ಶಿವಮೊಗ್ಗ: ‘ಬದುಕಿನ ಕೊನೆಯ ಉಸಿರು ಇರುವವರೆಗೂ ಹೋರಾಟ ಮುಂದುವರಿಸುತ್ತೇನೆ. ಮತ್ತೊಮ್ಮೆ ರಾಜ್ಯದ ಉದ್ದಗಲಕ್ಕೂ ಓಡಾಡಿ ಜನರ ಪ್ರೀತಿ, ವಿಶ್ವಾಸ ಗಳಿಸಿ ಸ್ವಚ್ಛ, ದಕ್ಷ ಮತ್ತು ಪ್ರಾಮಾಣಿಕ ಸರ್ಕಾರ ತರಲು ಪ್ರಯತ್ನ ಮಾಡುವೆ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಇಲ್ಲಿನ ಅಲ್ಲಮಪ್ರಭು ಮೈದಾನದಲ್ಲಿ ಭಾನುವಾರ ನಡೆದ ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವದಲ್ಲಿ 50 ವರ್ಷಗಳ ರಾಜಕೀಯ ಬದುಕಿನ ಹಿನ್ನೆಲೆಯಲ್ಲಿ ತವರಿನ ಕೃತಜ್ಞತೆ ಸ್ವೀಕರಿಸಿ ಅವರು ಮಾತನಾಡಿದರು.

‘ಪಂಚಪೀಠಾಧೀಶ್ವರರ ಸಮಕ್ಷಮ ಅಭಿನಂದನೆ ಪಡೆದಿರುವುದು ನನ್ನ ಮುಂದಿನ ಭವಿಷ್ಯಕ್ಕೆ ಆಶೀರ್ವಾದ ಎಂದು ಭಾವಿಸಿದ್ದೇನೆ. ಪಕ್ಷ, ಜಾತಿ ಬೇಧ ಎನ್ನದೇ, ದೀನ–ದಲಿತರಿಗೆ ಅನ್ಯಾಯ ಮಾಡದೇ, ಎಲ್ಲರೂ ಒಂದಾಗಿ ಬಾಳಲು ಏನೇನು ಮಾಡಬೇಕೋ ಅದನ್ನು ಮುಂದಿನ ದಿನಗಳಲ್ಲಿ ಮಾಡುವೆ’ ಎಂದರು.

‘ಬೂಕನಕೆರೆಯಲ್ಲಿ ಹುಟ್ಟಿ, ಮಂಡ್ಯದಲ್ಲಿ ಬೆಳೆದು, ಬೆಂಗಳೂರನ್ನು ರಾಜಕೀಯ ಕಾರ್ಯಕ್ಷೇತ್ರ ಮಾಡಿಕೊಂಡರೂ 50 ವರ್ಷಗಳ ರಾಜಕೀಯ ಬದುಕಿನಲ್ಲಿ ಶಿಕಾರಿಪುರದ ಜನ ತೋರಿದ ಪ್ರೀತಿ–ವಾತ್ಸಲ್ಯ ಹಾಗೂ ನೀಡಿದ ಸಹಕಾರವನ್ನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ’ ಎಂದು ಭಾವುಕರಾದರು.

ಕೃತಜ್ಞತಾ ಸಮರ್ಪಣೆ ಮಾಡಿ ಮಾತನಾಡಿದ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ‘ವೀರಶೈವ–ಲಿಂಗಾಯತ ಸಮಾಜದ ವತಿಯಿಂದ ಎಸ್.ನಿಜಲಿಂಗಪ್ಪ, ವೀರೇಂದ್ರ ಪಾಟೀಲ, ಎಸ್.ಆರ್.ಬೊಮ್ಮಾಯಿ, ಜೆ.ಎಚ್.ಪಟೇಲ್, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ತಲಾ ಒಮ್ಮೊಮ್ಮೆ ಮುಖ್ಯಮಂತ್ರಿ ಆಗಿದ್ದಾರೆ. ಆದರೆ, ರಾಜಕೀಯದಲ್ಲಿ ರಕ್ತವನ್ನು ಬೆವರಾಗಿ ಸುರಿಸಿ ಮೊಣಕಾಲು, ಮೊಣಕೈ ಊರಿ ಸ್ವಯಂಭೂ ನಾಯಕರಾಗಿ ಮೇಲೆದ್ದು ನಾಲ್ಕು ಬಾರಿ ಮುಖ್ಯಮಂತ್ರಿ ಆದವರು ಯಡಿಯೂರಪ್ಪ’ ಎಂದು ಬಣ್ಣಿಸಿದರು.

