ಶಿವಮೊಗ್ಗ: ರಾಜ್ಯದಲ್ಲಿ ಜನಗಣತಿ ಕಾರ್ಯ ಪ್ರಗತಿಯಲ್ಲಿದೆ. ಅದರ ಭಾಗವಾಗಿ ಮೊದಲ ಹಂತದಲ್ಲಿ ನಡೆಯುತ್ತಿರುವ ಮನೆಗಣತಿಯನ್ನು ಮೇ 15ಕ್ಕೆ ಪೂರ್ಣಗೊಳಿಸಬೇಕಿದೆ. ಆದರೆ ನಿಗದಿತ ಗುರಿಗಿಂತ 12 ದಿನಗಳ ಮೊದಲೇ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈ ಕಾರ್ಯ ಪೂರ್ಣಗೊಂಡಿದೆ.

ರಾಜ್ಯದ 13 ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಮೇ 3ರ ರಾತ್ರಿ 10ರ ವೇಳೆಗೆ ಒಟ್ಟಾರೆ ಶೇ 59ರಷ್ಟು ಮನೆಗಣತಿ ಕಾರ್ಯ ಪೂರ್ಣಗೊಂಡಿದೆ. ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ 579 ಬ್ಲಾಕ್ಗಳಲ್ಲೂ ಮನೆಗಣತಿ ಕಾರ್ಯ ಪೂರ್ಣಗೊಂಡಿದ್ದು, ಶೇ 100ರಷ್ಟು ಸಾಧನೆಯ ಮೂಲಕ ರಾಜ್ಯದಲ್ಲಿ ಮೊದಲು ಮನೆಗಣತಿ ಕಾರ್ಯ ಮುಗಿಸಿದ ಶ್ರೇಯ ಶಿವಮೊಗ್ಗ ಪಾಲಿಕೆಗೆ ಸಂದಿದೆ.

ರಾಜ್ಯದ ಎಲ್ಲ 13 ಪಾಲಿಕೆಗಳ ವ್ಯಾಪ್ತಿಯಲ್ಲಿ ಒಟ್ಟು 11,467 ಬ್ಲಾಕ್ಗಳಿದ್ದು, ಅವುಗಳಲ್ಲಿ ಈವರೆಗೆ 6,766 (ಶೇ 59) ಪೂರ್ಣಗೊಂಡಿವೆ. ಇನ್ನು 4,580 ಕಡೆ ಕೆಲಸ ಪ್ರಗತಿಯಲ್ಲಿದ್ದರೆ, 121 ಕಡೆ ಕಾರ್ಯ ಇನ್ನೂ ಆರಂಭವಾಗಬೇಕಿದೆ.

‘ಶಿವಮೊಗ್ಗ ಪಾಲಿಕೆ ವ್ಯಾಪ್ತಿಯಲ್ಲಿ ಮನೆಗಣತಿಗೆ ಶಿಕ್ಷಣ ಇಲಾಖೆಯ 800 ಸಿಬ್ಬಂದಿಯನ್ನು ನೇಮಕ ಮಾಡಲಾಗಿತ್ತು. ಅದರಲ್ಲಿ ಗಣತಿದಾರರು, ಮೇಲ್ವಿಚಾರಕರು, ಫೀಲ್ಡ್ ಟ್ರೈನರ್ಸ್, ಐಟಿ ಸಿಬ್ಬಂದಿ ಒಳಗೊಂಡಿದ್ದಾರೆ. ಅವರಿಗೆ ಪಾಲಿಕೆಯ ಕಂದಾಯ, ತಾಂತ್ರಿಕ ಹಾಗೂ ಆರೋಗ್ಯ ಶಾಖೆಗಳ ಎಲ್ಲ ಸಿಬ್ಬಂದಿಯೂ ನೆರವಾಗಿದ್ದಾರೆ’ ಎಂದು ಪ್ರಧಾನ ಗಣತಿ ಅಧಿಕಾರಿಯೂ ಆದ ಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ ಹೇಳುತ್ತಾರೆ.

