ಶಿವಮೊಗ್ಗ: ‘ನಗರದ ಎನ್.ಟಿ. ರಸ್ತೆಯ ಕ್ಲಾರ್ಕ್ ಪೇಟೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏ.28ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಎಲುಬು– ಕೀಲು ತಪಾಸಣಾ ಉಚಿತ ಶಿಬಿರ ನಡೆಯಲಿದೆ’ ಎಂದು ಯೆನೆಪೋಯ ಆಸ್ಪತ್ರೆಯ ಮಾರ್ಕೇಟಿಂಗ್ ವಿಭಾಗದ ಮುಖ್ಯಸ್ಥ ವಿಜಯಾನಂದ ಶೆಟ್ಟಿ ತಿಳಿಸಿದರು.

‘ಶಿಬಿರದಲ್ಲಿ ಮಂಡಿ ಬದಲಿ ಶಸ್ತ್ರಚಿಕಿತ್ಸೆ, ಕ್ರೀಡಾ ಗಾಯಗಳು ಮತ್ತು ಬೆನ್ನುಮೂಳೆ ಸಮಸ್ಯೆಗಳ ಕುರಿತು ತಪಾಸಣೆ ಹಾಗೂ ಸಲಹೆ ನೀಡಲಾಗುತ್ತದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಯೆನೆಪೋಯ ಆಸ್ಪತ್ರೆಯ ವೈದ್ಯರಾದ ಜನಾರ್ದನ ಐತಾಳ ಮತ್ತು ಸವಿತ್ ವಿ. ಶೆಟ್ಟಿ ರೋಗಿಗಳ ತಪಾಸಣೆ ಮಾಡಿ, ಮಾರ್ಗದರ್ಶನ ನೀಡಲಿದ್ದಾರೆ. ಅಗತ್ಯವಿರುವವರಿಗೆ ಕಡಿಮೆ ದರದಲ್ಲಿ ಶಸ್ತ್ರಚಿಕಿತ್ಸೆ ಸೌಲಭ್ಯವೂ ದೊರೆಯಲಿದೆ. ಇದೇ ವೇಳೆ ಯೆನ್ ಆರೋಗ್ಯ ಕಾರ್ಡ್ ನೊಂದಣಿ ಸಹ ನಡೆಯಲಿದ್ದು, ವಿವಿಧ ಚಿಕಿತ್ಸೆಗಳ ಮೇಲೆ ವಿಶೇಷ ರಿಯಾಯಿತಿಗಳು ಲಭ್ಯವಿರುತ್ತವೆ’ ಎಂದು ಮಾಹಿತಿ ನೀಡಿದರು.

ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 9448988048ಗೆ ಸಂಪರ್ಕಿಸಬಹುದು.ರಿಯಾಜ್ ಅಹ್ಮದ್, ನಿಸಾರ್ ಅಹಮ್ಮದ್, ಶಫಿಕ್ ಅಹಮ್ಮದ್ ಅನಿಸ್ ಇಕ್ಬಾಲ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-42-1343061418

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.