ಶಿವಮೊಗ್ಗ: ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ಗಳು ಶನಿವಾರ ಬಿಎಸ್ವೈ ಅಭಿಮಾನೋತ್ಸವಕ್ಕಾಗಿ ಚಿತ್ರದುರ್ಗದತ್ತ ಮುಖ ಮಾಡಿದ್ದರಿಂದ ಜಿಲ್ಲೆಯಲ್ಲಿ ಸಾವಿರಾರು ಪ್ರಯಾಣಿಕರು ಇಡೀ ದಿನ ಬಸ್ ನಿಲ್ದಾಣಗಳಲ್ಲಿಯೇ ಕಾಲ ಕಳೆಯಬೇಕಾಯಿತು.

ಬಸ್ಗಳ ನಿರೀಕ್ಷೆಯಲ್ಲಿ ಬೆಳಿಗ್ಗೆಯಿಂದಲೇ ಕಾದು ಕುಳಿತ ಪ್ರಯಾಣಿಕರು ಮಧ್ಯಾಹ್ನದ ಹೊತ್ತು ಬಿಸಿಲ ಬೇಗೆಯಿಂದ ಹೈರಾಣಾದರು. ಮಕ್ಕಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಬಿಸಿಲು, ಸೆಕೆಯಿಂದ ತೀವ್ರ ಬಾಧೆಗೆ ಒಳಗಾದರು. ಬಂದ ಬೆರಳೆಣಿಕೆಯ ಬಸ್ಗಳನ್ನು ಹತ್ತಲು ನೂಕು–ನುಗ್ಗಲಿನ ತಾಪತ್ರಯಕ್ಕೆ ಸಿಲುಕಿದರು.

‘ಕಾರ್ಯಕ್ರಮಕ್ಕೆ ಬಸ್ ಕಳುಹಿಸಿದ್ದು ತಪ್ಪಲ್ಲ. ಆದರೆ, ಇಂತಹ ವಿಶೇಷ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ತೆರಳಲಿರುವ ಬಸ್ಗಳ ಸಂಖ್ಯೆ ಹಾಗೂ ಯಾವ ಮಾರ್ಗದಲ್ಲಿ ಬಸ್ ಸಂಚಾರಕ್ಕೆ ವ್ಯತ್ಯಯ ಆಗಲಿದೆ ಎಂಬುದರ ಬಗ್ಗೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಒಂದು ದಿನ ಮುಂಚಿತವಾಗಿಯೇ ಸಾರ್ವಜನಿಕ ಪ್ರಕಟಣೆ ನೀಡಿದ್ದರೆ ಈ ಸಮಸ್ಯೆಯೇ ಇರುತ್ತಿರಲಿಲ್ಲ. ಪ್ರಯಾಣವನ್ನು ಮುಂದೂಡುತ್ತಿದ್ದೆವು. ಜನರಿಗೆ ಸಂಕಷ್ಟ ಆಗಲಿದೆ ಎಂಬುದು ಗೊತ್ತಿದ್ದರೂ ಅಧಿಕಾರಿಗಳು ಮೌನ ವಹಿಸಿದ್ದಾರೆ’ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು. ಕೆಎಸ್ಆರ್ಟಿಸಿಯ ಉದಾಸೀನಕ್ಕೆ ಹಿಡಿಶಾಪ ಹಾಕಿದರು.

ಶಿವಮೊಗ್ಗ ಜಿಲ್ಲೆಯಿಂದ ದೊಡ್ಡ ಸಂಖ್ಯೆಯ ಜನರು ಚಿತ್ರದುರ್ಗಕ್ಕೆ ತೆರಳಿದ್ದರು. ಬಿಜೆಪಿ ಕಾರ್ಯಕರ್ತರು, ಯಡಿಯೂರಪ್ಪ ಅವರ ಅಭಿಮಾನಿಗಳು ಅಭಿಮಾನೋತ್ಸವದಲ್ಲಿ ಭಾಗವಹಿಸಿದ್ದರು. ಇದಕ್ಕಾಗಿ ಖಾಸಗಿ ಹಾಗೂ ಕೆಎಸ್ಆರ್ಟಿಸಿ ಸೇರಿ 350ಕ್ಕೂ ಹೆಚ್ಚು ಬಸ್ಗಳ ವ್ಯವಸ್ಥೆ ಮಾಡಲಾಗಿತ್ತು.