ಮೂರು ತಿಂಗಳ ಪೂರ್ವಸಿದ್ಧತೆ: ಜನಗಣತಿಯ ಭಾಗವಾದ ಮನೆಗಣತಿಗೆ ಜನವರಿಯಿಂದಲೇ ಸಿದ್ಧತೆ ನಡೆಸಿದ್ದೆವು. ಅದಕ್ಕಾಗಿ ಗೂಗಲ್ ಅರ್ಥ್ ಮೂಲಕ ಪಾಲಿಕೆ ವ್ಯಾಪ್ತಿಯ 35 ವಾರ್ಡ್ಗಳ ಇಮೇಜ್ (ಚಿತ್ರ) ಪಡೆದಿದ್ದೆವು. ಅವುಗಳನ್ನು ಬಳಸಿಕೊಂಡು ತಲಾ 150, 250, 400 ಹೀಗೆ ಮನೆಗಳ ಪಟ್ಟಿ ಮಾಡಿಕೊಂಡು ಅದಕ್ಕೆ ಜಿಯೋ ಫೆನ್ಸಿಂಗ್ ಮೂಲಕ ಮಾರ್ಕಿಂಗ್ ಮಾಡಿಕೊಂಡಿದ್ದೆವು ಎಂದು ಮಾಯಣ್ಣಗೌಡ ತಿಳಿಸಿದರು.

ನಂತರ ಪಾಲಿಕೆಯ ಹೆಲ್ತ್ ಇನ್ಸ್ಪೆಕ್ಟರ್, ಎಂಜಿನಿಯರ್ಸ್, ಆರ್ಐ, ಬಿಲ್ಕಲೆಕ್ಟರ್ಗಳು ಸೇರಿ ಜಿಯೋ ಟ್ಯಾಗ್ ಆಧರಿಸಿ ಇಡೀ ನಗರ ಸುತ್ತಾಡಿ ಮನೆಗಳ ಪಟ್ಟಿ ಸಿದ್ಧಪಡಿಸಿದ್ದರು. ಇದರಿಂದ ಗಣತಿದಾರರಿಗೆ ಅನಗತ್ಯ ಅಲೆದಾಟ ತಪ್ಪಿತು. ಇಡೀ ಪಟ್ಟಣವನ್ನು 700 ಭಾಗ ಮಾಡಿ, ಗಣತಿದಾರರು ಯಾವ ದಿಕ್ಕಿನಿಂದ ಹೋಗಿ ಯಾವ ದಿಕ್ಕಿಗೆ ಬರಬೇಕು. ಸುಲಭವಾಗಿ ಓಡಾಟ ಹೇಗೆ ಸಾಧ್ಯ ಎಂಬುದನ್ನು ಮೊದಲೇ ಯೋಜನೆ ಸಿದ್ಧಪಡಿಸಿದ್ದೆವು. ಗಣತಿದಾರರಿಗೆ ನೆರವಾಗಲು ರೂಟ್ ಆಫಿಸರ್ಸ್ ಜೊತೆಗೆ ಪ್ರತಿ ಆರು ಬ್ಲಾಕ್ಗೆ ಒಬ್ಬರು ಸೂಪರ್ವೈಸರ್ ನೇಮಕ ಮಾಡಿದ್ದು, 100 ವಾಟ್ಸ್ಆ್ಯಪ್ ಗುಂಪು ರಚಿಸಿಕೊಂಡು ಪ್ರತಿಯೊಂದು ಸಂಗತಿಯನ್ನೂ ಹಂಚಿಕೊಳ್ಳುತ್ತಿದ್ದೆವು. ಇದೆಲ್ಲವೂ ಕಾರ್ಯ ಶೀಘ್ರ ಪೂರ್ಣಗೊಳ್ಳಲು ನೆರವಾಗಿದೆ. ಶಿವಮೊಗ್ಗ ಪಾಲಿಕೆ ವ್ಯಾಪ್ತಿಯಲ್ಲಿ 579 ಬ್ಲಾಕ್ಗಳಲ್ಲಿ 54 ಸ್ಲಮ್ ಬ್ಲಾಕ್ಗಳು ಒಳಗೊಂಡಿವೆ ಎನ್ನುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-42-126136015

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.