರ್ಣೇಶ್, ಪಟ್ಟಣ ಘಟಕದ ಅಧ್ಯಕ್ಷ ಶ್ರೇಯಸ್ ರಾವ್, ಮುಖಂಡರಾದ ಬಾಳೇಹಳ್ಳಿ ಪ್ರಭಾಕರ್, ವಿಲಿಯಂ ಮಾರ್ಟಿಸ್, ಅಮರನಾಥ ಶೆಟ್ಟಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-42-1478490712

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.