ಶಿವಮೊಗ್ಗ: ನಗರದ ಪಿ.ಇ.ಎಸ್ ಐ.ಟಿ.ಎಂ ಸಂಸ್ಥೆಯಿಂದ ಸಿಇಟಿ ಪರೀಕ್ಷೆ ಎದುರಿಸಲಿರುವ ವಿದ್ಯಾರ್ಥಿಗಳಿಗಾಗಿ ಮಾರ್ಚ್ 30ರಂದು ಅಣಕು ಪರೀಕ್ಷಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿದ್ಯಾರ್ಥಿಗಳಿಗೆ ನೈಜ ಪರೀಕ್ಷೆಯ ಅನುಭವ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಪ್ರಾಂಶುಪಾಲ ಡಿ.ಆರ್. ಸ್ವಾಮಿ ಸ್ವಾಗತಿಸಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ರಚನಾತ್ಮಕ ಸಿದ್ಧತೆ, ನಿರಂತರ ಶ್ರಮ ಹಾಗೂ ಮೌಲ್ಯಮಾಪನದ ಮಹತ್ವ ವಿವರಿಸಿದರು.

‘ಟೆಸ್ಟ್ ಮೈ ಸ್ಕಿಲ್ಸ್’ ವೇದಿಕೆಯ ಮೂಲಕ ನಡೆಸಲಾಗುವ ಈ ಅಣಕು ಪರೀಕ್ಷೆಯು ವಿದ್ಯಾರ್ಥಿಗಳ ಕಲಿಕೆಯ ಅಂತರ ಗುರುತಿಸಲು ಮತ್ತು ಪರೀಕ್ಷಾ ತಂತ್ರ ಪರಿಷ್ಕರಿಸಲು ಸಹಕಾರಿ ಎಂದು ತಿಳಿಸಿದರು.

ಟೆಕ್ನಾಲಜೀಸ್ನ ಸಹ ಸಂಸ್ಥಾಪಕ ಸಾರಂಗ್ ಅವರು ಎಐ ಚಾಲಿತ ವೇದಿಕೆಯ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಿ.ಇ.ಎಸ್ ಟ್ರಸ್ಟ್ನ ರಿಜಿಸ್ಟ್ರಾರ್ ಆರ್.ನಾಗರಾಜ, ವಿದ್ಯಾರ್ಥಿಗಳು ತಮ್ಮ ಗುರಿ ನಿಗದಿಪಡಿಸಿಕೊಂಡು ಶಿಸ್ತುಬದ್ಧ ಅಧ್ಯಯನ ಮತ್ತು ಸಮಯದ ನಿರ್ವಹಣೆಯ ಬಗ್ಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಶಿವಮೊಗ್ಗ, ಬೆಂಗಳೂರು ಸೇರಿದಂತೆ ಬೇರೆ ಬೇರೆ ಕಡೆಯಿಂದ 400ಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಉತ್ಸಾಹದಿಂದ ಭಾಗವಹಿಸಿದ್ದರು. ಉಪ ಪ್ರಾಂಶುಪಾಲ ಪ್ರೊ.ಆರ್. ಶೇಖರ್ ವಂದಿಸಿ, ಪೂಜಾ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-42-598455788

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.