‘ಕೆಎಸ್ಆರ್ಟಿಸಿ ಶಿವಮೊಗ್ಗ ವಿಭಾಗದಿಂದ (ಶಿವಮೊಗ್ಗ, ಶಿಕಾರಿಪುರ, ಸಾಗರ, ಹೊನ್ನಾಳಿ, ಭದ್ರಾವತಿ ಡಿಪೋ ಸೇರಿ) 85 ಬಸ್ಗಳನ್ನು ಸಮಾವೇಶಕ್ಕೆ ಕೊಡಲಾಗಿದೆ. ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಹಾವೇರಿ ಜಿಲ್ಲೆಗಳಿಂದಲೂ ಬಸ್ ಬಿಟ್ಟಿರುವುದರಿಂದ ಅಲ್ಲಿಂದ ಶಿವಮೊಗ್ಗಕ್ಕೆ ಬರುವ ಬಸ್ಗಳ ಸಂಖ್ಯೆ ಕಡಿಮೆ ಆಗಿದೆ. ಹೀಗಾಗಿ ಬಸ್ಗಳ ಕೊರತೆಯಾಗಿದೆ. ಶಿವಮೊಗ್ಗದಿಂದ ಹಗಲು ಹೊತ್ತು ಬೆಂಗಳೂರಿಗೆ ತೆರಳುವ ಬಸ್ಗಳ ಸಂಖ್ಯೆ ಕಡಿಮೆ ಆಗಿದ್ದು, ಆ ಮಾರ್ಗದಲ್ಲಿ ಮಾತ್ರ ಸಂಚಾರಕ್ಕೆ ವ್ಯತ್ಯಯ ಆಗಿದೆ. ಗ್ರಾಮೀಣ ಸಾರಿಗೆ ಬಸ್ಗಳು ಎಂದಿನಂತೆ ಓಡಾಟ ನಡೆಸಿವೆ. ಪ್ರತೀ ಶನಿವಾರ ಸಹಜವಾಗಿಯೇ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ. ಹೀಗಾಗಿ ದಟ್ಟಣೆ ಹೆಚ್ಚಾಗಿದೆ’ ಎಂದು ಸಾರಿಗೆ ಸಂಸ್ಥೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲೂ ಅದೇ ಪರಿಸ್ಥಿತಿ ಇತ್ತು. ನಿಲ್ದಾಣಕ್ಕೆ ಬೆರಳೆಣಿಕೆಯಷ್ಟು ಬಸ್ಗಳು ಮಾತ್ರ ಬಂದು ಹೋಗುವುದು ಕಂಡುಬಂದಿತು. ಹಾಗಾಗಿ ಬಸ್ಗೆ ಕಾದು ಕುಳಿತವರ ಸಂಖ್ಯೆ ಹೆಚ್ಚಳವಾಗಿತ್ತು. ಕೆಲವು ಮಾರ್ಗಗಳಿಗೆ ತೆರಳಲು ಗಂಟೆಗೊಂದು ಬಸ್ ಮಾತ್ರ ಬಂದು ಹೋದವು. ಪ್ಲಾಟ್ಫಾರಂಗೆ ಬಸ್ ಬಂದು ನಿಲ್ಲುತ್ತಿದ್ದಂತೆ ಸೀಟು ಹಿಡಿಯಲು ಜನರ ನೂಕುನುಗ್ಗಲು ಕಂಡುಬಂದಿತು.

ನಗರ ಸಾರಿಗೆ ಬಸ್ಗಳ ಸಂಖ್ಯೆಯೂ ಕಡಿಮೆ ಇದ್ದ ಕಾರಣ ಜನರು ಅನಿವಾರ್ಯವಾಗಿ ಆಟೊ, ರ್ಯಾಪಿಡೋ ಬೈಕ್ಗಳನ್ನು ಆಶ್ರಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.