‘ಅವರು ಹೋರಾಟದ ಹಾದಿಯಲ್ಲಿ ಶಿವಮೊಗ್ಗದ ಜೈಲಿನಲ್ಲಿ ವಾಸ ಮಾಡಿದ್ದರು. 1975–76ರಲ್ಲಿ ಬಳ್ಳಾರಿ ಜೈಲಿನಲ್ಲಿ ಅವರೊಂದಿಗೆ ಇರುವ ಅವಕಾಶ ನನಗೂ ಸಿಕ್ಕಿತ್ತು’ ಎಂದು ಸ್ಮರಿಸಿದರು.

‘ಪಂಚಪೀಠಾಧೀಶರ ಸಾನ್ನಿಧ್ಯದಲ್ಲಿ ಸಮಾಜದಿಂದ ಯಡಿಯೂರಪ್ಪ ಅವರಿಗೆ ಗೌರವ ಸಮರ್ಪಿಸಲಾಗುತ್ತಿದೆ. ಆದ್ದರಿಂದ ಕಾರ್ಯಕ್ರಮಕ್ಕೆ ವಿಶೇಷ ಅರ್ಥವಿದೆ. ಮುಖ್ಯಮಂತ್ರಿಯಾಗಿ ಈ ನಾಡನ್ನು ಯಾರೂ ಕಂಡು ಕೇಳದ ರೀತಿಯಲ್ಲಿ ಅಭಿವೃದ್ಧಿ ಮಾಡಿದ ಶ್ರೇಯ ಯಡಿಯೂರಪ್ಪ ಅವರದ್ದು’ ಎಂದು ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವದ ಗೌರವಾಧ್ಯಕ್ಷ ಎಸ್.ರುದ್ರೇಗೌಡ ಹೇಳಿದರು.

‘ಸರ್ವಸ್ಪರ್ಶಿ ಸಮಾಜಗಳಿಗೆ ಶಕ್ತಿ ತುಂಬಿದವರು ಯಡಿಯೂರಪ್ಪ. ಹೀಗಾಗಿಯೇ ಅವರಿಗೆ ಆಶೀರ್ವಾದ ಮಾಡಲು ಪಂಚಪೀಠಾಧೀಶರರು ಬಂದಿದ್ದಾರೆ’ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು. ‘ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು’, ‘ಯಡಿಯೂರಪ್ಪ ಅವರ ಜೋಳಿಗೆ ಊರಿಗೆಲ್ಲ ಹೋಳಿಗೆ’ ಎಂದು ನೆರೆದವರಿಂದ ಘೋಷಣೆಗಳನ್ನು ಕೂಗಿಸಿದರು.

‘ಭಾಗ್ಯಲಕ್ಷ್ಮಿ, ಸಂಧ್ಯಾಸುರಕ್ಷೆ, ರೈತರಿಗೆ ಶೇ 1ರ ಬಡ್ಡಿದರದಲ್ಲಿ ಸಾಲ, ಭಾಗ್ಯಲಕ್ಷ್ಮಿ ಯೋಜನೆ, 108 ಆರೋಗ್ಯ ಕವಚ ಸೇರಿದಂತೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಕಾರ್ಯಕ್ರಮದ ಮೂಲಕ ಶಿವಮೊಗ್ಗಕ್ಕೆ ಅಭಿವೃದ್ಧಿಯ ಮಹಾಪೂರ ಹರಿಸಿದವರು ಯಡಿಯೂರಪ್ಪ’ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹರತಾಳು ಹಾಲಪ್ಪ, ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ, ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಎಸ್.ಎನ್.ಜ್ಯೋತಿಪ್ರಕಾಶ್, ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಸಮಿತಿಯ ಸಂಚಾಲಕರಾದ ಎಸ್.ಪಿ.ದಿನೇಶ್, ಬಳ್ಳೇಕೆರೆ ಸಂತೋಷ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-42-882807889

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.