ಶಿವಮೊಗ್ಗ: ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಕಡೇಕೊಪ್ಪ ಪ್ರತಿಷ್ಠಾನದಿಂದ ಏ. 14ರಿಂದ ಮೇ 1ರವರೆಗೆ ‘ಅಜ್ಜಿಯ ಅಂಗಳ ಅಜ್ಜನ ಜಗುಲಿ’ ಮಕ್ಕಳ ಬೇಸಿಗೆ ರಂಗ ಶಿಬಿರ ಆಯೋಜಿಸಲಾಗಿದೆ.

ಜಿ.ಆರ್. ಲವ ಅವರ ನಿರ್ದೇಶನದಲ್ಲಿ ನಡೆಯುವ ಈ ಶಿಬಿರವು ಮಕ್ಕಳ ಶೈಕ್ಷಣಿಕ ಹಾಗೂ ಬೌದ್ಧಿಕ ಸಾಮರ್ಥ್ಯ ವೃದ್ಧಿಸುವ ಉದ್ದೇಶವನ್ನು ಹೊಂದಿದೆ. ಶಿಬಿರದಲ್ಲಿ ಹಳ್ಳಿಯ ಆಟಗಳು, ಹಾಡು, ನೃತ್ಯ, ಚಿತ್ರಕಲೆ, ಕ್ರಾಫ್ಟ್, ಏರೋಬಿಕ್ಸ್, ಯೋಗ ಹಾಗೂ ರಂಗಾಟಗಳ ಮೂಲಕ ತರಬೇತಿ ನೀಡಲಾಗುತ್ತದೆ.

ಶಿಬಿರದ ಅವಧಿಯಲ್ಲಿ ತರಬೇತಿ ಪಡೆದ ಮಕ್ಕಳಿಂದ ಮೇ 1ರಂದು ರಂಗಾಯಣ ಶಿವಮೊಗ್ಗದಲ್ಲಿ ನಾಟಕ, ರಂಗಗೀತೆ ಸೇರಿದಂತೆ ವಿವಿಧ ಕಲಾಪ್ರದರ್ಶನಗಳ ಆಯೋಜಿಸಲಾಗುತ್ತದೆ. ಒಟ್ಟು 50 ಮಕ್ಕಳಿಗೆ ಮಾತ್ರ ಅವಕಾಶವಿದೆ. ಆಸಕ್ತರು ಮೊ.ಸಂ: 9449201919ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-42-1112746240

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.