ಶಿವಮೊಗ್ಗ: ರಂಗಾಯಣವು ಮಕ್ಕಳಿಗಾಗಿ ರಂಗ ತರಬೇತಿ ಶಿಬಿರ ‘ಚಿಣ್ಣರ ಸಿಹಿಮೊಗೆ–2026’ ಆಯೋಜಿಸಿದೆ. ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಏ. 14 ರಿಂದ ಮೇ 3 ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಶಿಬಿರ ನಡೆಯಲಿದೆ.

ಒಟ್ಟು 150 ಮಕ್ಕಳಿಗೆ ಅವಕಾಶವಿದ್ದು, ಮೊದಲು ಬಂದವರಿಗೆ ಮೊದಲ ಆದ್ಯತೆ. ಮೊದಲು ಟೋಕನ್ ಪಡೆದವರು ಏ. 9 ರಂದು ಶಿವಮೊಗ್ಗದ ರಂಗಾಯಣ ಕಚೇರಿಯಲ್ಲೇ ಅರ್ಜಿ ಭರ್ತಿ ಮಾಡಿ ಪ್ರವೇಶ ಶುಲ್ಕ ₹3,000ವನ್ನು ನಗದು ರೂಪದಲ್ಲಿ ಪಾವತಿಸಿ ರಶೀದಿ ಪಡೆಯಬೇಕು.

ಪ್ರವೇಶ ಪಡೆಯಲು 2 ಪಾಸ್ಪೋರ್ಟ್ ಅಳತೆಯ ಫೋಟೋ ಮತ್ತು ಜನನ ಪ್ರಮಾಣ ಪತ್ರ ಅಥವಾ ಆಧಾರ್ ಕಾರ್ಡ್ ಪ್ರತಿ ಕಡ್ಡಾಯವಾಗಿದ್ದು, ಮಕ್ಕಳ ವಯೋಮಿತಿ 8 ರಿಂದ 13 ವರ್ಷದೊಳಗಿರಬೇಕು.

ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ರಂಗಾಯಣ ಕಚೇರಿ, ಸುವರ್ಣ ಸಂಸ್ಕೃತಿ ಭವನ, ಹೆಲಿಪ್ಯಾಡ್ ಹತ್ತಿರ, ಅಶೋಕನಗರ, ಶಿವಮೊಗ್ಗ ಇವರನ್ನು ಅಥವಾ ಕಚೇರಿ ಮೊ. ಸಂ; 08182–256353ಕ್ಕೆ ಸಂಪರ್ಕಿಸಬಹುದು ಎಂದು ರಂಗಾಯಣ ಆಡಳಿತಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-42-455449035

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.